ಝರಿ ಬೆದ್ರ ನೂತನ ಮಳಿಗೆ ಉದ್ಘಾಟನೆ : ವಸ್ತ್ರ ವೈವಿಧ್ಯದ ಝರಿ ಕೌಚರ್ ಈಗ ಜೈನಕಾಶಿ ಮೂಡುಬಿದಿರೆಯಲ್ಲಿ…!! – ಕಹಳೆ ನ್ಯೂಸ್

ಮೂಡುಬಿದಿರೆ: ಬಸ್ ನಿಲ್ದಾಣದ ಎದುರಿಗಿನ ನವಮಿ ಪ್ಲಾಜಾದಲ್ಲಿ ಝರಿ ಕೌಚರ್ ಸಂಸ್ಥೆಯ ಝರಿ ಬೆದ್ರ ನೂತನ ಮಳಿಗೆ ಭನುವಾರ ಉದ್ಘಾಟನೆಗೊಂಡಿತು.
ವಿಜಯಲಕ್ಷ್ಮೀ ಆರಿಗ ಮಳಿಗೆ ಉದ್ಘಾಟಿಸಿದರು. ಮೂಡುಬಿದಿರೆ ಪುರಸಭೆ ಮುಖ್ಯ ಅಧಿಕಾರಿ ಇಂದು ಎಂ ದೀಪ ಬೆಳಗಿಸಿ ಮಾತನಾಡಿ, ಝರಿ ವಸ್ತ್ರ ಮಳಿಗೆ ಮೂಡುಬಿದಿರೆಯಲ್ಲಿ ಸ್ಥಾಪನೆಗೊಂಡಿರುವುದು ಸಂತಸದ ವಿಷಯ. ಮಹಿಳೆಯರಿಗೆ ಪ್ರಿಯವಾದ ಈ ಮಳಿಗೆಯಿಂದ ಎಲ್ಲ ಸಮಾರಂಭಗಳಿಗೆ ಒಂದೇ ಸೂರಿನಡಿ ವಸ್ತ್ರ ಖರೀದಿಸುವ ಅವಕಾಶ ಒದಗಿಬಂದಿದೆ. ಝರಿ ಸಂಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಮಳಿಗೆ ಮೂಲಕ ಸ್ಥಳೀಯರಿಗೆ ವಸ್ತ್ರ ವೈವಿಧ್ಯಗಳ ಪರಿಚಯವಾಗಲಿದೆ ಎಂದು ಹಾರೈಸಿದರು.

ಅತಿಥಿ ಜಯಶ್ರೀ ಅಮರನಾಥ ಶೆಟ್ಟಿ ಮಾತನಾಡಿ, ಮಂಗಳೂರಿನಿಂದ ಆರಂಭವಾದ ಝರಿ ಸಂಸ್ಥೆ ಮೂಡುಬಿದಿರೆಯಲ್ಲಿ ಶಾಖೆ ತೆರೆದಿರುವುದು ಮಹಿಳೆಯರಿಗೆ ಅನುಕೂಲಕರವಾಗಿದೆ. ಹಿಂದೆ ಸೀರೆಗಳ ಆಯ್ಕೆಗಾಗಿ ಬೆಂಗಳೂರು, ಮುಂಬೈ ಸೇರಿದಂತೆ ಹೊರ ನಗರಗಳಿಗೆ ಹೋಗಬೇಕಿತ್ತು. ಈಗ ಝರಿ ಮಂಗಳೂರಿಗೆ ಬಂದ ನಂತರ ನಾವೆಲ್ಲರೂ ಅದರ ಪ್ರಿಯರಾಗಿದ್ದೇವೆ. ಇಲ್ಲಿ ವಿಶಿಷ್ಟ ಹಾಗೂ ಗುಣಮಟ್ಟದ ಸಂಗ್ರಹಗಳಿರುವುದರಿಂದ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ವಿಜೇಶ್ ಮತ್ತು ನಂದಿತಾ ನಮ್ಮೂರಿನವರೇ ಆಗಿದ್ದು, ಸ್ವಂತ ಊರಿನಲ್ಲಿ ಮಳಿಗೆ ಪ್ರಾರಂಭಿಸಿರುವುದು ಹೆಮ್ಮೆಯ ವಿಷಯ ಎಂದು ಆಶಿಸಿದರು.
ಮಂಜುಳಾ ಅಭಯಚಂದ್ರ ಜೈನ್ ಶುಭ ಹಾರೈಸಿದರು. ಸಂಸ್ಥೆಯ ಮಾಲೀಕರಾದ ನಂದಿತಾ ಕೆ ಮತ್ತು ವಿಜೇಶ್ ವಿ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.
ಪ್ರಮಯಿ ಜೈನ್ ಮೂಡುಬಿದಿರೆ ನಿರೂಪಿಸಿದರು.








