
ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಭೂಕುಸಿತ ಅಪಾಯ ಎದುರಿಸುತ್ತಿರುವ ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಪೆರಾಲ್ದಬೆಟ್ಟು ಹೇಷ್ಮೆ ಪ್ರದೇಶಕ್ಕೆ ಭೇಟಿ ನೀಡಿ ಅಪಾಯದ ಗಂಭೀರತೆಯನ್ನು ಅರಿತುಕೊಂಡರು.
ಈ ಸಂದರ್ಭದಲ್ಲಿ ಭೂಕುಸಿತದಿಂದ ಅಪಾಯ 3 ಎದುರಿಸುತ್ತಿರುವ ಅಲ್ಲೇ ಸಮೀಪದಲ್ಲಿ ವಾಸವಾಗಿರುವ ಹರಿಪ್ರಸಾದ್ ಹಾಗೂ ಸುಮಿತ್ರಾ ಕುಟುಂಬಗಳನ್ನು ಕಂಡು ಮಾತನಾಡಿಸಿದ ಸಚಿವರು, ಅವರಿಗೆ ಎಲ್ಲಾ ರೀತಿಯ ಸಹಾಯದ ಭರವಸೆಯನ್ನು ನೀಡಿದರು.
ಗ್ರಾಮ ಪಂಚಾಯಿತಿಯಿಂದ ಮನೆ ತೆರವು ಮಾಡಿ ರೆಂಜಾಳ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚನೆ ಬಂದಿರುವುದನ್ನು ತಿಳಿಸಿದ ಹರಿಪ್ರಸಾದ್, ಶಾಲೆಯಲ್ಲಿ ವಾಸ ಮಾಡುವುದಕ್ಕಿರುವ ಸಮಸ್ಯೆಯನ್ನು ಹೇಳಿಕೊಂಡರು. ತಮಗೆ ಗ್ರಾಮ ಪಂಚಾಯಿತಿ ವತಿಯಂದ ಸೂಕ್ತ ವ್ಯವಸ್ಥೆ ಮಾಡುವಂತೆ ಅವರು ಸಚಿವರಿಗೆ ಮನವಿ ಮಾಡಿದರು. ಮಳೆಗಾಲ ಮುಗಿಯುವವರೆಗೆ ಅವರಿಗೆ ಪ್ರತ್ಯೇಕ ವಾಸ್ತವ್ಯದ ವ್ಯವಸ್ಥೆ ಕಲ್ಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.











