Wednesday, May 6, 2026

archivekahale news

ಸುದ್ದಿ

ಅಕ್ರಮ ಸ್ಪೋಟಕ ಸಾಗಾಟ ಪತ್ತೆ: ಆರೋಪಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು: ಅಕ್ರಮವಾಗಿ ಸ್ಪೋಟಕಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಂಗಳೂರಿನ ಪೋಲೀಸರು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಬೆಳಕಿಗೆ ಬಂದಿದೆ. 70ರ ಹರೆಯದ ಚಿನ್ನಸ್ವಾಮಿ ಎಂಬಾತ ಪೂಂಜಾಲಕಟ್ಟೆಯಲ್ಲಿ ಅಕ್ರಮವಾಗಿ ಸ್ಪೋಟಕಗಳಾದ 15 ಜಿಲೆಟಿನ್ ಕಡ್ಡಿ, 99 ಡಿಟೋನೇಟರ್‌ಗಳನ್ನು ಹೋಂಡಾ ಆಕ್ಟಿವಾದಲ್ಲಿ ಸಾಗಿಸುತ್ತಾ ಇದ್ದು ಇವುಗಳ ಮೌಲ್ಯ ಸುಮಾರು ಒಂದು ಲಕ್ಷ ಎಂದು ಅಂದಾಜಿಸಲಾಗಿದೆ. ಮಂಗಳೂರಿನ ಪಿ.ಐ ಡಿ.ಸಿ.ಐ.ಬಿ ಪೊಲೀಸರ ಕಾರ್ಯಚರಣೆ ವೇಳೆ ಈ ಜಾಲ ಪತ್ತೆಯಾಗಿದ್ದು ಆರೋಪಿಯನ್ನು ಬಂಧಿಸಿ ಪುಂಜಾಲಕಟ್ಟೆ ಪೊಲೀಸ್...
ಸುದ್ದಿ

ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ – ಕಹಳೆ ನ್ಯೂಸ್

ಪುತ್ತೂರು: ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೋಮವಾರಪೇಟೆ ತಣ್ಣೀರುಹಳ್ಳಿ ಹನ್ನಪ್ಪರವರ ಪುತ್ರಿ ಜೀವಿತಾ ಟಿಎ ಸರಕಾರಿ ಹಾಸ್ಟೆಲ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಪೋಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆಯನ್ನು ನಡೆಸುತ್ತಿದ್ದಾರೆ....
ಸುದ್ದಿ

ಡಾ. ರಾಜ್​ ಅಪಹರಣ ಪ್ರಕರಣದ 9 ಆರೋಪಿಗಳ ಬಿಡುಗಡೆ – ಕಹಳೆ ನ್ಯೂಸ್

ಬೆಂಗಳೂರು: ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅಪಹರಣ ಪ್ರಕರಣದ ತೀರ್ಪು ಹೊರಬಿದ್ದಿದ್ದು, 9 ಆರೋಪಿಗಳನ್ನು ಬಿಡುಗಡೆ ಮಾಡಿ ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ 3ನೇ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ. 2000 ರ ಜುಲೈ 30ರಂದು ರಾಜ್​ಕುಮಾರ್​ ಅವರನ್ನು ಕಾಡುಗಳ್ಳ ವೀರಪ್ಪನ್​ ಅಪಹರಣ ಮಾಡಿದ್ದ. ಸುಮಾರು 108 ದಿನ ಅವರನ್ನು ಬಂಧಿಸಿಟ್ಟಿದ್ದ. ತತ್ಸಬಂಧ ವೀರಪ್ಪನ್​, ಆತನ ಪತ್ನಿ ಸೇರಿ ಸುಮಾರು 25 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಅದರಲ್ಲಿ 13 ಜನರು ಜೈಲಿನಲ್ಲಿದ್ದರು....
ಸುದ್ದಿ

