Saturday, May 2, 2026

archivekahale news

ಸುದ್ದಿ

Breaking News : ‘ಇನ್ಮುಂದೆ ತುಳುವಿನಲ್ಲಿ ಎಂಎ’ ; ಮಂಗಳೂರು ವಿವಿಯಲ್ಲಿ ತುಳು ಸ್ನಾತಕೋತ್ತರ ಪದವಿ ಆರಂಭ – ಕಹಳೆ ನ್ಯೂಸ್

ಮಂಗಳೂರು, ಆ 28 :  ಮಂಗಳೂರು ವಿಶ್ವವಿದ್ಯಾಲಯವೂ ತುಳು ಸ್ನಾತಕೋತ್ತರ ಪದವಿ ತರಗತಿ ಪ್ರಾರಂಭಿಸಲು ಯೋಜನೆ ರೂಪಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ಪ್ರಾಯೋಗಿಕವಾಗಿ ಹಂಪನಕಟ್ಟೆಯಲ್ಲಿರುವ ವಿವಿ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಪದವಿ ತರಗತಿ ಆಗಸ್ಟ್ 27 ರ ಸೋಮವಾರದಿಂದ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ.  ಹಂಪನಕಟ್ಟೆಯಲ್ಲಿರುವ ವಿವಿ ಸಂಧ್ಯಾ ಕಾಲೇಜಿನಲ್ಲಿ ತರಗತಿ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಉಪಸ್ಥಿತಿಯಲ್ಲಿ ವಿಶ್ರಾಂತ ಕುಲಪತಿ ಹಾಗೂ ತುಳು ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ತುಳು ಸ್ನಾತಕೋತ್ತರ ಪದವಿ...
ಸುದ್ದಿ

Breaking News : ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕರ್ಕಶ ಧ್ವನಿಯಲ್ಲೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ತುಳಸಿಪ್ರಸಾದ್ ! – ಕಹಳೆ ನ್ಯೂಸ್

ಬೆಂಗಳೂರು: ಕರ್ಕಶ ಧ್ವನಿಯಲ್ಲೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದತುಳಸಿ ಪ್ರಸಾದ್ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ಬಿಗ್‌ಬಜಾರ್‌ನಲ್ಲಿ ಕಳ್ಳತನ ಮಾಡಿ ತುಳಸಿ ಪ್ರಸಾದ್ ಸಿಕ್ಕಿಬಿದ್ದಿದ್ದು, ಸ್ಥಳದಲ್ಲಿದ್ದವರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಜಾರ್‌ಗೆ ಹೋಗಿದ್ದ ತುಳಸಿಪ್ರಸಾದ್, ಜರ್ಕಿನ್ ಹಾಕಿಕೊಂಡು ಕಳ್ಳತನ ಮಾಡಿದ್ದಾನೆ. ಹಲವು ವಸ್ತುಗಳನ್ನು ಎಗರಿಸಿದ ನಂತರ, ಸೆಕ್ಯೂರಿಟಿ ಕೈಗೆ ಸಿಕ್ಕಬಿದ್ದ ತುಳಸಿಪ್ರಸಾದ್‌ಗೆ ಸಿಬ್ಬಂದಿಗಳೆಲ್ಲ ಸೇರಿ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಫ್ಯಾನ್ಸ್‌ಗಳನ್ನು ಹೊಂದಿದ್ದ ನೀವು ಯಾಕೆ ಕಳ್ಳತನ...
ಸುದ್ದಿ

