Monday, September 28, 2026
ಸುದ್ದಿ

ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ-ಮಗ -ಕಹಳೆ ನ್ಯೂಸ್

ಬೆಂಗಳೂರು: ಸಾವಿನ ದವಡೆಯಿಂದ ತಾಯಿ ಹಾಗೂ ಮಗ ಅದೃಷ್ಟವಶಾತ್ ಪಾರಾಗಿರುವ ಎದೆ ಝಲ್ಲೆನಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತಾಯಿ ಹಾಗೂ ಬಾಲಕ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಹಿಂದಿನಿಂದ ಪಿಕಪ್ ವಾಹನವೊಂದು ಬರುತ್ತಿತ್ತು. ಏಕಾಏಕಿ ಎರಡು ವಾಹನಗಳು ಸೈಡ್‌ನಿಂದ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ತಾಯಿ, ಮಗ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.

ಜಾಹೀರಾತು

ಇಬ್ಬರೂ ವಾಹನದ ಹಿಂಬದಿಯ ಟೈರ್ ಪಕ್ಕ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು