Saturday, May 2, 2026

archivekahale news

ಸುದ್ದಿ

Exclusive : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಈ ನತದೃಷ್ಟನಿಗೀಗ ಉಳಿಯಲೂ ಸೂರಿಲ್ಲ, ಒಪತ್ತಿಗೂ ಗತಿಯಿಲ್ಲ ; ಈ ಪ್ರಕಾಶ ನರವಿನ ಹಸ್ತಕ್ಕಾಗಿ ಎರುರು ನೋಡುತ್ತಿದ್ದಾರೆ ; ಪ್ಲೀಸ್ ಸಹಾಯ ಮಾಡುವಿರಾ ? – ಕಹಳೆ ನ್ಯೂಸ್

ಕೊಡಗು : ಮಳೆಯ ಅವಾಂತರದಿಂದ ತತ್ತರಿಸಿದ ಕೊಡಗಿನ ಒಬ್ಬೊಬ್ಬರ ಪರಿಸ್ಥಿತಿಯೂ ಶೋಕಸಾಗರದಲ್ಲಿ ಮುಳುಗಿದೆ‌. ಉಳಿಯಲು ಸೂರಿಲ್ಲ, ಒಪ್ಪತ್ತಿಗೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮಧ್ಯೆ ಮಕ್ಕಂದೂರು ನಿವಾಸಿ ಪ್ರಕಾಶ್ ಎಂಬುವವರಿಗೆ ಮೊದಲೇ ಕಡು ಬಡತನ, ಜೊತೆಗೆ ತಮ್ಮ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದಾರೆ. ಆದರೆ, ಕೊಡಗಿನ ಪ್ರವಾಹಕ್ಕೆ ಸಿಲುಕಿ ಈತ ನನ್ನದಾಗಿ ಇದ್ದ ಏಕೈಕ ಮನೆಯನ್ನೂ ಕಳೆದುಕೊಂಡು, ಅನಾಥನಾಗಿದ್ದಾನೆ. ಈ ಬಡಪಾಯಿ ಪ್ರಕಾಶನಿಗೀಗ ಒಪತ್ತಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ...
ಸುದ್ದಿ

ಪ್ರತಿ ನಿತ್ಯ ಕೊಡಗಿನಲ್ಲಿ ಸಂತ್ರಸ್ತರ ಸೇವೆ ಮಾಡುತ್ತಿರುವ ಎಸ್‌.ಡಿ.ಎಂ. ಕಾಲೇಜಿನಲ್ಲಿ ಡಾಕ್ಟರ್ ಕಲಿಯುತ್ತಿರುವ ರುಬಿನಾ ಮತ್ತು ಚೈತ್ರಾ ; ಯುವ ಡಾಕ್ಟರ್ ಗಳ ಸೇವಾ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ – ಕಹಳೆ ನ್ಯೂಸ್

ಕೊಡಗು: ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ, ಗುಡ್ಡ, ಘಟ್ಟ ಪ್ರದೇಶಗಳು, ಮನೆಗಳು ಕುಸಿದ ಪರಿಣಾಮವಾಗಿ ಅಪಾರ ಜೀವಹಾನಿ ಮತ್ತು ನಾಶ ನಷ್ಟ ಸಂಭವಿಸಿದ್ದು, ಸರ್ಕಾರ ಎನ್ಜಿಒಗಳು, ಸಂಘ ಸಂಸ್ಥೆಗಳು ಎಲ್ಲರೂ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ತಮ್ಮ ತಮ್ಮ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಈ ಮಧ್ಯೆ ಧಾರವಾಡ ಜಿಲ್ಲೆಯ ಎಸ್ ಡಿಎಮ್ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಕಲಿಯುತ್ತಿರುವ ಡಾಕ್ಟರ್ ರೂಹಿನಾ ಬಾನು ಮತ್ತು ಡಾಕ್ಟರ್ ಚೈತ್ರಾ ಈ ಇಬ್ಬರು ವಿದ್ಯಾರ್ಥಿನಿಯರು ಕೊಡಗಿಗೆ...
ಕ್ರೀಡೆ

ಏಷ್ಯನ್ ಗೇಮ್ಸ್ ನ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ವಿನೀಶ್ ಪೋಗಟ್ – ಕಹಳೆ ನ್ಯೂಸ್

ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದು, ಮಹಿಳೆಯರ ಕುಸ್ತಿ ವಿಭಾಗದಲ್ಲಿ ವಿನಿಶ್ ಪೋಗಟ್‍ರವರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಏಷ್ಯನ್ ಗೇಮ್ಸ್ 2018ರ ಎರಡನೇ ದಿನವಾದ ಇಂದು ಸಹ ಭಾರತೀಯ ಸ್ಪರ್ಧಿಗಳು ಚಿನ್ನದ ಬೇಟೆ ಮುಂದುವರಿಸಿದ್ದು, 50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ವಿನೀಶ್ ಪೋಗಟ್‍ರವರು ಚಿನ್ನ ಗೆದ್ದಿದ್ದಾರೆ. ಮಂಗಳವಾರ ನಡೆದ 50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ ಅಂತಿಮ ಪಂದ್ಯದಲ್ಲಿ ವಿನೀಶ್...
ಸಿನಿಮಾಸುದ್ದಿ

ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ 10 ಲಕ್ಷ ರೂ. ನೆರವು – ಕಹಳೆ ನ್ಯೂಸ್

ಬೆಂಗಳೂರು : ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಿದ್ದಾರೆ. ನಟ ಶಿವರಾಜ್‍ಕುಮಾರ್ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಶಿವಣ್ಣ ಸಿಎಂ ಪರಿಹಾರ ನಿಧಿಗೆ 10 ಲಕ್ಷ ಚೆಕ್ ಕೂಡ ನೀಡಿದರು. ಅಲ್ಲದೇ ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡರು. ಇದೇ ವೇಳೆ ಮಾತನಾಡಿದ...
ಸುದ್ದಿ

ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆಗಳ ಸಂಕಷ್ಟ ನಿವಾರಣೆಗೆ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಜಪ ಸಹಿತ “ಶ್ರೀ ವರುಣ ಮಹಾಯಾಗ” – ಕಹಳೆ ನ್ಯೂಸ್

ಸುಳ್ಯ: ದಿನಾಂಕ 20-08-2018ನೇ ಸೋಮವಾರದಂದು ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಳದಲ್ಲಿ ಲೋಕಕಲ್ಯಾಣ ಹಾಗೂ ವಿಶೇಷವಾಗಿ ಈ ವರ್ಷ ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಒದಗಿ ಬಂದ ಜಲ ಗಂಡಾಂತರದಿಂದ ಸರ್ವ ಜನತೆಯನ್ನು ಪಾರು ಮಾಡಿ ಸುಭಿಕ್ಷೆ, ಸುಕ್ಷೇಮದಿಂದ ಜನರು ಬದುಕು ನಡೆಸುವಂತಾಗಲಿ, ಮುಂದೆಯೂ ಇಂಥಹ ಕಷ್ಟ ಬಾರದಿರಲಿ ಎಂಬ ಮಹಾ ಸಂಕಲ್ಪದೊಂದಿಗೆ ಶ್ರೀ ಮಹಾಗಣಪತಿ, ಆದಿತ್ಯಾದಿ ನವಗ್ರಹ ಸಹಿತ...
ಸುದ್ದಿ

Breaking News : ಮನೆ – ಮಠ ಕಳೆದುಕೊಂಡು ಪುತ್ತೂರಿಗೆ ಬಂದ ಕೊಡಗಿನ ಸಂತ್ರಸ್ತರಿಗೆ ಧನ ಸಹಾಯ ಹಾಗೂ ಅಗತ್ಯ ಸಾಮಗ್ರಿಗಳನ್ನು ಪೂರೈಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ – ಕಹಳೆ ನ್ಯೂಸ್

ಪುತ್ತೂರು : ಕೊಡಗಿನ ಮಳೆಗೆ ತತ್ತರಿಸಿ ಮನೆ ಮಠ ಗಳನ್ನು ಕಳೆದುಕೊಂಡು ಪುತ್ತೂರು ಆಸುಪಾಸಿನ ತಮ್ಮ ಸಂಬಂಧಿಕರ ಮನೆಯಲ್ಲಿ ನೆಲೆ ಪಡೆಯಲು ಆಗಮಿಸಿದ 30 ರಷ್ಟು ಜನರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪುತ್ತೂರು ಕಾರ್ಯಲಯದಲ್ಲಿ ಧನಸಹಾಯ, ಆಹಾರ ವಸ್ತು ಹಾಗೂ ಅಗತ್ಯ ದಿನ ಬಳಕೆಯ ವಸ್ತುಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ್ ಧನ್ಯ ಕುಮಾರ್ ಬೆಳಂದೂರು,ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್, ವಿಶ್ವ...
ಸುದ್ದಿ

