Monday, May 4, 2026
ಮಾಹಿತಿರಾಷ್ಟ್ರೀಯಸುದ್ದಿ

ನಿಮ್ಮ ಮೊಬೈಲ್‌ಗೆ ಅನಿರೀಕ್ಷಿತ ಮೆಸೇಜ್‌ ಬಂದ್ರೆ, ಸೈರನ್‌ ಮೊಳಗಿದ್ರೆ ಭಯಪಡಬೇಡಿ! – ಕಹಳೆ ನ್ಯೂಸ್

ನಿಮ್ಮ ಮೊಬೈಲ್‌ ಫೋನ್‌ ಜೋರಾಗಿ ಬೀಪ್ ಮಾಡದರೆ ಅಥವಾ ಅನಿರೀಕ್ಷಿತ ಮೆಸೇಜ್‌ ಬಂದರೆ ಭಯಪಡಬೇಡಿ. ಅದು ತುರ್ತು ಎಚ್ಚರಿಕೆಯ ಸಂದೇಶ. ಹೊಸ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಸರ್ಕಾರ ಪರೀಕ್ಷಿಸುತ್ತಿದೆ.

ಪ್ರಕೃತಿ ವಿಕೋಪ ಬಂದಾಗ ತನ್ನ ನಾಗರಿಕರನ್ನು ರಕ್ಷಿಸಲು ಭಾರತ ತನ್ನದೇ ಆದ ಎಚ್ಚರಿಕೆ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಹೆಸರಿನ ಈ ಸಿಸ್ಟಮ್ ಪ್ರಸ್ತುತ ದೇಶಾದ್ಯಂತ ಪರೀಕ್ಷೆಯಲ್ಲಿದೆ. ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ನಾಗರಿಕರ ಮೊಬೈಲ್‌ಗಳಿಗೆ ನೇರವಾಗಿ ಸಂದೇಶ ಬಿತ್ತರಿಸುವ ಸೆಲ್‌ ಬ್ರಾಡ್‌ಕಾಸ್ಟ್‌ ಸೇವೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಅದರ ಭಾಗವಾಗಿ ಇಂದು (ಮೇ 2) ಬೆಂಗಳೂರು ನಾಗರಿಕರ ಮೊಬೈಲ್‌ಗಳಿಗೆ NDMAನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಫ್ಲ್ಯಾಶ್ SMS ಸಂದೇಶ ಬರಬಹುದು. ಅದಕ್ಕೆ ಯಾರೂ ಆತಂಕಪಡಬೇಕಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕೃತಿ ವಿಕೋಪ ಮತ್ತು ತುರ್ತು ಸಂದರ್ಭಗಳಲ್ಲಿ ಸರ್ಕಾರವು ಸಕಾಲಿಕ ಮಾಹಿತಿಯನ್ನು ಒದಗಿಸಲು ಬಯಸುತ್ತದೆ. ಮೊಬೈಲ್ ಫೋನ್‌ಗಳಲ್ಲಿ ನೇರ ಎಚ್ಚರಿಕೆಗಳಿಗಿಂತ ಉತ್ತಮವಾದ ಆಯ್ಕೆ ಇನ್ನೊಂದಿಲ್ಲ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಅದರ ಸನ್ನದ್ಧತೆಯ ಭಾಗವಾಗಿ, ಸರ್ಕಾರವು ಸ್ಥಳೀಯ ಸೆಲ್ ಪ್ರಸಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ದೇಶಾದ್ಯಂತ ಈ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ.

ಸರ್ಕಾರವು ಈ ವ್ಯವಸ್ಥೆಯನ್ನು ಈ ಹಿಂದೆಯೂ ಕೆಲವು ಬಾರಿ ಪರೀಕ್ಷಿಸಿದೆ. ಆದರೆ, ಇದನ್ನು ರಾಷ್ಟ್ರವ್ಯಾಪಿ ಜಾರಿಗೆ ತರುವ ಮೊದಲು ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ನಿರ್ಣಯಿಸುವ ಸಲುವಾಗಿ ಮತ್ತೊಂದು ಪರೀಕ್ಷೆ ನಡೆಸುತ್ತಿದೆ.