Sunday, August 9, 2026
ಸುದ್ದಿ

ಎನ್ನೆಂಸಿ, ನೇಚರ್ ಕ್ಲಬ್ ವತಿಯಿಂದ “ಟೆರ್ರವೆರ್ಸೆ- ಕಿರು ಸಸ್ಯಗಳಿಂದ ಭೂದೃಶ್ಯ ರಚನೆ” ಸ್ಪರ್ಧೆ – ಕಹಳೆ ನ್ಯೂಸ್

ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಅಗಸ್ಟ್ 06 ಗುರುವಾರದಂದು “ಟೆರ್ರವೆರ್ಸೆ- ಕಿರು ಸಸ್ಯಗಳಿಂದ ಭೂದೃಶ್ಯ ರಚನೆ” ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಮಳೆಗಾಲದಲ್ಲಿ ಸಾಕಷ್ಟು ಸಿಗುವ ಕಿರು ಸಸ್ಯಗಳಾದ ಮೋಸ್, ನೆಲಹಾಸು ಗಿಡಗಳು ಇನ್ನಿತರ ಕುಬ್ಜ ಸಸ್ಯಗಳನ್ನು ಬಳಸಿಕೊಂಡು ಸುಂದರ ದೃಶ್ಯಾವಳಿಗಳನ್ನು ಚಿತ್ರಿಸಿ ಕಿರು ಸಸ್ಯಾಲೋಕಗಳನ್ನು ನಿರ್ಮಿಸಲಾಯಿತು.

ಜಾಹೀರಾತು

ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಹಮ್ಮಿಕೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಆಂಗ್ಲಭಾಷಾ ವಿಭಾಗ ಮುಖ್ಯಸ್ಥೆ ಡಾ. ಭವ್ಯ, ಬಿಸಿಎ ವಿಭಾಗ ಮುಖ್ಯಸ್ಥೆ ದೀಕ್ಷಾ ಎಂ ಡಿ ಮತ್ತು ಕಚೇರಿ ಮುಖ್ಯ ಅಧಿಕ್ಷಕಿ ಸೌಮ್ಯಶ್ರೀ ಸಹಕರಿಸಿದರು.
ನೇಚರ್ ಕ್ಲಬ್ ಕಾರ್ಯದರ್ಶಿ ಕು. ಶ್ವೇತಾ, ಕೋಶಾಧಿಕಾರಿ ತನುಷ್, ಸ್ಪರ್ಧಾ ಸಮಿತಿ ಸಂಚಾಲಕಿ ಕು. ಅರ್ಪಿತಾ, ಸಂಯೋಜನಾ ಸಮಿತಿಯ ಇನ್ನಿತರ ಸದಸ್ಯರು ಸ್ಪರ್ಧೆಯನ್ನು ಆಯೋಜಿಸಿದ್ದರು. ಜೀವವಿಜ್ಞಾನ ವಿಭಾಗಗಳ ಉಪನ್ಯಾಸಕರಾದ ಕುಲದೀಪ್ ಪೆಲ್ತಡ್ಕ, ಕೃತಿಕಾ ಕೆ ಜೆ, ಜಿತೇಶ್ ಹೆಚ್ ಜಿ, ಕು. ಭಾವನಾ, ಕು. ಶನ್ವಿತಾ ಮತ್ತು ಅಕ್ಷತಾ ಮಾರ್ಗದರ್ಶನ ನೀಡಿದರು. ನೇಚರ್ ಕ್ಲಬ್ ನ ಸದಸ್ಯರಾದ ಜೀವವಿಜ್ಞಾನ ಪದವಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು