Wednesday, May 6, 2026

archivekahale news

ಸುದ್ದಿ

ಧರ್ಮಸ್ಥಳದಲ್ಲಿ ಫೆ.16ರಿಂದ ಮಹಾಮಸ್ತಕಾಭಿಷೇಕ: ವೀರೇಂದ್ರ ಹೆಗ್ಗಡೆ – ಕಹಳೆ ನ್ಯೂಸ್

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ.9ರಿಂದ ತೋರಣ ಮುಹೂರ್ತ ನಡೆಯಲಿದೆ. 2019ರ ಫೆ.16ರಿಂದ ಬಾಹುಬಲಿ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೊಷಿಸಿದರು. ಕಾರ್ಕಳ ದಾನಶಾಲೆ ಪಟ್ಟಣ ಶೆಟ್ಟಿ ಮೈದಾನದಲ್ಲಿ ಸೋಮವಾರ ಆಯೋಜಿಸಲಾದ 108 ಮುನಿ ಶ್ರೀವೀರಸಾಗರ ಮಹಾರಾಜರ ಭವ್ಯ ಮಂಗಲ ವರ್ಷಾಯೋಗ ಸಂದರ್ಭ ದಶಲಕ್ಷಣ ಪರ್ಯುಷಣ ಪರ್ವ ಪೂಜಾ ಮಹೋತ್ಸವ ಹಾಗೂ ಕ್ಷಮಾವಾಣಿ ಧಾರ್ವಿುಕ ಸಮಾರಂಭದಲ್ಲಿ ಮಾತನಾಡಿ, ಶ್ರೀ ವೀರಸಾಗರ ಮಹಾರಾಜರ ಉಪಸ್ಥಿತಿಯಲ್ಲಿ ಧಾರ್ವಿುಕ ವಿಧಿವಿಧಾನ...
ಸುದ್ದಿ

5ಮಂದಿ ಯುವಕರ ತಂಡದಿಂದ ಓರ್ವನ ಮೇಲೆ ಹಲ್ಲೆ – ಕಹಳೆ ನ್ಯೂಸ್

ಮೂಡಬಿದಿರೆ: ಸೋಮವಾರ ಬೆಳ್ಳಂಬೆಳಗ್ಗೆ ಮೂಡಬಿದಿರೆ ಸಮೀಪದ ಗಂಟಾಲ್ ಕಟ್ಟೆಯಲ್ಲಿ ಇಬ್ರಾಹಿಂ(39)ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಇನ್ನೋವಾ ಕಾರಿನಲ್ಲಿ ಬಂದ 5ಮಂದಿಯ ತಂಡ ಈ ಕೃತ್ಯ ಎಸಗಿದೆ. ಘಟನೆಯಿಂದಾಗಿ ಇಬ್ರಾಹಿಂ ಅವರ ತಲೆ, ಬಲಭುಜ ಹಾಗೂ ಎಡಕೈಗಳಿಗೆ ಗಾಯಗಳಾಗಿವೆ. ಯುವಕರ ತಂಡ ಈ ಕೃತ್ಯ ಎಸಗಿದೆ ಎಂದು ಮೂಡಬಿದಿರೆ ಪೊಲೀಸರು ಮಾಹಿತಿ ನೀಡಿದ್ದಾರೆ. ಗಂಟಾಲ್ಕಟ್ಟೆ ಮಸೀದಿ ಸಮೀಪದಲ್ಲೇ ಇರುವ ಬದ್ರಿಯಾ ಹೊಟೇಲ್‍ನಲ್ಲಿ ಇಬ್ರಾಹಿಂ ಅಡುಗೆ ಸಹಾಯಕನಾಗಿದ್ದ. ಹಲ್ಲೆಗೊಳಗಾದ ಇಬ್ರಾಹೀಂ ಎಂಬಾತ ಈ...
ಸುದ್ದಿ

ವಿವೇಕಾನಂದರ ವಿಚಾರಧಾರೆ ಅರಿತರೆ ಜಗತ್ತನ್ನೇ ಅರ್ಥೈಸಿಕೊಳ್ಳಲು ಸಾಧ್ಯ: ಚಕ್ರವರ್ತಿ ಸೂಲಿಬೆಲೆ – ಕಹಳೆ ನ್ಯೂಸ್

ಸುಳ್ಯ: ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಜಾತಿ, ಧರ್ಮ, ಭಾಷೆ, ದೇಶಗಳ ಎಲ್ಲೆಯನ್ನು ಮೀರಿದ ವಿಶ್ವವ್ಯಾಪಿ ಚಿಂತನೆ. ವಿಶ್ವಮಾನವರಾದ ವಿವೇಕಾನಂದರನ್ನು ಮತ್ತು ಅವರ ವಿಚಾರಧಾರೆಗಳನ್ನು ಅರಿತರೆ ಈ ಜಗತ್ತನ್ನೇ ಅರ್ಥೈಸಿಕೊಳ್ಳಲು ಸಾಧ್ಯ ಎಂದು ಯುವಾ ಬ್ರಿಗೇಡ್‍ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ  ಮತ್ತು ಸೋದರಿ ನಿವೇದಿತಾರ 150ನೇ ವರ್ಷಾಚರಣೆಯ ಅಂಗವಾಗಿ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಮತ್ತೊಮ್ಮೆ ದಿಗ್ವಿಜಯ...
ಸುದ್ದಿ

