Monday, August 10, 2026
ಚಿಕ್ಕಮಂಗಳೂರುಜಿಲ್ಲೆಸುದ್ದಿ

ಭಾರೀ ಮಳೆಗೆ ಧರೆ ಕುಸಿದು ಮನೆಯಂಗಳಕ್ಕೆ ಬಂದ ಮಣ್ಣು : ಡೋರ್‌ ಜಾಮ್‌ – ಕಹಳೆ ನ್ಯೂಸ್

ಚಿಕ್ಕಮಗಳೂರು: ಮಲೆನಾಡಲ್ಲಿ ಮತ್ತೆ ಗಾಳಿ ಮಳೆಯ ಅಬ್ಬರ ಜೋರಾಗಿದೆ. ಮಳೆಯ ಅಬ್ಬರಕ್ಕೆ ಕೊಪ್ಪ (Koppa) ತಾಲೂಕಿನ ಅಂಬಳಿಕೆ ಗ್ರಾಮದಲ್ಲಿ ಧರೆ ಕುಸಿದು, ಭಾರೀ ಪ್ರಮಾಣದ ಮಣ್ಣು ಮನೆಯೊಂದರ  ಬಾಗಿಲಿಗೆ ತಡೆದು ನಿಂತಿದೆ.

ಜಾಹೀರಾತು

ಗ್ರಾಮದ ಪವನ್ ಎಂಬವರ ಮನೆ ಬಳಿ ಧರೆ ಕುಸಿದು ಮಣ್ಣು ಮನೆಯಂಗಳಕ್ಕೆ ಬಂದಿದೆ. ಮಣ್ಣು ಮನೆ ಬಾಗಿಲಿಗೆ ಬಂದ ಪರಿಣಾಮ ಮಣ್ಣಿನಿಂದ ಲಾಕ್ ಬಾಗಿಲು ಜಾಮ್‌ ಆಗಿದೆ. ಅಲ್ಲದೇ ಮನೆಯೊಳಗೆ ಕೆಸರು ನೀರು ನುಗ್ಗಿದೆ. ಮಳೆ ಮುಂದುವರಿದಿದ್ದು, ನಿರಂತರವಾಗಿ ಮಣ್ಣು ಕುಸಿಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತಷ್ಟು ಧರೆ ಕುಸಿದರೆ ಮಣ್ಣು ಮನೆ ಮೇಲೆ ಬೀಳುವ ಆತಂಕ ಎದುರಾಗಿದೆ. ಭಯದಿಂದ ಕುಟುಂಬಸ್ಥರು ಮನೆಯ ಹೊರಗೆ ಬಂದು ನಿಂತಿದ್ದಾರೆ.