Monday, May 4, 2026

archivekahale news

ಸುದ್ದಿ

ಬೆಳ್ತಂಗಡಿಯಲ್ಲಿ ಕೇಸರಿ ಧ್ವಜ ಸುಟ್ಟ ಪ್ರಕರಣ ; ಹಿಂದುಗಳ ಪರವಾಗಿ ಶಾಸಕನಾಗಿ ನಾನಿದ್ದೇನೆ ಶಾಸಕ ಹರೀಶ್ ಪೂಂಜ – ಕಹಳೆ ನ್ಯೂಸ್

ಬೆಳ್ತಂಗಡಿ, ಸೆ 6 : ಆಗಸ್ಟ್ 28 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಅವರಣದಲ್ಲಿ ದಲಿತ ಸಂಘರ್ಷ ಸಮಿತಿಯವರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಕೇಸರಿ ಧ್ವಜ ಸುಟ್ಟ ಪ್ರಕರಣವನ್ನು ಖಂಡಿಸಿ ಬೆಳ್ತಂಗಡಿಯಲ್ಲಿ, ಸೆ. 6 ರ ಗುರುವಾರ ಹಿಂದೂ ಜಾಗೃತಿ ಸಭೆ ನಡೆಯಿತು. ಈ ಸಂದರ್ಭ ಮಾತನಾಡಿದ ಶಾಸಕ ಹರೀಶ್ ಪೂಂಜ, ಇಲ್ಲಿ ಕೆಲ ದಿನಗಳ ಹಿಂದೆ ನಡೆದ ಕೇಸರಿ ಧ್ವಜಕ್ಕೆ ಬೆಂಕಿ ಹಚ್ಚಿದ ಕಾರ್ಯ ಹಿಂದೆ ಕಾಂಗ್ರೇಸ್‌ ಇದೆ...
ಸುದ್ದಿ

ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಮಾತನಾಡಲಿದ್ದಾರೆ ಮೋಹನ್ ಭಾಗ್ವತ್ – ಕಹಳೆ ನ್ಯೂಸ್

ನವದೆಹಲಿ: ಇದೇ ವಾರ ಚಿಕಾಗೋದಲ್ಲಿ ನಡೆಯಲಿರುವ ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅತ್ಯಂತ ಪ್ರಮುಖವಾದ ಭಾಷಣ ಮಾಡಲಿದ್ದಾರೆ. ಸುಮಾರು 80 ದೇಶಗಳಿಂದ 25000 ಪ್ರತಿನಿಧಿಗಳು ಪಾಲ್ಗೊಳ್ಳುವ ಈ ವಿಶ್ವ ಹಿಂದೂ ಕಾಂಗ್ರೆಸ್ ಸಮಾವೇಶ ಚಿಕಾಗೋದಲ್ಲಿ ಸೆಪ್ಟಂಬರ್ 7 ರಿಂದ 9ರವರೆಗೂ ನಡೆಯಲಿದೆ. ಈ ಕಾಂಗ್ರೆಸ್‌ನಲ್ಲಿ ಮಾತನಾಡಲಿರುವ ಭಾಗ್ವತ್, ವಿಶ್ವದಾದ್ಯಂತ ಎಲ್ಲೆಡೆ ನೆಲೆಸಿರುವ ಹಿಂದೂಗಳಿಗೆ ಮಹತ್ವದ ಸಂದೇಶ ನೀಡಲಿದ್ದಾರೆ. ವಿಶ್ವದಾದ್ಯಂತೆ ಎಲ್ಲೆಡೆ ನೆಲೆಸಿರುವ ಹಿಂದೂಗಳ ಕಷ್ಟ ಸುಖಗಳಿಗೆ...
ಸುದ್ದಿ

ಜೆ ಎನ್ ಯು ವಿಶ್ವ ವಿದ್ಯಾಲಯದಲ್ಲಿ ಭಯೋತ್ಪಾದಕರನ್ನು ಸೃಷ್ಠಿಸುತ್ತಿದ್ದಾರೆ ; ಲೇಡಿ ಟೈಗರ್ ಚೈತ್ರ ಕುಂದಾಪುರ ಮಂಗಳೂರಿನಲ್ಲಿ ವಿಚಾರವಾದಿಗಳ ವಿರುದ್ಧ ಘರ್ಜನೆ – ಕಹಳೆ ನ್ಯೂಸ್

