Sunday, August 9, 2026
ಸುದ್ದಿ

ಕೆನಡಾದಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆ; 7 ತಿಂಗಳ ಬಳಿಕ ಪ್ರಿಯಕರ ಅರೆಸ್ಟ್‌ – ಕಹಳೆ ನ್ಯೂಸ್

ಒಟ್ಟಾವೊ: ಕೆನಡಾದ ಟೊರೊಂಟೊದಲ್ಲಿ  ಭಾರತೀಯ ಮೂಲದ ಮಹಿಳೆ ಕೊಲೆ ಪ್ರಕರಣದಲ್ಲಿ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 20 ರಂದು ಟೊರೊಂಟೊದ ನಿವಾಸವೊಂದರಲ್ಲಿ 30 ವರ್ಷದ ಹಿಮಾಂಶಿ ಖುರಾನಾ ಶವವಾಗಿ ಪತ್ತೆಯಾಗಿದ್ದರು. ಆಕೆಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಕೊಲೆಯಾದ 7 ತಿಂಗಳ ಬಳಿಕ ಆಕೆಯ ಪ್ರಿಯಕರ ಲಾಕ್‌ ಆಗಿದ್ದಾನೆ.

ಜಾಹೀರಾತು

ಕೊಲೆಯಾದ ಮಹಿಳೆಯ ಸಂಗಾತಿ, ಟೊರೊಂಟೊದವನಾದ ಅಬ್ದುಲ್ ಗಫೂರಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣ ಏನು?
2025ರ ಡಿಸೆಂಬರ್‌ನಲ್ಲಿ ಟೊರೊಂಟೊದಲ್ಲಿ ಹಿಮಾಂಶಿ ಖುರಾನಾ ಶವವಾಗಿ ಪತ್ತೆಯಾಗಿದ್ದರು. ಸ್ಟ್ರಾಚನ್ ಅವೆನ್ಯೂ ಮತ್ತು ವೆಲ್ಲಿಂಗ್ಟನ್ ಸ್ಟ್ರೀಟ್ ವೆಸ್ಟ್ ಪ್ರದೇಶದಿಂದ ರಾತ್ರಿ 10:41 ರ ಸುಮಾರಿಗೆ ಆಕೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಲಾಗಿತ್ತು. ಟೊರೊಂಟೊ ಪೊಲೀಸರು ಹುಡುಕಾಟ ನಡೆಸಿದಾಗ, ಅದೇ ಪ್ರದೇಶದ ಮನೆಯೊಂದರಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಇದು ಕೊಲೆ ಎಂದು ಪೊಲೀಸರು ತಿಳಿಸಿದ್ದರು.

ಹಿಮಾಂಶಿ ಮತ್ತು ಅಬ್ದುಲ್‌ಗೆ ಸಂಬಂಧ ಇರುವುದು ಪೊಲೀಸ್‌ ತನಿಖೆ ವೇಳೆ ತಿಳಿದುಬಂತು. ಆತನ ಬಂಧನಕ್ಕೆ ದೇಶಾದ್ಯಂತ ವಾರಂಟ್ ಹೊರಡಿಸಲಾಯಿತು. ಆರೋಪಿಯ ಭಾವಚಿತ್ರವನ್ನು ಬಿಡುಗಡೆ ಮಾಡಿ, ಯಾರಿಗಾದರು ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.