Sunday, August 9, 2026
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಬಿಡದಿ ಟೌನ್‌ಶಿಪ್ ವಿರುದ್ಧ ಪಾದಯಾತ್ರೆಗೆ ಮುನ್ನ ದೇವೇಗೌಡರ ಆಶೀರ್ವಾದ ಪಡೆದ ನಿಖಿಲ್ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಉದ್ದೇಶಿತ ರೈತ ವಿರೋಧಿ ಬಿಡದಿ ಟೌನ್‌ಶಿಪ್   ಯೋಜನೆಯನ್ನು ವಿರೋಧಿಸಿ ನಾಳೆ ಆರಂಭವಾಗಲಿರುವ ಬೃಹತ್ ಪಾದಯಾತ್ರೆಗೆ ಮುನ್ನ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್‌.ಡಿ.ದೇವೇಗೌಡರ ಆಶೀರ್ವಾದ ಪಡೆದರು.

ಜಾಹೀರಾತು

ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರ (H.D.Deve Gowda) ಭೇಟಿ ಮಾಡಿ ಪಾದಯಾತ್ರೆಯ ವಿವರಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಿಖಿಲ್ ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರೈತರ ಹಿತಕ್ಕಾಗಿ, ರೈತರ ಭೂಮಿಯನ್ನು ಉಳಿಸಲು ಈ ಹೋರಾಟ ಮಾಡುತ್ತಿದ್ದೀರಿ. ದೃಢವಾಗಿ ನಿಂತು ಹೋರಾಡಿ. ಜನರ ಬೆಂಬಲ ನಿಮ್ಮೊಂದಿಗಿದೆ ಎಂದು ದೇವೇಗೌಡರು ನಿಖಿಲ್ ಕುಮಾರಸ್ವಾಮಿ ಅವರಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.

ಇತ್ತ ಬಿಡದಿ ಟೌನ್‌ಶಿಪ್ ಪಾದಯಾತ್ರೆ ಯಶಸ್ವಿಯಾಗಲೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದರು. ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಪಾದಯಾತ್ರೆ ಯಶಸ್ಸು ಕೋರಿದರು. ಶಾಸಕ ಹೆಚ್.ಡಿ.ರೇವಣ್ಣ ಕೂಡ ಚಾಮುಂಡಿ ತಾಯಿ ದರ್ಶನ ಪಡೆದರು.