Monday, August 10, 2026
ರಾಜ್ಯಸುದ್ದಿ

ಬ್ರೇಕಪ್‌ಗೆ ನಿರ್ಧರಿಸಿದ್ದಕ್ಕೆ ಕೊಲೆ ಶಂಕೆ – ಪ್ರಿಯತಮೆ ಸಾವು, ಭಾರತೀಯ ಮೂಲದ ಪ್ರಿಯಕರ ಅರೆಸ್ಟ್ -ಕಹಳೆ ನ್ಯೂಸ್

ವಾಷಿಂಗ್ಟನ್: ಅಮೆರಿಕದ  ಅರಿಝೋನಾದಲ್ಲಿ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಭಾರತೀಯ ಮೂಲದ ಪ್ರಿಯಕರನನ್ನು ಪೊಲೀಸರು ಜರ್ಮನಿಯಲ್ಲಿ  ಬಂಧಿಸಿದ್ದಾರೆ.
ಟಕ್ಸನ್‌ನಲ್ಲಿರುವ ಅರಿಝೋನಾ ವಿಶ್ವವಿದ್ಯಾಲಯದ ಸಮೀಪದ ಅಪಾರ್ಟ್ಮೆಂಟ್‌ನಲ್ಲಿ ಕಾಲೇಜು ವಿದ್ಯಾರ್ಥಿನಿ ಜುಲಿಸ್ಸಾ ರೂಬಿ ಸಲಾಜರ್ ಮೃತದೇಹ ಪತ್ತೆಯಾಗಿತ್ತು. ಆಕೆಯ ಪ್ರಿಯಕರ ಭಾರತೀಯ ಮೂಲದ ವರುಣ್ ಬಚ್ಚಿಗಾರಿ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿತ್ತು. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಸದ್ಯ ಬಂಧಿಸಲಾಗಿದೆ.

ಜಾಹೀರಾತು

ವಿದ್ಯಾರ್ಥಿನಿಯ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಗೆಳತಿಯನ್ನು ಹತ್ಯೆಗೈದು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಯುವತಿಯ ಮೊಬೈಲ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಕಳವು ಮಾಡಿದ್ದ. ಅಲ್ಲದೇ ಅವರ ತಾಯಿಗೆ ನಿರಂತರ ಮಸೇಜ್‌ಗಳನ್ನು ಕಳುಹಿಸಿದ್ದ. ತನಿಖೆ ನಡೆಸಿದ ಪೊಲೀಸರು, ಆರೋಪಿಯು ಟಕ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೂಸ್ಟನ್‌ಗೆ ವಿಮಾನ ಹತ್ತಿ, ಅಲ್ಲಿಂದ ಬರ್ಲಿನ್‌ಗೆ ತೆರಳುವ ಮತ್ತೊಂದು ವಿಮಾನದ ಮೂಲಕ ಪರಾರಿಯಾಗಿದ್ದಾಗಿ ಪತ್ತೆ ಹಚ್ಚಿದ್ದಾರೆ. ವರದಿಗಳ ಪ್ರಕಾರ, ಆರೋಪಿ ಭಾರತಕ್ಕೆ ಪರಾರಿಯಾಗಲು ಯತ್ನಿಸಿದ್ದ ಎಂದು ತಿಳಿದುಬಂದಿದೆ

ಮೃತಳ ರೂಮ್‌ಮೇಟ್‌ಗಳ ಪ್ರಕಾರ, ಸಲಾಜರ್ ಮೇಲೆ ವರುಣ್ ಹಲ್ಲೆ ನಡೆಸುತ್ತಿದ್ದ. ಹೀಗಾಗಿ ಅವಳು ಆತನೊಂದಿಗೆ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಇದೇ ಕೊಲೆಗೆ ಕಾರಣ ಎಂದು ಶಂಕಿಸಿದ್ದಾರೆ. ಅಲ್ಲದೇ ಕೊಲೆಗೂ ಮುನ್ನ ಆಕೆಯ ಕೊಠಡಿಯಿಂದ ಜೋರಾಗಿ ಕಿರುಚಾಡುವ ಶಬ್ದ ಕೇಳಿಸುತ್ತಿತ್ತು. ಆಗ ಕೇಳಿದಾಗ, ಚೆನ್ನಾಗಿರುವುದಾಗಿ ಸಲಾಜರ್ ತಿಳಿಸಿದ್ದಳು.

ಆರೋಪಿ ವರುಣ್ ಬಚ್ಚಿಗಾರಿ ಅರಿಝೋನಾ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್ ಅನಾಲಿಟಿಕ್ಸ್ ವಿದ್ಯಾರ್ಥಿಯಾಗಿದ್ದನು. ಆದರೆ, ಗಲಾಟೆಯೊಂದರ ಹಿನ್ನೆಲೆಯಲ್ಲಿ ಆತನನ್ನು ಕಾಲೇಜಿನಿಂದ ಹೊರಹಾಕಲಾಗಿತ್ತು. ವರದಿಗಳ ಪ್ರಕಾರ, ಈತನ ಮೇಲೆ ಈ ಹಿಂದೆ ಕೌಟುಂಬಿಕ ದೌರ್ಜನ್ಯದ ಆರೋಪಗಳಿದ್ದವು ಎಂದು ತಿಳಿದುಬಂದಿದೆ.