Monday, May 4, 2026

archivekahale news

ಸುದ್ದಿ

ಸಂಪಾಜೆ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರ ಆರಂಭ – ಕಹಳೆ ನ್ಯೂಸ್

ಮಂಗಳೂರು, ಸೆ13 : ಮಂಗಳೂರು ನಗರ ಮತ್ತು ಮೈಸೂರು ಸಂಪರ್ಕಿಸುವ ಸಂಪಾಜೆ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರವನ್ನು ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಭೂ ಕುಸಿತದಿಂದಾಗಿ ಕಳೆದ ಒಂದು ತಿಂಗಳಿನಿಂದ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಮಂಗಳೂರು-ಮೈಸೂರು ಸಂಪರ್ಕಿಸುವ ಸಂಪಾಜೆ ಘಾಟ್ ರಸ್ತೆ ಮರು ನಿರ್ಮಾಣಕ್ಕೆ ತಿಂಗಳುಗಳೇ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಸಂಪಾಜೆ ಘಾಟ್ ರಸ್ತೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಕಡೆ ಭೂ ಕುಸಿತ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ  ಸಂಪಾಜೆ ಘಾಟ್ ರಸ್ತೆಯಲ್ಲಿ...
ಸುದ್ದಿ

ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ನಮ್ಮ ದುರಂತ ; ಪ್ರತಾಪ್ ಸಿಂಹರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಮುಖಂಡ – ಕಹಳೆ ನ್ಯೂಸ್

ಮಡಿಕೇರಿ, ಸೆ13 : ಕೊಡಗು, ಮಡಿಕೇರಿಗಳಿಗೆ ಆಗಮಿಸುತ್ತಿರುವ ಕೇಂದ್ರದ ಪರಿಶೀಲನೆ ತಂಡಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ನಮ್ಮ ದುರಂತ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ತೀವ್ರ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಕೇಂದ್ರದಿಂದ ಪರಿಶೀಲನೆ ನಡೆಸಲು ಬಂದಿರುವ ತಂಡಕ್ಕೆ ಭೂ ಪರಿವರ್ತನೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಸದರನ್ನು ತರಾಟೆಗೆ ತೆಗೆದುಕೊಂಡ ಅವರು, ನೀವು ಕೇಂದ್ರದ ಪರಿಶೀಲನೆ ತಂಡಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ....
ಸುದ್ದಿ

Breaking News : ದಕ್ಷ ಹಾಗೂ ನಿಷ್ಠಾವಂತ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರಗಿ ಎತ್ತಂಗಡಿ…! – ಕಹಳೆ ನ್ಯೂಸ್

ಉಡುಪಿ, ಸೆ 13 : ಜಿಲ್ಲೆಯಲ್ಲಿ ದಕ್ಷತೆಯ ಹಾಗೂ ನಿಷ್ಠಾವಂತ ಅಧಿಕಾರಿಯಾಗಿರುವ ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರನ್ನು ಎತ್ತಂಗಡಿ ಮಾಡುವ ಹುನ್ನಾರ ನಡೆದಿದೆ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 10ರಂದು ಕಾಂಗ್ರೆಸ್ ಕರೆ ನೀಡಿದ ಭಾರತ್ ಬಂದ್‌ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಡುಪಿಯಲ್ಲೂ ಪ್ರತಿಭಟನೆ ನಡೆಸಿದ್ದರು.ಪ್ರತಿಭಟನೆಯ ಸಂದರ್ಭದಲ್ಲಿ ಉಂಟಾದ ಘರ್ಷಣೆ ಹತ್ತಿಕ್ಕಲು ಎಸ್ಪಿ ನಿಂಬರಗಿ ಲಘು ಲಾಠಿಪ್ರಹಾರವನ್ನು ನಡೆಸಿದ್ದರು. ಇದೇ ಕಾರಣಕ್ಕಾಗಿ ನಾಯಕರು ಎಸ್ಪಿಯವರನ್ನು ಎತ್ತಂಗಡಿ ನಡೆಸಲು ಹುನ್ನಾರ ರೂಪಿಸಿದ್ದಾರೆ...
ಸುದ್ದಿ