ಮಂಗಳೂರು, ಸೆ 6 : ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ವತಿಯಿಂದ ಇಂದು ಸನಾತನ ಸಂಸ್ಥೆಯನ್ನು ನಿಷೇಧಿಸದಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಜೆ ಎನ್ ಯು ವಿದ್ಯಾಲಯದ ವಿರುದ್ಧ ಘೋಷಣೆಗಳು ಕೇಳಿ ಬಂದವು. ಜೆ ಎನ್ ಯು ಸಂಸ್ಥೆ ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿದೆ. ಅಲ್ಲಿ ವ್ಯಾಸಂಗ ಮಾಡಿ ಹೊರ ಬರುವ ವಿದ್ಯಾರ್ಥಿಗಳು ಭಯೋತ್ಪಾದಕರು ಎಂದು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡ ಹಿಂದೂ ಸಂಘಟನೆ ನಾಯಕಿ ಚೈತ್ರ ಕುಂದಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ...
ಸುದ್ದಿ

Breaking News : ರೇಬೀಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 67 ಮಂದಿಗೆ ರೇಬೀಸ್! – ಕಹಳೆ ನ್ಯೂಸ್

ಮಂಗಳೂರು: ರೇಬೀಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಿ ಇಡೀ ಊರಿನ ಜನ ರೇಬೀಸ್ ಚುಚ್ಚುಮದ್ದು ಪಡೆದುಕೊಳ್ಳಬೇಕಾದ ಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇಚ್ಲಂಪಾಡಿ ಎಂಬಲ್ಲಿ ಎದುರಾಗಿದೆ. ಯುವಕ ಆಶಿತ್ ಆಗಸ್ಟ್ 22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಈತನ ಮೃತದೇಹವನ್ನು ಮನೆ ಮಂದಿಗೆ ನೀಡುವ ಸಂದರ್ಭದಲ್ಲಿ, ರೇಬೀಸ್ ವೈರಾಣುವಿನಿಂದ ಯುವಕ ಮೃತಪಟ್ಟಿದ್ದಾನೆ ಎನ್ನುವ ಕಾರಣ ನೀಡಲಾಗಿತ್ತು. ಅಲ್ಲದೆ ಮೃತದೇಹವನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಸೂಚನೆಯನ್ನೂ...
ಸುದ್ದಿ

ಮಂಡೆಕೋಲು ಗ್ರಾಮ ಪಂಚಾಯತ್ ಕಚೇರಿಯೊಳಗೆ ಕಾಳಿಂಗ ಸರ್ಪ ; ಪಿಲಿಕುಳ ನಿಸರ್ಗಧಾಮಕ್ಕೆ ರವಾನೆ – ಕಹಳೆ ನ್ಯೂಸ್

ಮಂಡೆಕೋಲು : ಗ್ರಾಮ ಪಂಚಾಯತ್.ನ ತಳಮಹಡಿಯ ಹಾಲಿನೊಳಗೆ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪವೊಂದು ಏಕಾಏಕಿ ನುಗ್ಗಿ ಕೆಲವು ಕಾಲ ಗ್ರಾಮಪಂಚಾಯತ್ ಸಿಬ್ಬಂದಿಗಳಿಗೆ ಹಾಗೂ ಸ್ಥಳೀಯರಲ್ಲಿ ಕೆಲವು ಸಮಯ ಆತಂಕ ಮೂಡಿಸಿತು. ಕೊನೆಗೆ ಹಾವು ಹಿಡಿಯುವ ತಜ್ನರಾದ ಶಾಮ್ ಭಟ್ ಹಾಗೂ ನಿವೃತ್ತ ಅರಣ್ಯಾಧಿಕಾರಿಗಳಾದ ಶಿವರಾಮ್ ಬಲ್ಯಾಯ ಇವರು ಹಾವನ್ನು ಸ್ಥಳೀಯರ ನೆರವಿಂದ ಹಿಡಿದು ಪಿಲಿಕುಳ ನಿಸರ್ಗ ಧಾಮಕ್ಕೆ ಒಪ್ಪಿಸಲಾಯಿತು.‌...
ಸುದ್ದಿ

