
ನವಿಲು ಗರಿ ಬಳಸಿ ರೀಲ್ಸ್ ಮಾಡಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಿಶನ್ ಹಾಗೂ ನಟಿ ನಿವೇದಿತಾ ಗೌಡ ಇದೀಗ ಸಂಕಷ್ಟ ಎದುರಾಗಿದೆ.ರೀಲ್ಸ್‌ನಲ್ಲಿ ಸದಾ ಮಿಂಚುವ ನಿವೇದಿತಾ ಗೌಡ ಡ್ಯಾನ್ಸರ್ ಕಿಶನ್ ಜೊತೆ ಹೇ ನವಿಲೇ ಹಾಡಿಗೆ ಮಾದಕ ಹೆಜ್ಜೆ ಹಾಕಿದ್ದರು. ಇದೀಗ ಈ ಸಂಬಂಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ, ರೀಲ್ಸ್ ಮಾಡುವಾಗ ಯಥೇಚ್ಛವಾಗಿ ನವಿಲುಗರಿ ಬಳಸಿದ್ದಾರೆ. ಹೀಗಾಗಿ ಇದನ್ನು ತನಿಖೆ ಮಾಡುವಂತೆ ಉಲ್ಲೇಖಿಸಿದ್ದಾರೆ.