ದೇನಾ ಬ್ಯಾಂಕ್ ಜತೆ ವಿಜಯ ಬ್ಯಾಂಕ್ ವಿಲೀನಕ್ಕೆ ರಮಾನಾಥ ರೈ ವಿರೋಧ – ಕಹಳೆ ನ್ಯೂಸ್

ಮಂಗಳೂರು: ದೇನಾ ಬ್ಯಾಂಕ್ ಜತೆ ವಿಜಯ ಬ್ಯಾಂಕ್ ವಿಲೀನಕ್ಕೆ ಮಾಜಿ ಸಚಿವ ರಮಾನಾಥ ರೈ ವಿರೋಧ ವ್ಯಕ್ತಪಡಿಸಿದ್ದಾರೆ. 87 ವರ್ಷಗಳ ಇತಿಹಾಸವುಳ್ಳ, ಲಾಭದಾಯಕ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ದೇನಾ ಮತ್ತು ಬರೋಡಾ ಬ್ಯಾಂಕ್ ಜತೆ ವಿಲೀನಗೊಳಿಸುವುದು ಸರಿಯಲ್ಲ. ಜಿಲ್ಲೆಯ ಹೆಮ್ಮೆ ಆಗಿರುವ ಬ್ಯಾಂಕನ್ನು ಇಲ್ಲವಾಗಿಸುವ ಯತ್ನ ನಡೆಯುತ್ತಿದೆ. ಜಿಲ್ಲೆಯ ಜನತೆ ಇದನ್ನು ಒಟ್ಟಾಗಿ ವಿರೋಧಿಸಬೇಕಿದೆ. ಹೋರಾಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ...
ಸುದ್ದಿ

ಆಂಬುಲೆನ್ಸ್​ಗೆ ಟ್ರ್ಯಾಕ್ಟರ್​ ಡಿಕ್ಕಿ: ಪತಿ ಶವ ಸಾಗಿಸುತ್ತಿದ್ದ ವೇಳೆ ಮೃತಪಟ್ಟ ಪತ್ನಿ – ಕಹಳೆ ನ್ಯೂಸ್

ರಾಯಚೂರು: ಅನಾರೋಗ್ಯದಿಂದ ಮೃತಪಟ್ಟ ಪತಿಯ ಶವವನ್ನು ಆಂಬುಲೆನ್ಸ್​ನಲ್ಲಿ ಮನೆಗೆ ಸಾಗಿಸುತ್ತಿದ್ದ ಪತ್ನಿ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ ಮಸ್ಕಿ ತಾಲೂಕಿನ ಸಂತೆ ಕೆಲೂರು ಬಳಿ ನಡೆದಿದೆ. ಗಂಗಪ್ಪ ಎಂಬುವರು ಅನಾರೋಗ್ಯದಿಂದ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಆಸ್ಪತ್ರೆಯಲ್ಲೇ ಮೃತಪಟ್ಟ ಅವರ ಶವವನ್ನು ಆಂಬುಲೆನ್ಸ್​ನಲ್ಲಿ ಸ್ವಗ್ರಾಮ ಸುರಪುರಕ್ಕೆ ತೆಗೆದುಕೊಂಡು ಬರಲಾಗುತ್ತಿತ್ತು. ಮಸ್ಕಿ ಬಳಿ ಆಂಬುಲೆನ್ಸ್​ಗೆ ಟ್ರ್ಯಾಕ್ಟರ್​ ಡಿಕ್ಕಿ ಹೊಡೆದು ಅದರಲ್ಲಿದ್ದ ಗಂಗಪ್ಪ ಪತ್ನಿ ಶ್ರೀದೇವಿ (30) ಸೇರಿ ನಾಲ್ವರು ತೀವ್ರ ಗಾಯಗೊಂಡಿದ್ದರು. ಶ್ರೀದೇವಿಯವರನ್ನು ಮಸ್ಕಿ...
ಸುದ್ದಿ