“ ಕ್ರಿೈಸ್ತನಿಂದ ಕೃಷ್ಣನೆಡೆಗೆ ” ಕುಂಟಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಪೂರ್ವವಾದ ವಿವಾಹ ; ಹಿಂದೂ ಸಂಪ್ರದಾಯದಂತೆ ನವಜೀವನಕ್ಕೆ ಪಾದಾರ್ಪಣೆ ಮಾಡಿದ ಕ್ರೈಸ್ತ ದಂಪತಿ – ಕಹಳೆ ನ್ಯೂಸ್

ಮುಳ್ಳೇರಿಯ : ಕುಂಟಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಪೂರ್ವವಾದ ವಿವಾಹವೊಂದು ಜರಗಿತು. ಶ್ರೀ ಮಹಾವಿಷ್ಣುವಿನ ಪರಮ ಭಕ್ತನಾದ ಅರುಣ್ ರವಿ ಎಂಬ ಕಾಸರಗೋಡಿನ ಕ್ರೈಸ್ತಮತದ ವ್ಯಕ್ತಿಯೊಬ್ಬರು ತನ್ನ ವಿವಾಹ ಸಮಾರಂಭವನ್ನು ಶ್ರೀ ಕ್ಷೇತ್ರದಲ್ಲಿ ಇರಿಸಿಕೊಂಡಿದ್ದರು. ವಧುವಿನ ಹಾಗೂ ವರನ ಕಡೆಯ ಹಿರಿಯರ ಸಂಪೂರ್ಣಒಪ್ಪಿಗೆಯೊಂದಿಗೆ ಈ ಸಮಾರಂಭವು ನಡೆದಿತ್ತು. ವಿಶೇಷವೇನೆಂದರೆ ಕಾಸರಗೋಡಿನ ಹಿರಿಯ ಧಾರ್ಮಿಕ ಹಾಗೂ ರಾಜಕೀಯ ನೇತಾರ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಸಂಪೂರ್ಣ ಹಿಂದೂ ಧಾರ್ಮಿಕ ವಿವಾಹ ವಿಧಿಯ...
ಸುದ್ದಿ

ಗಣೇಶ ಚತುರ್ಥಿ ಆಚರಣೆಯ ಆಧ್ಯಾತ್ಮಿಕ ಮಹತ್ವ ; ಗಣೇಶ ಚತುರ್ಥಿಯಂದು ನೂತನ ಶ್ರೀ ಗಣೇಶ ಮೂರ್ತಿಯನ್ನು ತರುವ ಹಿಂದಿನ ಉದ್ದೇಶವೇನು? – ಕಹಳೆ ನ್ಯೂಸ್

ಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಈ ಸಮಯದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ಕಾಲಾವಧಿಯಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ. ಶುಭಕಾರ್ಯಗಳಲ್ಲಿ ಗಣೇಶನನ್ನು ಏಕೆ ಪ್ರಥಮ ಪೂಜೆಯನ್ನು ಸಲ್ಲಿಸುತ್ತಾರೆ? ಗಣಪತಿಯು ದಿಕ್ಕುಗಳ ಅಧಿಪತಿ. ಗಣಪತಿಯ ಅನುಮತಿಯಿಲ್ಲದೇ...
ಸುದ್ದಿ

Breaking News : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು – ಕಹಳೆ ನ್ಯೂಸ್