ಕಸ್ತೂರಿರಂಗನ್ ವರದಿ ಜಾರಿಗೆ 6 ತಿಂಗಳು ಅವಕಾಶ – ಕಹಳೆ ನ್ಯೂಸ್

ಕೊಚ್ಚಿ ಹಾಗೂ ಕೊಡಗಿನಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪಗಳು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮೇಲೆಯೂ ಪರಿಣಾಮ ಬೀರಿದಂತಿದೆ. ವಿಳಂಬಗೊಳ್ಳುತ್ತಿರುವ ಕಸ್ತೂರಿರಂಗನ್ ವರದಿ ಅನುಷ್ಠಾನ ಪ್ರಕ್ರಿಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಧಿಕರಣ, ಇನ್ನು 6 ತಿಂಗಳೊಳಗೆ ಈ ವರದಿ ಜಾರಿ ಮಾಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ. ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮಪ್ರದೇಶಗಳಲ್ಲಿ ಇನ್ನಷ್ಟು ಬದಲಾವಣೆ ಮಾಡುವುದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿರುವುದರಿಂದ ಅಂತಹ ಯಾವುದೇ ಪ್ರಕ್ರಿಯೆ ಕೈಗೊಳ್ಳಬಾರದು...
ಸುದ್ದಿ

ಅಕ್ರಮ ಚಿನ್ನಾಭರಣ ಸಾಗಾಟ ; ಕಾಸರಗೋಡಿನ ನೆಲ್ಲಿಕುಂಜೆಯ ಅಬ್ದುಲ್ ಸಅದ್ ಮತ್ತು ಸಮೀರ್ ಬಂಧನ – ಕಹಳೆ ನ್ಯೂಸ್

ಕಾಸರಗೋಡು, ಸೆ 3 : ಅಕ್ರಮವಾಗಿ ಚಿನ್ನಾಭರಣ ಸಾಗಾಟ ನಡೆಸುತ್ತಿದ್ದ ಆರೋಪಿಗಳನ್ನು ಚಿನ್ನಾಭರಣ ಸಹಿತ ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ನೆಲ್ಲಿಕುಂಜೆಯ ಅಬ್ದುಲ್ ಸಅದ್(30) ಮತ್ತು ಸಮೀರ್(30) ಎಂದು ಗುರುತಿಸಲಾಗಿದೆ. ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಿಂದ ಇವರನ್ನು ಬಂಧಿಸಲಾಗಿದ್ದು, ಸುಮಾರು 1.2ಕಿಲೋ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣ ಮೂಲಕ ಅಕ್ರಮವಾಗಿ ಆರೋಪಿಗಳು ಕಾಸರಗೋಡಿಗೆ ಚಿನ್ನಾಭರಣ ಸಾಗಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು...
ಸುದ್ದಿ

ಹುಟ್ಟುವುದಕ್ಕೂ – ಅವತರಿಸುವುದಕ್ಕೂ ವ್ಯತ್ಯಾಸವಿದೆ ; ಕೃಷ್ಣಕಥಾದಲ್ಲಿ ರಾಘವೇಶ್ವರ ಶ್ರೀ ಅಭಿಮತ – ಕಹಳೆ ನ್ಯೂಸ್

ಭೂಮಿಯಲ್ಲಿ ಹುಟ್ಟುವುದಕ್ಕೂ , ಅವತರಿಸುವುದಕ್ಕೂ ವ್ಯತ್ಯಾಸವಿದೆ. ಭಗವಂತ  ಉದ್ದೇಶವನ್ನಿಟ್ಟುಕೊಂಡು ಭೂಮಿಗೆ ಮನುಷ್ಯರೂಪದಲ್ಲಿ ಇಳಿದು ಬರುವುದು ಅವತಾರವಾಗಿದೆ. ಕೃಷ್ಣಪರಮಾತ್ಮ ಧರ್ಮಗ್ಲಾನಿಯನ್ನು ತಡೆಗಟ್ಟಲು ಅವತರಿಸಿದ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಶ್ರೀಕೃಷ್ಣಾಷ್ಟಮಿಯ ಪ್ರಯುಕ್ತ ನಡೆಯುತ್ತಿರುವ 'ಕೃಷ್ಣಾಕಥಾ' ವಿಶಿಷ್ಟ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಶ್ರೀಕೃಷ್ಣನ ಜನನ ಸಂಧರ್ಭದ ಕಥಾಪ್ರವಚನವನ್ನು ಮಾಡಿದ ಶ್ರೀಗಳು, ತ್ರೇತಾಯುಗದಲ್ಲಿ ಶ್ರೀರಾಮ 12 ನೇ ತಿಂಗಳಲ್ಲಿ  ಕೌಸಲ್ಯೆಯ ಉದರದಿಂದ ಜನಿಸಿದರೆ, ದ್ವಾಪರದಲ್ಲಿ ಶ್ರೀಕೃಷ್ಣ 8 ನೇ ತಿಂಗಳಲ್ಲಿ ಧರೆಗವತರಿಸಿದ....
1 1,381 1,382 1,383 1,384 1,385 1,459
Page 1383 of 1459