Wednesday, May 6, 2026

archivekahale news

ಸುದ್ದಿ

ಝೋನಲ್ ರೆಗ್ಯುಲೇಶನ್ ಜಾರಿಗೊಳಿಸಿ ಮನೆ ನಿರ್ಮಾಣಕ್ಕೆ ಶೀಘ್ರ ಪರವಾನಿಗೆ: ಉಮಾನಾಥ ಕೋಟ್ಯಾನ್ – ಕಹಳೆ ನ್ಯೂಸ್

ಮೂಡುಬಿದಿರೆ: ಮಂಗಳೂರು ಮುಡಾ ಝೋನಲ್ ರೆಗ್ಯುಲೇಶನ್ ಅನ್ವಯಿಸಲು ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರು ಅವಕಾಶ ಕಲ್ಪಿಸಿ ಪರವಾನಿಗೆ ಪಡೆಯಲು ನಿಯಮಗಳನ್ನು ಸರಳಗೊಳಿಸಲಾಗಿದ್ದು, ಇನ್ನು ಮುಂದೆ ಮೂಡುಬಿದಿರೆಯಲ್ಲಿ ಮನೆ ನಿರ್ಮಾಣಕ್ಕೆ ಶೀಘ್ರ ಪರವಾನಿಗೆ ಲಭ್ಯವಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ. ಅವರು ಮೂಡುಬಿದಿರೆ ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದರು. ಕಳೆದ ನಾಲ್ಕು ವರ್ಷಗಳಿಂದ ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಬಿಗಿ ನಿಯಮಾವಳಿಗಳಿಂದಾಗಿ ಬಡವರಿಗೆ ಮನೆ ಕಟ್ಟಲು ಪರವಾನಿಗೆ...
ಸುದ್ದಿ

ನಿಷೇಧಿತ ಸ್ಥಳದಲ್ಲಿ ಗಾಂಜಾ ಮಾರಾಟ ಜಾಲ ಪತ್ತೆ: ಮೂವರ ಬಂಧನ – ಕಹಳೆ ನ್ಯೂಸ್

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಗಾಂಜಾ ಹಾಗೂ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನ ಬಂಧಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ. ಬಂಧಿತರನ್ನ ಕೈಕಂಬ ಗುರುಪುರದ ಮಹಮ್ಮದ್ ಶಾಕೀರ್, ಪಂಜಿಮೊಗರುವಿನ ನದೀಮ್ ಹಾಗೂ ಕಾವೂರಿನ ಫಕ್ರುದ್ದೀನ್ ಎಂದು ಗುರುತಿಸಲಾಗಿದೆ. ಈ ಮೂವರು ಮಂಗಳೂರಿನ ಕುಂಟಿಕಾನ ಸನ್ ರಾಯಲ್ ರೆಸಿಡೆನ್ಸಿ ಎದುರು ಗಾಂಜಾ ಎಂ.ಡಿ.ಎಂ.ಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು. ಈ ಕುರಿತಾದ ಖಚಿತ ಮಾಹಿತಿ ಮೇರೆಗೆ...
ಕ್ರೀಡೆಸುದ್ದಿ

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ಟೈನಲ್ಲಿ ಅಂತ್ಯ – ಕಹಳೆ ನ್ಯೂಸ್

ನವದೆಹಲಿ: ಏಷ್ಯಾಕಪ್ ಸೂಪರ್ 4 ಹಂತದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಆದರೆ ಅದ್ಬುತ ಪ್ರದರ್ಶನ ನೀಡಿದ ಅಫ್ಘಾನಿಸ್ತಾನದ ಚಾಂಪಿಯನ್ ಆಟ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಏಷ್ಯಾ ಕಪ್ ಟೂರ್ನಿಯುದ್ದಕ್ಕೂ ಪಾಕಿಸ್ಥಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳಿಗೆ ಚಳಿ ಹುಟ್ಟಿಸಿದ್ದ ಈಗ ತಾನೇ ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲಿಡುತ್ತಿರುವ ಅಫ್ಘಾನ್ ತಂಡವು ನಿನ್ನೆ ನಡೆದ 'ಸೂಪರ್ 4 ಹಂತದ ಪಂದ್ಯದಲ್ಲಿ ಭಾರತಕ್ಕೆ ಶಾಕ್ ನೀಡಿ ಪಂದ್ಯವನ್ನು...
ಸುದ್ದಿ