ಜಲಪ್ರಳಯದಿಂದ ಬೆಂಗಳೂರು ಮಂಗಳೂರು ಸಂಪರ್ಕ ಕಲ್ಪಿಸುವ ರಸ್ತೆಗಳು ನಿಷ್ಕ್ರಿಯವಾಗಿರುದ್ದನ್ನೇ ಬಂಡವಾಳವಾಗಿಸಿದ ಜೆಟ್ ಏರ್‌ವೇಸ್ ವಿರುದ್ಧ ವ್ಯಾಪಕ ಆಕ್ರೋಶ – ಕಹಳೆ ನ್ಯೂಸ್

ಮಂಗಳೂರು : ಜಿಲ್ಲೆಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಪ್ರಮುಖ ಘಾಟ್ ಗಳ ತೊಂದರೆಯಿಂದಾಗಿ ಸಂಪೂರ್ಣ ಬಂದ್ ಆಗಿದೆ, ಪರಿಣಾಮ ಬಸ್ ಸಂಚಾರ ರದ್ಧಾಗಿದೆ‌‌. ಜನರ ಸಮಸ್ಯೆಯನ್ನೇ ಬಂಡವಾಳವಾಗಿಸಿದ ' ಜೆಟ್ ಏರ್‌ವೇಸ್ ' ಸಂಸ್ಥೆ ಜನರನ್ನು ದೋಚಲು ಹೊರಟಿದೆ. ತನ್ನು ಟಿಕೇಟ್ ದರವನ್ನು ಏಕಾಏಕಿ ದುಪ್ಪಟ್ಟುಗೊಳಿಸಿದೆ. ಇದರಿಂದ ಕಂಗೆಟ್ಟ ಜನ ಭಾರೀ ಆಕ್ರೋಶ ಹೊರಹಾಕುತ್ತಿದ್ದು, ಜೆಟ್ ಏರ್‌ವೇಸ್ ಬಂದ್ ಮಾಡಿ ಎಂಬುದಾಗಿ ಸರಕಾರಕ್ಕೆ ಆಗ್ರಹಿಸುತ್ತಿದ್ದಾರೆ....
ಸುದ್ದಿ

ಸಂಸ್ಕೃತ ಮರಣವಿಲ್ಲದ ಭಾಷೆ ಸಂಸ್ಕೃತೋತ್ಸವದಲ್ಲಿ ರಾಘವೇಶ್ವರ ಶ್ರೀ ಅಭಿಮತ – ಕಹಳೆ ನ್ಯೂಸ್

* ಸಂಸ್ಕೃತದಲ್ಲಿ ಆಶೀರ್ವಚನವನ್ನು ಅನುಗ್ರಹಿಸಿದ ಪೂಜ್ಯ ಶ್ರೀಗಳು * ಸಂಸ್ಕೃತ ಭವನ" ನಿರ್ಮಾಣಕ್ಕೆ ಶ್ರೀಮಠದಿಂದ ಆಶೀರ್ವಾದ ಪೂರ್ವಕ ಮೂಲಧನ. * ಶಾಸಕ ರವಿ ಸುಬ್ರಹ್ಮಣ್ಯ ಅವರಿಂದ ಕಾರ್ಯಕ್ರಮವನ್ನು ಉದ್ಘಾಟನೆ. ಸಂಸ್ಕೃತ ಭಾಷೆ ಅಮರ ಭಾಷೆಯಾಗಿದ್ದು, ಅಮರವಾದ ಈ ಭಾಷೆಗೆ ಮರಣವಿರಲು ಸಾಧ್ಯವೇ ಇಲ್ಲ. ಸಂಸ್ಕೃತದ ಅಭಿವೃದ್ಧಿಗೆ ತೊಡಗಿಸಿಕೊಂಡಿರುವ ಈ ಸಂಘಟನೆಯನ್ನು ನೋಡಿದಾಗ ಅದು ಮತ್ತಷ್ಟು ದೃಢವಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.   ಬೆಂಗಳೂರಿನ ಎನ್...
1 1,387 1,388 1,389 1,390 1,391 1,459
Page 1389 of 1459