ಆರ್ಥಿಕ ವ್ಯವಹಾರದ ನಷ್ಟದಿಂದ ಜ್ಯುವೆಲ್ಲರಿ ಮಾಲೀಕ ಆತ್ಮಹತ್ಯೆಗೆ ಶರಣು – ಕಹಳೆ ನ್ಯೂಸ್

ಉಡುಪಿ: ಕುಂದಾಪುರದ ವಿಜಯಾ ಜ್ಯುವೆಲ್ಲರಿ ಅಂಗಡಿ ಮಾಲೀಕ ಶ್ರೀನಿವಾಸ ಶೇಟ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ. ಶ್ರೀನಿವಾಸ್ ಶೇಟ್ (57), ಆತ್ಮಹತ್ಯೆ ಮಾಡಿಕೊಂಡವರು. ಕುಂದಾಪುರದ ಅನಗಳ್ಳಿ ಸೇತುವೆಗೆ ಹಾರಿ ಆತ್ನಹತ್ಯೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ ಶೇಟ್ ಕುಂದಾಪುರದ ವಿಜಯಾ ಜ್ಯುವೆಲ್ಲರಿ ಮಾಲೀಕನಾಗಿದ್ದು, ಆರ್ಥಿಕ ವ್ಯವಹಾರದಲ್ಲಿ ನಷ್ಟದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಸುದ್ದಿ

ಕ್ಯಾಪ್ಟನ್‌ ಆಗಿ ಪದೋನ್ನತಿ, ದೇಶಸೇವೆ ಮಾಡುವ ಸುಯೋಗ: ಶಮನ್‌ ಶೆಟ್ಟಿ – ಕಹಳೆ ನ್ಯೂಸ್

ಶಿರ್ವ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 33ನೇ ರ್‍ಯಾಂಕ್‌ ಪಡೆದು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಆಗಿದ್ದ ಶಿರ್ವ ಸಮೀಪದ ಸೂಡದ ಯುವಕ ಶಮನ್‌ ಶೆಟ್ಟಿ ಕ್ಯಾಪ್ಟನ್‌ ಆಗಿ ಪದೋನ್ನತಿ ಪಡೆದಿದ್ದಾರೆ. ಮುಂಬಯಿ ಉದ್ಯಮಿ, ಉಡುಪಿ ಬೈಲೂರು ಪಡುಮನೆ ದಿ| ಸುಧಾಕರ ಶೆಟ್ಟಿ ಮತ್ತು ಸೂಡ ಕಲ್ಲಬೈಲು ಶೋಭಾ ಶೆಟ್ಟಿ ದಂಪತಿಯ ಪುತ್ರರಾಗಿರುವ ಶಮನ್‌ ಶೆಟ್ಟಿ ಚೆನ್ನೈಯ ಆಫೀಸರ್ ಟ್ರೈನಿಂಗ್‌ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ 2017ರಲ್ಲಿ ಭಾರತೀಯ ಸೇನೆಯಲ್ಲಿ ಆಫೀಸರ್‌ ಲೆಫ್ಟಿನೆಂಟ್‌ ಆಗಿ ನೇಮಕಗೊಂಡಿದ್ದರು. ಭೂ...
ಸುದ್ದಿ

ದುಷ್ಕರ್ಮಿಗಳಿಂದ ಹಿಂದೂ ಮುಖಂಡನ ಕೊಲೆಯತ್ನ – ಕಹಳೆ ನ್ಯೂಸ್

ಗುರುಪುರ: ಹಿಂದೂ ಸಂಘಟನೆಯ ಮುಖಂಡ, ಪೊಳಲಿ ನಿವಾಸಿ ಹರೀಶ್‌ ಶೆಟ್ಟಿ(38) ಅವರನ್ನು ನಾಲ್ವರ ತಂಡವೊಂದು ಕಡಿದು ಕೊಲೆಗೆ ಯತ್ನಿಸಿದ ಘಟನೆ ಗುರುಪುರ  ಕೈಕಂಬ ಸಮೀಪದ ಗುರುಕಂಬಳ ಶಾಲೆಯ ಮುಂಭಾಗದ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ 8ರ ಸುಮಾರಿಗೆ  ಸಂಭವಿಸಿದೆ. ಹರೀಶ್‌ ಶೆಟ್ಟಿ ಅವರು ರಾಜ್‌ ಅಕಾಡೆಮಿ ಸಮೀಪ ಇರುವ ಪತ್ನಿ ಮನೆಗೆ ದಿನಸಿ ಸಾಮಗ್ರಿಗಳನ್ನು ಹಿಡಿದುಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಬೈಕ್‌ ಗುರುಕಂಬಳ ಸಮೀಪ ಸಾಗುತ್ತಿದ್ದಾಗ ಎರಡು ಬೈಕ್‌ಗಳಲ್ಲಿ  ಬಂದ ನಾಲ್ವರು ದುಷ್ಕರ್ಮಿಗಳ...
ಸುದ್ದಿ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಭಾರೀ ಮಳೆ: ತಗ್ಗು ಪ್ರದೇಶಗಳು ಜಲಾವೃತ – ಕಹಳೆ ನ್ಯೂಸ್

ಬೆಂಗಳೂರು: ಸೋಮವಾರ ರಾತ್ರಿ ಸಿಲಿಕಾನ್‌ ಸಿಟಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿ 10 ಗಂಟೆಯ ವೇಳೆಗೆ ಗುಡುಗು ಮಿಂಚಿನ ಅಬ್ಬರದಿಂದ ಆರಂಭವಾದ ಮಳೆ ನಿರಂತರವಾಗಿ ಸುರಿದಿದೆ. ಮೈಸೂರು ರಸ್ತೆ , ನಾಯಂಡಹಳ್ಳಿಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಕಾರೊಂದು ಕೊಚ್ಚಿ ಹೋದ ಬಗ್ಗೆ ವರದಿಯಾಗಿದೆ. ಮಲ್ಲೇಶ್ವರಂ, ಮತ್ತಿಕೆರೆ,ಬನ್ನೇರುಘಟ್ಟ ರಸ್ತೆಯ ಮೆಗಾ ಸಿಟಿ ಪ್ರದೇಶದಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಇಂದೂ ಮಳೆ...
ಸುದ್ದಿ

ನ್ಯಾಯಾಲಯದ ಮೆಟ್ಟಿಲೇರಿದ ಕಟೀಲು ಮೇಳ ವಿವಾದ ; ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲು – ಕಹಳೆ ನ್ಯೂಸ್

ಮಂಗಳೂರು, ಸೆ 25 : ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ವಿವಾದ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ಮೇಳಕ್ಕೆ ಸಂಬಂಧಿಸಿದ ಯಕ್ಷ ಧರ್ಮಭೋದಿನಿ ಚಾರಿಟೇಬಲ್ ಟ್ರಸ್ಟ್ ನ ವ್ಯವಹಾರಗಳ ಸಮರ್ಪಕವಾಗಿಲ್ಲ ಎಂಬುದಾಗಿ ಜಿಲ್ಲಾಧಿಕಾರಿಗಳು ಎರಡು ತಿಂಗಳ ಹಿಂದೆ ಸರಕಾರಕ್ಕೆ ಸಲ್ಲಿಸಿದ್ದ ವರದಿ ಆಧರಿಸಿ ಈಗ ಟ್ರಸ್ಟ್ ನ ವಿರುದ್ದ ಪೊಲೀಸ್ ತನಿಖೆಗೆ ಮಂಗಳೂರಿನ 3 ನೇ ನ್ಯಾಯಾಧೀಶರ ಮತ್ತು ಜೆ.ಎಂ.ಎಫ್ . ಸಿ ನ್ಯಾಯಾಲಯ ಸೂಚಿಸಿದೆ. ಅದರಂತೆ ಬಜ್ಪೆ ಪೊಲೀಸ್...
1 1,374 1,375 1,376 1,377 1,378 1,459
Page 1376 of 1459