ನಟಿ ಜಯಪ್ರದಾ ನೇಪಾಳ ಸರ್ಕಾರ ಸೌಹಾರ್ಧದ ರಾಯಭಾರಿಯಾಗಿ ನೇಮಕ – ಕಹಳೆ ನ್ಯೂಸ್

ನವದೆಹಲಿ: ಮಾಜಿ ಸಂಸತ್‌ ಸದ್ಯಸ್ಯೆ ಮತ್ತು ಬಾಲಿವುಡ್‌ ನಟಿ ಜಯಪ್ರದಾ ಅವರನ್ನು ರಾಯಭಾರಿಯನ್ನಾಗಿ ನೇಮಿಸುವ ಪ್ರಸ್ತಾವವನ್ನು ನೇಪಾಳದ ಸಂಸತ್​ನಲ್ಲಿ ಸರ್ವಾನುಮತದಿಂದ ಅಂಗೀಕರಿಸಿತು. ಅವರನ್ನು ನೇಪಾಳ ಸರ್ಕಾರ ಸೌಹಾರ್ಧದ ರಾಯಭಾರಿಯನ್ನಾಗಿ ನೇಮಿಸಿದೆ. ಜಯಪ್ರದಾ ಅವರು ರಾಯಭಾರಿ ಹುದ್ದೆಗೆ ನಾಮನಿರ್ದೇಶನಗೊಂಡಾಗ ನೆರೆಹೊರೆ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಬಲಗೊಳಿಸುವ ಮತ್ತು ನೇಪಾಳದ ಪ್ರವಾಸೋದ್ಯಮವನ್ನು ಭಾರತದಲ್ಲಿ ಉತ್ತೇಜಿಸಲು ನೆರವಾಗಲಿದೆ ಎಂದು ಆಯ್ಕೆಗೂ ಮುನ್ನ ನಿರೀಕ್ಷೆ ಹೊಂದಲಾಗಿತ್ತು. ನಾಲ್ಕು ವರ್ಷಗಳ ಕಾಲ ಜಯಪ್ರದಾ ಅವರು ರಾಯಭಾರಿಯಾಗಿರಲಿದ್ದಾರೆ....
ಕ್ರೀಡೆಸುದ್ದಿ

ಇಂದು ಭಾರತಕ್ಕೆ ಸೆಮಿಪೈನಲ್ ಪಂದ್ಯ – ಕಹಳೆ ನ್ಯೂಸ್

ದೆಹಲಿ: ಸಂಪ್ರಾದಾಯಿಕ ಎದುರಾಳಿ ಪಾಕಿಸ್ಥಾನದ ವಿರುದ್ದ ಜಯಭೇರಿಯನ್ನು ಸಾಧಿಸಿದ ಭಾರತ ತಂಡವು ಇಂದು ಅಫ್ಘಾನಿಸ್ತಾನದ ವಿರುದ್ದ ಸೆಣಸಾಡಲಿದೆ. ಇದೊಂದು ರೋಚಕ ಪಂದ್ಯವಾಗಿದ್ದು ಯಾವ ತಂಡ ಫೈನಲ್‌ಗೆ ಪ್ರವೇಶಿಸುತ್ತದೆ ಎಂಬುದು ಈ ಮ್ಯಾಚ್‌ನಲ್ಲಿ ತಿಳಿಯಲಿದೆ. ಮೊನ್ನೆ ತಾನೆ ಪಾಕ್ ವಿರುದ್ದ ಭರ್ಜರಿ ಜಯಭೇರಿ ಸಾಧಿಸಿದ ಭಾರತದ ರೋಹಿತ್ ಪಡೆ ಇಂದು ಇನ್ನೊಂದು ತಂಡದ ವಿರುದ್ದ ಹೋರಾಟಕ್ಕೆ ಇಳಿಯಲಿದೆ. ಸಂಜೆ 5 ಗಂಟೆಗೆ ಶುರುವಾಗಲಿರುವ ಈ ಪಂದ್ಯಾಟವು ದುಬೈನಲ್ಲಿ ನಡೆಯಲಿದೆ. ವಿರಾಟ್ ಫಿಟ್‌ನೆಸ್...
ಸುದ್ದಿ

ಮೋದಿಗೆ ನೊಬೆಲ್ ಶಾಂತಿ ಸಿಗಬೇಕೆಂದು ಡಾ. ತಮಿಳ್ ಸಾಯಿ ಮನವಿ – ಕಹಳೆ ನ್ಯೂಸ್

ಚೆನ್ನೈ: ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ ಡಾ.ತಮಿಳ್ ಸಾಯಿ ಸೌಂದರಾಜನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಸೂಚಿಸಿದ್ದಾರೆ. ವಿಶ್ವದ ಅತೀ ದೊಡ್ಡ ಆರೋಗ್ಯ ವಿಮೆ ಆಯುಷ್ಮಾನ್ ಭಾರತವನ್ನು ಉದ್ಘಾಟಿಸಿದ ಮೋದಿ ಅವರಿಗೆ ಈ ಗೌರವ ಸಿಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಆಯುಷ್ಮಾನ್ ಭಾರತ ಯೋಜನೆಯೂ ಕೋಟ್ಯಂತರ ಬಡವರ ಬದುಕಿನ ಆಶಾಕಿರಣವಾಗಲಿದೆ. ಇದು ಹಲವರ ಬದುಕನ್ನು ಬದಲಿಸಲಿದೆ" ಎಂದು...
ಸುದ್ದಿ

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ – ಕಹಳೆ ನ್ಯೂಸ್

ಪುತ್ತೂರು: ಹದಿನೆಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯು ಬೆಂಗಳೂರು ಏರ್ ಪೋರ್ಟ್ ನಲ್ಲಿ ಪತ್ತೆ ಮಾಡಲಾಗಿದ್ದು ದಸ್ತಗಿರಿ ಮಾಡುವ ವೇಳೆ ಬೆಳಕಿಗೆ ಬಂದಿದೆ. ಪುತ್ತೂರಿನ ಬನ್ನೂರಿನ ನಿವಾಸಿಯಾದ ಸಿಗ್ಬತ್ 2001ರಲ್ಲಿ ಪುತ್ತೂರಿನ ಮದುವೆಯೊಂದರಲ್ಲಿ ತಕರಾರು ಪಂಚಾಯಿತಿ ವೇಳೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದನು. ಇವನ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಾಲಾಗಿತ್ತು. ಇವನು ನಂತರ ಪೊಲೀಸರ ಕಣ್ಣಿಗೆ ಮಣ್ಣೆರಚಿ ಊರು ಬಿಟ್ಟಿದ್ದ ಎನ್ನಲಾಗಿದೆ. ಇವನು ದುಬೈನಿಂದ ಬೆಂಗಳೂರು ಏರ್ ಪೋರ್ಟ್ ನಲ್ಲಿ ಬಂದಿಳಿದ...
ಸುದ್ದಿ

ನಕ್ಸಲ್ ಸಮರ್ಥಕರಾದ ಗಿರೀಶ್ ಕಾರ್ನಾಡ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ – ಕಹಳೆ ನ್ಯೂಸ್

ಮಂಗಳೂರು: ನಕ್ಸಲ್ ಸಮರ್ಥಕರಾದ ಸಾಹಿತಿ ಗಿರೀಶ್ ಕಾರ್ನಾಡ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಧಿಲ್‌ರವರಿಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ನಾನೂ ಕೂಡ ನಗರ ನಕ್ಸಲ್’ ಎಂಬ ಫಲಕವನ್ನು ತನ್ನ ಕೊರಳಿನಲ್ಲಿ ಧರಿಸಿಕೊಂಡು ನಕ್ಸಲರಿಗೆ ಬೆಂಬಲ ನೀಡಿದ ಘಟನೆ ನಡೆದಿತ್ತು ಈ ಹಿನ್ನಲೆಯಲ್ಲಿ ಹಿಂದೂಗಳಿಗೆ ಒಂದು ನ್ಯಾಯ ಮತ್ತು...
1 1,373 1,374 1,375 1,376 1,377 1,459
Page 1375 of 1459