ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ…! – ಕಹಳೆ ನ್ಯೂಸ್
ಮಂಗಳೂರು, ಆ 25 : ಈಗಾಗಲೇ ಕೊಡಗು ಜಿಲ್ಲೆಯನ್ನು ಅಕ್ಷರಶಃ ನಲುಗಿಸಿರುವ ಮಳೆರಾಯನ ಆರ್ಭಟ ಮತ್ತೆ ಶುರವಾಗಲಿದೆ. ಕೊಡಗು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಆಗಸ್ಟ್ ೨೫ರಿಂದ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಧಾರಕಾರ ಮಳೆ ಸುರಿಯಲಿದೆ. ಜಿಲ್ಲೆಯ ಜನತೆ ಮತ್ತೆ ಎಚ್ಚರಿಕೆಯಿಂದ ಇರಬೇಕಾಗಿದೆ. ಬಂಗಾಳಕೊಲ್ಲಿಯ ಒರಿಸ್ಸಾ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಿಂದಾಗಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಲಿದೆ....