ಮೂಡುಬಿದಿರೆ, ಸೆ 12 : ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮತ್ತೊರ್ವ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ವಿಭಾಗದಲ್ಲಿ ಓದುತ್ತಿದ ವಿದ್ಯಾರ್ಥಿನಿ ಕಾಲೇಜಿನ ಹಾಸ್ಟೇಲ್ ನ ಕೊಠಡಿಯಲ್ಲಿ ಸೆ.12 ರ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಬೆಂಗಳೂರಿನ ಅನೇಕಲ್ ನಿವಾಸಿ , ರಾಮಚಂದ್ರ ಅವರ ಪುತ್ರಿ, ವಿನುತಾ (18) ಎಂದು ಗುರುತಿಸಲಾಗಿದೆ. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಿಸಿಎಂ ಓದುತ್ತಿದ್ದ ವಿನುತಾ ಇಂದು ಬೆಳಗ್ಗೆ ಹಾಸ್ಟೆಲ್ ನಲ್ಲಿ...
ಸುದ್ದಿ

ಧಾರ್ಮಿಕ ಉತ್ಸವಗಳಲ್ಲಿ ನಡೆಯುವ ಅಯೋಗ್ಯ ಕೃತಿಗಳನ್ನು ತಡೆಯುವಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ – ಕಹಳೆ ನ್ಯೂಸ್

ಪುತ್ತೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪುತ್ತೂರು ಸಹಾಯಕ ಕಮಿಷನರ್ ಕಛೇರಿಗೆ ಧಾರ್ಮಿಕ ಉತ್ಸವಗಳಲ್ಲಿ ನಡೆಯುವ ಅಯೋಗ್ಯ ಕೃತಿಗಳನ್ನು ತಡೆಯುವ ಬಗ್ಗೆ ಮನವಿ ಸಲ್ಲಿಸಲಾಯಿತು. ಲೋಕಮಾನ್ಯ ಬಾಲಗಂಗಾಧರನಾಥ ತಿಲಕರವರು ಲೋಕ ಕಲ್ಯಾಣ, ಧರ್ಮಜಾಗೃತಿ, ಐಕ್ಯತೆ, ರಾಷ್ಟ್ರರಕ್ಷಣೆ, ಪಾಶ್ಚಾತ್ಯರ ಅಂಧಾನುಕರಣೆಯನ್ನು ದೂರ ಮಾಡುವುದು ಮತ್ತು ಸಮಾಜ ಸಹಾಯ ಮಾಡುವುದು ಇವೇ ಮುಂತಾದ ಉದ್ದೇಶವನ್ನು ಸಾಧ್ಯಗೊಳಿಸಲು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಪ್ರಾರಂಭಿಸಿದರು. ಆದರೆ ಕಾಲವು ಬದಲಾದಂತೆ ಉತ್ಸವದ ಮೂಲ ಸ್ವರೂಪಕ್ಕೆ ಧಕ್ಕೆ...
ಸಿನಿಮಾಸುದ್ದಿ

ನಟ ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಬ್ರೇಕ್ ಅಪ್…! ರಕ್ಷಿತ್ ಶೆಟ್ಟಿ ಹೇಳಿದ್ದೇನು? – ಕಹಳೆ ನ್ಯೂಸ್

ಬೆಂಗಳೂರು, ಸೆ 12 : ಸಿನಿಮಾಗಳ ಕುರಿತ ಗಾಸಿಪ್ ಗಳ ಬಗ್ಗೆ ಪ್ರತಿನಿತ್ಯ ನಾವು ಕೇಳುತ್ತೇವೆ. ಇವುಗಳ ಜತೆಗೆ ಇದೀಗ ಸ್ಯಾಂಡಲ್ ವುಡ್ ನಟ-ನಟಿಯರ ಕುರಿತಂತೆ ಗಾಸಿಪ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಹವಾ ಎಬ್ಬಿಸಿದೆ. ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ಇದೀಗ ಬಿಸಿಬಿಸಿ ಚರ್ಚೆಯಲ್ಲಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೌನವಾಗಿದ್ದ ರಕ್ಷಿತ್ ಶೆಟ್ಟಿ ಮೌನ ಮುರಿದಿದ್ದಾರೆ. ನಟಿ ರಶ್ಮಿಕಾ...
1 1,379 1,380 1,381 1,382 1,383 1,459
Page 1381 of 1459