Sunday, August 9, 2026
ಜಿಲ್ಲೆದಕ್ಷಿಣ ಕನ್ನಡಪ್ರಾದೇಶಿಕಮೂಡಬಿದಿರೆಸುದ್ದಿ

ಬೃಹತ್ ಉಚಿತ ಉದ್ಯೋಗ ಮೇಳ “ಆಳ್ವಾಸ್ ಪ್ರಗತಿ–2026″ರಲ್ಲಿ 15,539 ಉದ್ಯೋಗಾಕಾಂಕ್ಷಿಗಳಲ್ಲಿ 2,394 ಮಂದಿಗೆ ಸ್ಥಳದಲ್ಲೇ ಉದ್ಯೋಗ – ಕಹಳೆ ನ್ಯೂಸ್

ಮೂಡುಬಿದಿರೆ : ವಿದ್ಯಾಗಿರಿ ಆವರಣದಲ್ಲಿ ನಡೆದ 16ನೇ ಆವೃತ್ತಿಯ ಎರಡು ದಿನಗಳ ಬೃಹತ್ ಉಚಿತ ಉದ್ಯೋಗ ಮೇಳ “ಆಳ್ವಾಸ್ ಪ್ರಗತಿ–2026″ರಲ್ಲಿ 2,394 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ದೊರೆತಿದ್ದು, 5,935 ಅಭ್ಯರ್ಥಿಗಳನ್ನು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲ ದಿನ 326 ಹಾಗೂ ಎರಡನೇ ದಿನ 6 ಸೇರಿದಂತೆ ಒಟ್ಟು 332 ಕಂಪನಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ದೇಶದ ವಿವಿಧ ಭಾಗಗಳಿಂದ 15,539 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಎರಡನೇ ದಿನ 2,523 ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಎಕ್ಸಿಕೋಮ್ ಟೆಲಿ ಸಿಸ್ಟಮ್ ಲಿಮಿಟೆಡ್‌ನ ಹೈದರಾಬಾದ್ ಘಟಕಕ್ಕೆ 35 ಮಹಿಳಾ ಇಂಜಿನಿಯರ್ ನೇಮಕ ಮಾಡ ಲಾಗಿದೆ. ಕಳೆದ ವರ್ಷ ಇದೇ ಮೇಳದ ಮೂಲಕ 22 ಇಂಜಿನಿಯರ್ ಕಂಪನಿ ನೇಮಕ ಮಾಡಿಕೊಂಡಿತ್ತು. ಒಂಬತ್ತು ರಾಜ್ಯಗಳಲ್ಲಿ ಸುಮಾರು 950 ಉದ್ಯೋಗಿಗಳನ್ನು ಹೊಂದಿರುವ ಕಂಪನಿ, ಮುಂದಿನ ದಿನಗಳಲ್ಲಿ ಮಹಿಳಾ ಉದ್ಯೋಗಿ ಗಳ ಪ್ರಮಾಣವನ್ನು ಶೇ.90ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಪೂಜಾ ದುಗ್ಗಲ್ ತಿಳಿಸಿದ್ದಾರೆ.

ಕೋಡಯಂಗ್ ನಾಲ್ವರನ್ನು 8.36 ಲಕ್ಷ ವಾರ್ಷಿಕ ವೇತನ ಪ್ಯಾಕೇಜ್‌ಗೆ ಹಾಗೂ ಇಎಕ್ಸ್ಎಲ್ 38 ಅಭ್ಯರ್ಥಿಗಳನ್ನು ₹3 ಲಕ್ಷ ವೇತನಕ್ಕೆ ಆಯ್ಕೆ ಮಾಡಿಕೊಂಡಿವೆ. ಎಚ್‌ಎಲ್ ಮಾಂಡೋ 99 ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ₹3.4 ಲಕ್ಷ ಪ್ಯಾಕೇಜ್ ನೀಡಲಿದೆ. ಎಎನ್‌ಝೆಡ್ 84 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, 3ರಿಂದ 4 ಲಕ್ಷ ರೂ. ವೇತನ ಪ್ಯಾಕೇಜ್ ಘೋಷಿಸಿದೆ.

ಟಾಟಾ ಎಲೆಕ್ಟ್ರಾನಿಕ್ಸ್ 216 ಹಾಗೂ ಸೆಜಿಲಿಟಿ 65 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿವೆ. ಫೈಎಸ್ ಡಿಜಿಟಲ್ 32, ಎಕ್ಸ್ಪರ್ಟೀಸ್ 116, ಎಲೋಜಿಕ್ಸಾ ಒಬ್ಬ ಹಾಗೂ ಬುಲ್ಹರ್ 14 ಅಭ್ಯರ್ಥಿಗಳನ್ನು ಆಯ್ಕೆ ಅಥವಾ ಶಾರ್ಟ್‌ಲಿಸ್ಟ್ ಮಾಡಿವೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ 20 ಎಂಜಿನಿಯರಿಂಗ್ ಅಭ್ಯರ್ಥಿಗಳನ್ನು 6 ಲಕ್ಷ ವಾರ್ಷಿಕ ವೇತನದ ಹುದ್ದೆಗಳಿಗೆ ಪರಿಗಣಿಸಿದೆ.

ಸುಳ್ಯದ ಕಲ್ಲಗುಂಡಿ ಮೂಲದ ಶ್ವೇತಾ, ಕೊಡ್ಯಾಲ್‌ಬೈಲ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ಪದವೀಧರೆಯಾಗಿದ್ದು, ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಸೊಲ್ಯೂಷನ್ಸ್‌ಗೆ ಆಯ್ಕೆಯಾಗಿದ್ದಾರೆ.

ಆಯ್ಕೆ ಮತ್ತು ಶಾರ್ಟ್‌ಲಿಸ್ಟ್ ವಿವರಗಳನ್ನು ಒಂದು ವಾರದೊಳಗೆ www.alvaspragati.comನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.