ಸನಾತನ ಸಂಸ್ಥೆಯ ಕಾರ್ಯ ಅಧ್ಯಾತ್ಮಪ್ರಸಾರ, ಹಿಂಸಾಚಾರವಲ್ಲ ! – ಕಹಳೆ ನ್ಯೂಸ್

ಮುಂಬೈ : ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ಕೆಲವು ಹಿಂದುತ್ವನಿಷ್ಠರನ್ನು ಬಂಧಿಸಿತು. ಕೆಲವು ಪ್ರಗತಿಪರರು, ಸಂಘಟನೆಯವರು, ಅದೇ ರೀತಿ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳ ರಾಜಕೀಯ ನಾಯಕರುಗಳು ಉದ್ದೇಶಪೂರ್ವಕವಾಗಿ ಇವರೆಲ್ಲರೂ ಸನಾತನದ ಸಾಧಕರು ಎಂದು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಸನಾತನ ಸಂಸ್ಥೆಯು ಆಯಾ ಸಮಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು, ಅದನ್ನು ಇಂದೂ ಸ್ಪಷ್ಟಪಡಿಸಲು ಇಚ್ಛಿಸಿದ್ದು, ಆ ಬಂಧಿತರ ಪೈಕಿ ಒಬ್ಬರೂ ಸನಾತನದ ಸಾಧಕರಲ್ಲ. ಅವರಲ್ಲಿ...
ಸುದ್ದಿ

347ನೇ ಆರಾಧನಾ ಮಹೋತ್ಸವ- ಸಾಧಕರಿಗೆ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಪ್ರಶಸ್ತಿ ನೀಡಿ ಗೌರವ – ಕಹಳೆ ನ್ಯೂಸ್

ರಾಯಚೂರು: ಕಲಿಯುಗ ಕಾಮಧೇನು ರಾಘವೇಂದ್ರ ಸ್ವಾಮಿಗಳ 347 ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ಇದೇ ವೇಳೆ ಸಾಧಕರಿಗೆ ಗುರು ರಾಘವೇಂದ್ರ ಸ್ವಾಮಿ ಅನುಗ್ರಹ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇಂದು ಮಠದಲ್ಲಿ ಪೂರ್ವಾರಾಧನೆ ನಡೆಯುತ್ತಿದ್ದು, ಗುರು ರಾಯರು ವೃಂದಾವನಸ್ಥರಾಗಿ ಇಂದಿಗೆ 347 ವರ್ಷಗಳು ಸಂದಿವೆ. ಈ ದಿನವನ್ನೇ ಪೂರ್ವಾರಾಧನೆಯಾಗಿ ಆಚರಿಸಲಾಗುತ್ತಿದೆ. ಮುಂದಿನ ಎರಡು ದಿನಗಳನ್ನು ಮಧ್ಯಾರಾಧನೆ ಹಾಗೂ ಉತ್ತರರಾಧನೆಯಾಗಿ ಆಚರಿಸಲಾಗುತ್ತದೆ. ಆರಾಧನೆಯ ಪ್ರತಿ ದಿನವೂ ಇಂದಿನಿಂದ ಬೆಳಗಿನ ಜಾವದಿಂದಲೇ ಪೂಜಾ...
ಸುದ್ದಿ

38 ದಿನಗಳ ಕಾಲ ಬಿಗಿ ಭದ್ರತೆಯಲ್ಲಿದ್ದ ಶಿರೂರು ಮೂಲಮಠವನ್ನು ಬಿಟ್ಟುಕೊಟ್ಟ ಪೊಲೀಸರು – ಕಹಳೆ ನ್ಯೂಸ್

ಉಡುಪಿ, ಆ 28 : ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ನಿಧನದ ನಂತರ ಪೊಲೀಸ್ ವಶದಲ್ಲಿದ್ದ ಶಿರೂರು ಮೂಲಮಠಕ್ಕೆ 38 ದಿನಗಳ ಬಳಿಕ ಪೊಲೀಸ್ ವಶದಿಂದ ಮುಕ್ತಿ ದೊರಕಿದೆ. ಹಿಡಿಯಡ್ಕದಲ್ಲಿರುವ ಶಿರೂರು ಮೂಲಮಠವನ್ನು ಆ 27 ರ ಸೋಮವಾರ ಪೊಲೀಸರು ಮಠದ ದ್ವಂದ ಮಠವಾದ ಸೋದೆ ಮಠದ ಸುಪರ್ದಿಗೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು, ಶಿರೂರು ಲಕ್ಷ್ಮೀವರ ತೀರ್ಥರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ...
ರಾಜಕೀಯಸುದ್ದಿ

