‘ಬಿಂದು’ವಿನ ಹೊಸ ಉತ್ಪನ್ನಗಳು: ಸಿಪೋನ್ ಟೆಂಡರ್ ಕೋಕೊನಟ್ ವಾಟರ್ ಮತ್ತು ಸಿಪೋನ್ ಲೆಮನ್ ಡ್ರಿಂಕ್ – ನೈಸರ್ಗಿಕ ಸವಿಯ ಸಿಂಚನ..! – ಕಹಳೆ ನ್ಯೂಸ್

ಕರ್ನಾಟಕದ ಹೆಮ್ಮೆಯ “ಬಿಂದು” ಸಂಸ್ಥೆಯು ಇದೀಗ ಎರಡು ಹೊಸ ಉತ್ಪನ್ನಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ: SIPON Tender Coconut Water ಮತ್ತು SIPON Lemon Drink.
ಈ ಎರಡೂ ಪಾನೀಯಗಳು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲ್ಪಟ್ಟಿದ್ದು, ಆರೋಗ್ಯ ಮತ್ತು ರುಚಿಯ ಪರಿಪೂರ್ಣ ಮಿಶ್ರಣವನ್ನು ನೀಡುತ್ತವೆ.

SIPON Tender Coconut Water: “ಗೆಂದಾಳಿ”ಯ ಸಿಹಿ ಮತ್ತು ಆರೋಗ್ಯದ ರಹಸ್ಯ
ದಕ್ಷಿಣ ಕನ್ನಡದ ಫಲವತ್ತಾದ ಮಣ್ಣಿನಲ್ಲಿ ಹೇರಳವಾಗಿ ಬೆಳೆಯುವ “ಆರೆಂಜ್ ಕಿಂಗ್ ಕೋಕೊನಟ್” ಅಥವಾ ಸ್ಥಳೀಯವಾಗಿ “ಗೆಂದಾಳಿ” ಎಂದು ಕರೆಯಲ್ಪಡುವ ವಿಶೇಷ ತೆಂಗಿನಕಾಯಿಯಿಂದ ತಯಾರಿಸಲಾದ SIPON Tender Coconut Water, ಭಾರತದಲ್ಲೇ ಮೊದಲ ಬಾರಿಗೆ ಬಿಂದು ಸಂಸ್ಥೆಯಿಂದ ಪರಿಚಯಿಸಲ್ಪಟ್ಟಿದೆ.
ಈ ಉತ್ಪನ್ನವನ್ನು ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ನೈಸರ್ಗಿಕ ಪಲ್ಪ್‌ನಿಂದ ಕೂಡಿದ ಈ ಎಳನೀರು, ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರಿಗೂ ಸೂಕ್ತವಾದ ತಂಪು ಪಾನೀಯವಾಗಿದೆ. ನೈಸರ್ಗಿಕ ಪೋಷಕಾಂಶಗಳ ಆಗರವಾಗಿರುವ ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. SIPON Tender Coconut Water ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಪ್ರಮುಖ ಉತ್ಪನ್ನವಾಗಿ ಹೊರಹೊಮ್ಮಲಿದೆ ಎಂಬ ಆಶಯವನ್ನು ಸಂಸ್ಥೆ ಹೊಂದಿದೆ.
SIPON Lemon Drink: ಬೇಸಿಗೆಯ ಬಿಸಿಲಿಗೆ ತಂಪೆರೆಯುವ ಪಾನೀಯ
ಜನವರಿ ತಿಂಗಳಲ್ಲಿ ಬಿಡುಗಡೆಯಾದ SIPON Lemon Drink, ಬಿಂದು ಉತ್ಪನ್ನಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ನೈಸರ್ಗಿಕ ತಾಜಾ ನಿಂಬೆ ಹಣ್ಣಿನ ಪಲ್ಪ್ ನಿಂದ ತಯಾರಿಸಲಾದ ಈ ಪಾನೀಯವು ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದಂತಿದೆ.
ಈ ಪಾನಿಯ ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ. ಬಿಸಿಲಿನ ಜಳದ ನಡುವೆ ದೇಹದಲ್ಲಿ ನೀರಿನಂಶವನ್ನು ಕಾಪಾಡಲು ಮತ್ತು ನಿರ್ಜಲೀಕರಣವನ್ನು ತಡೆಯಲು ಇದು ಉತ್ತಮ ಪಾನೀಯವಾಗಿದೆ.
ಬಿಂದು ಸಂಸ್ಥೆಯ ಈ ಎರಡೂ ಹೊಸ ಉತ್ಪನ್ನಗಳು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ.
ರಾಷ್ಟ್ರವ್ಯಾಪಿ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಇವು ಹೆಚ್ಚಿನ ಬೇಡಿಕೆಯನ್ನು ಪಡೆದು ಉಳಿದ ಬಿಂದು ಉತ್ಪನ್ನಗಳಂತೆ ಯಶಸ್ಸು ಗಳಿಸುವ ವಿಶ್ವಾಸವನ್ನು ಮಾರುಕಟ್ಟೆ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ .










