Saturday, July 4, 2026
ಬೆಂಗಳೂರುರಾಜ್ಯಸುದ್ದಿ

ಮಕ್ಕಳ ನಡುವೆಯೇ ಮಲಗಿತ್ತು ಬೃಹತ್ ನಾಗರಹಾವು : ಅದೃಷ್ಟವಶಾತ್‌ ಮಕ್ಕಳು ಪಾರು – ಕಹಳೆ ನ್ಯೂಸ್

ಬೆಂಗಳೂರು: ಮನೆಯಲ್ಲಿ ಮಕ್ಕಳ ಜೊತೆಗೆ ಪೋಷಕರು ಮಲಗಿದ್ದ ವೇಳೆ ನಾಗರಹಾವೊಂದು ಪ್ರತ್ಯಕ್ಷವಾಗಿ ಆತಂಕಕ್ಕೆ ಒಳಗಾಗಿರುವ ಘಟನೆ ನಡೆದಿದೆ.ಬೆಂಗಳೂರು  ಉತ್ತರ ತಾಲೂಕಿನ ಹೆಸರಘಟ್ಟ ಬಳಿ ಗುಡ್ಡದಹಳ್ಳಿಯಲ್ಲಿ ಘಟನೆ ನಡೆದಿದೆ. ಮಕ್ಕಳು ಮಲಗಿದ್ದ ಹಾಸಿಗೆಯಲ್ಲೇ ಹಾವು ಅಡಗಿತ್ತು. ಆದರೆ, ಅವರಿಗೆ ಹಾವಿನಿಂದ ಯಾವುದೇ ತೊಂದರೆ ಆಗಿಲ್ಲ. ಅದೃಷ್ಟವಶಾತ್ ಜೀವಾಪಾಯದಿಂದ ಪುಟ್ಟ ಮಕ್ಕಳು ಜಸ್ಟ್ ಮಿಸ್ ಆಗಿದ್ದಾರೆ.

ಮಕ್ಕಳ ಬಳಿಯೇ ನಾಗರಹಾವು ಇರುವುದನ್ನು ಕಂಡು ಪೋಷಕರು ಕಂಗಾಲಾಗಿದ್ದಾರೆ. ಬರೋಬ್ಬರಿ 5 ಅಡಿ ಉದ್ದವಿದ್ದ ನಾಗರಹಾವನ್ನು ಉರಗ ರಕ್ಷಕರ ಮೂಲಕ ರಕ್ಷಣೆ ಮಾಡಲಾಗಿದೆ. ಹಾವಿನಿಂದ ಯಾವುದೇ ತೊಂದರೆಯಾಗದಂತೆ ಮೊದಲು ಮಕ್ಕಳನ್ನು ರಕ್ಷಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದ ಉರಗ ರಕ್ಷಕ ಪ್ರಶಾಂತ್ ಸದ್ಯ ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ಸಂರಕ್ಷಣೆ ಮಾಡಲಾಗಿದೆ.