`ಸಮೃದ್ಧ ಪುತ್ತೂರು’ ನಮ್ಮ ದೃಢ ಸಂಕಲ್ಪ ಬಿಜೆಪಿ ಬೆಂಬಲಿಸಲು ಮಹಿಳಾ ಮೋರ್ಚಾ ಮನವಿ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ನಗರಸಭೆಯ 31 ವಾರ್ಡುಗಳ ಪೈಕಿ 14 ವಾರ್ಡುಗಳು ಮಹಿಳೆಯರಿಗೆ ಮೀಸಲಾಗಿದ್ದು, ಈ ಬಾರಿ ಬಿಜೆಪಿ ಸಮಾಜಮುಖಿ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಮರ್ಥ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ. ಪುತ್ತೂರನ್ನು `ಸಮೃದ್ಧ ಪುತ್ತೂರು' ಆಗಿಸುವ ದೃಢ ಸಂಕಲ್ಪಕ್ಕೆ ಬಿಜೆಪಿ ಅಭ್ಯರ್ಥಿಗಳಾದ ನಾವು ಬದ್ಧರಾಗಿದ್ದು, ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಬಿಜೆಪಿ ನಗರ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ವಿದ್ಯಾಗೌರಿ ಅವರು ವಿನಂತಿಸಿಕೊಂಡರು. ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ...
ಸುದ್ದಿ

ಉಪ್ಪಿನಂಗಡಿಯ ಪವಿತ್ರ ನೇತ್ರಾವತಿ ನದಿಯಲ್ಲಿ ಇಂದು ವಾಜಪೇಯಿ ಅಸ್ಥಿ ವಿಸರ್ಜನೆ – ಕಹಳೆ ನ್ಯೂಸ್

ಉಪ್ಪಿನಂಗಡಿ, ಆ 25 : ಮಾಜಿ ಪ್ರಧಾನಿ ದಿ. ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾ ಭಸ್ಮ ತುಂಬಿದ ಅಸ್ಥಿ ಕಳಶವನ್ನು ಇಂದು ಸಂಜೆ ಉಪ್ಪಿನಂಗಡಿಯ ಪವಿತ್ರ ನೇತ್ರಾವತಿ ನದಿಯಲ್ಲಿ ವಿಸರ್ಜನೆ ಮಾಡಲು ಸಿದ್ಧತೆ ನಡೆಸಲಾಗಿದೆ. ಮಾಜಿ ಪ್ರಧಾನಿ ವಾಜಪೇಯಿ ಅವರ ಅಸ್ಥಿಯನ್ನು ದೇಶದ ಪ್ರಮುಖ ನದಿಗಳಲ್ಲಿ ವಿಸರ್ಜನೆ ಮಾಡುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದ್ದು, ಹರಿದ್ವಾರದ ನಂತರ ಚಿತಾಭಷ್ಮವನ್ನು ಗಂಗಾ, ಯಮುನಾ ಮತ್ತು ತಪತಿ ಸೇರಿದಂತೆ ಉತ್ತರ ಪ್ರದೇಶದ ಪವಿತ್ರ ನದಿಗಳಲ್ಲಿ...
ಸುದ್ದಿ

ಕೆಲಸ ಮಾಡಿ, ಇಲ್ಲ ಮನೆಗೆ ಹೋಗಿ ; ಅಧಿಕಾರಿಗಳಿಗೆ ಕೊಡಗು ಡಿಸಿ ಶ್ರೀವಿದ್ಯಾ ಕ್ಲಾಸ್ – ಕಹಳೆ ನ್ಯೂಸ್

ಕೊಡಗು,ಆ.25 :ಸರಿಯಾಗಿ ಕೆಲಸ ಮಾಡದಿದ್ದರೆ ಮನೆಗೆ ಹೊರಡಿ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಡಿಕೇರಿಯಲ್ಲಿ ತುರ್ತು ಜಿಲ್ಲಾಡಳಿತ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ನಿನ್ನೆ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳನ್ನು ತೆಗೆದು ಹಾಕಲಾಗಿದೆ. ನೀವು ಅಷ್ಟೇ ಸರಿಯಾಗಿ ಕೆಲಸ ಮಾಡದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಅಧಿಕಾರವಿದೆ ಎಂಬ ಕಾರಣಕ್ಕೆ ದುರುಪಯೋಗ ಮಾಡಿಕೊಳ್ಳಬೇಡಿ,ಶ್ರಮ ವಹಿಸಿ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದರು. ರಾಜ್ಯದ ಹಲವು...
1 1,385 1,386 1,387 1,388 1,389 1,459
Page 1387 of 1459