ವೈಯಕ್ತಿಕ ದ್ವೇಷವಿಲ್ಲ, ಸಂಧಾನಕ್ಕೆ ‌ಒಪ್ಪುವುದಿಲ್ಲ: ಪಾನಿಪುರಿ ಕಿಟ್ಟಿ – ಕಹಳೆ ನ್ಯೂಸ್

ಬೆಂಗಳೂರು: ವೈಯಕ್ತಿಕವಾಗಿ ನನಗೂ, ವಿಜಯ್​ಗೂ ದ್ವೇಷವಿಲ್ಲ. ನನ್ನ ಅಣ್ಣನ ಮಗ ಮಾರುತಿಗೌಡ ಮೇಲೆ ಹಲ್ಲೆ ನಡೆದಿದ್ದು, ಇಂತಹ ಘಟನೆಯಿಂದ ಎಂಥವರಿಗೂ ಸಿಟ್ಟು ಬರುತ್ತದೆ. ಪ್ರಕರಣದಲ್ಲಿ ನಾನು ಕಾನೂನು ಮೊರೆ ಹೋಗಿದ್ದೇನೆ. ಅಲ್ಲದೆ, ಫಿಲಂ ಛೇಂಬರ್​ಗೂ ದೂರು ನೀಡಿದ್ದು, ಅವರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಪಾನಿಪುರಿ ಕಿಟ್ಟಿ ತಿಳಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ನಟನಾಗಲಿ ಇನ್ನೊಬ್ಬರಿಗೆ ಮಾದರಿ ಆಗಬೇಕು. ಹಾಗಂತ ವಿಜಿ ವಿರುದ್ಧ ರೌಡಿ ಶೀಟರ್ ತೆರೆಯಲಿ ಎಂದು ನಾನು...
ಸುದ್ದಿ

ಡೆತ್ ನೋಟ್ ಬರೆದಿಟ್ಟು ಬಿಲ್ಡರ್ ಆತ್ಮಹತ್ಯೆ – ಕಹಳೆ ನ್ಯೂಸ್

ಉಡುಪಿ: ಖಾಸಗಿ ಶಿಪ್ ನ‌ ಮಾಜಿ ಉದ್ಯೋಗಿ, ಬಿಲ್ಡರ್ ಆಗಿದ್ದವರೊಬ್ಬರು ಹೊಟ್ಟೆಗೆ ಚಾಕು ಚುಚ್ಚಿಕೊಂಡು ತುಂಬಾ ಭೀಕರವಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಮಣಿಪಾಲದಲ್ಲಿ ನಡೆದಿದೆ. ಒಲಿವೆರಾ ಲೂಯಿಸ್ (68), ಹೊಟ್ಟೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡವರು. ನಿನ್ನೆ ತಡರಾತ್ರಿ ಮಣಿಪಾಲದ ಸಂಬಂಧಿಕರ ಮನೆಗೆ ಆಗಮಿಸಿದ್ದು, ಇಂದು ಮುಂಜಾನೆ ಮನೆಯ ಸಮೀಪ ತಮ್ಮ ಫೋರ್ಡ್ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಗೆ ಡೆತ್ ನೋಟ್ ಬರೆದಿರುವ ಒಲಿವೆರಾ ಲೂಯಿಸ್, ನನ್ನ ಸಾವಿಗೆ ನಾನೇ ಕಾರಣ....
ಸುದ್ದಿ

ಪ್ರಜ್ಞೆ ತಪ್ಪಿಸಿ ಪ್ರಯಾಣಿಕನೊಬ್ಬನ  ಚಿನ್ನ, ನಗದು ದರೋಡೆ – ಕಹಳೆ ನ್ಯೂಸ್

ಕಾಸರಗೋಡು:  ಪ್ರಯಾಣಿಕನೋರ್ವನಿಗೆ  ಪ್ರಜ್ಞೆ ತಪ್ಪಿಸಿ   ಚಿನ್ನ- ನಗದು ದರೋಡೆ ಗೈದ ಘಟನೆ  ರೈಲಿನಲ್ಲಿ ನಡೆದಿದೆ.  ಮುಂಬೈ ಯಿಂದ  ಊರಿಗೆ ರೈಲಿನಲ್ಲಿ ಬರುತ್ತಿದ್ದ ಮರಳುತ್ತಿದ್ದ ಪಾಲಕ್ಕಾಡ್ ನ ಅರುಣ್ ಎಂಬವರು ದರೋಡೆಗೊಳಗಾದವರು. ಉದ್ಯೋಗ ಹುಡುಕಿಕೊಂಡು ಕೆಲ ದಿನಗಳ ಹಿಂದೆ ಅರುಣ್ ಮುಂಬೈ ಗೆ ತೆರಳಿದ್ದು , ಕೆಲಸ ಸರಿಯಾದಾಗ ಹಿನ್ನಲೆಯಲ್ಲಿ  ಹಾಪಾ  ಎಕ್ಸ್  ಪ್ರೆಸ್  ರೈಲಿನಲ್ಲಿ ಮರಳುತ್ತಿದ್ದಾಗ ಘಟನೆ ನಡೆದಿದೆ. ರೈಲಿನಲ್ಲಿ  ಹಿಂದಿ ಮಾತನಾಡುವ  ಪ್ರಯಾಣಿಕನೋರ್ವ ಪರಿಚಯವಾಗಿದ್ದು, ದಾರಿ ಮಧ್ಯೆ ಈತ ...
1 1,375 1,376 1,377 1,378 1,379 1,459
Page 1377 of 1459