Recent Posts

Saturday, May 9, 2026

archivekahale news

ಸುದ್ದಿ

ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಆರೋಪ ಸಾಬೀತು: ಆರೋಪಿಗೆ ಜೈಲು ಶಿಕ್ಷೆ – ಕಹಳೆ ನ್ಯೂಸ್

ಉಡುಪಿ:  ಕಾರ್ಕಳದಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ಮೂರು ವರ್ಷದ ಹಿಂದೆ ಅತ್ಯಾಚಾರಗೈದ ಆರೋಪ ಸಾಬೀತಾಗಿದ್ದು, ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯ ತೀರ್ಪು ನೀಡಿದೆ. ಕಾರ್ಕಳ ಕಲ್ಯಗ್ರಾಮ ಕುಂದ್ರಬೆಟ್ಟುವಿನ ಗಣೇಶ್ ಪೂಜಾರಿ ಅಲಿಯಾಸ್ ಅಣ್ಣು ಅಪರಾಧಿ. ಕೃಷಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಈತ ಅತ್ಯಾಚಾರ ಪ್ರಕರಣದ ಬಳಿಕ ಜಾಮೀನು ಸಿಗದೆ ಈಗಲೂ ಜೈಲುವಾಸ ಅನುಭವಿಸುತ್ತಿದ್ದಾನೆ. ಪ್ರಕರಣ ಕುರಿತು ಅಂದಿನ ಕಾರ್ಕಳ ಠಾಣೆ...
ಸುದ್ದಿ

ಕಳೆದು ಹೋದ ಬ್ಯಾಗ್, ಪ್ರಾಮಾಣಿಕವಾಗಿ ಹಿಂದುರಿಗಿಸಿದ ಮಹಮ್ಮದ್ ಆಲಿ – ಕಹಳೆ ನ್ಯೂಸ್

ಮಂಗಳೂರು: ಸಿಕ್ಕ ಬಂಗಾರವನ್ನು ಜೇಬಿಗೆ ತುಂಬಿಕೊಳ್ಳುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ವ್ಯಕ್ತಿಯು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಬ್ಯಾಗ್ ಒಂದನ್ನು ಹೆಕ್ಕಿ ಅದರಲ್ಲಿದ್ದ ಚಿನ್ನಾಭರಣವನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಸ್ತೆಯ ಬದಿಯಲ್ಲಿ ಇದ್ದ ಬ್ಯಾಗ್‌ನ್ನು ಹೆಕ್ಕಿದ 38 ವರ್ಷ ಪ್ರಾಯದ ಚಾರ್ಮಾಡಿಯ ನಿವಾಸಿ ಶ್ರೀ ಬಿ. ಮಹಮ್ಮದ್ ಆಲಿಯು ಪೊಲೀಸರಿಗೆ ತಂದು ಕೊಟ್ಟಿದ್ದಾನೆ. ಈ ಬ್ಯಾಗ್ ನಲ್ಲಿ ಸುಮಾರು 3,20,000 ಬೆಲೆ ಬಾಳುವ 105...
ಸುದ್ದಿ

ಕಾಮಾಗಾರಿ ಪೂರ್ತಿಗೊಳಿಸಲು ನಳಿನ್ ಕುಮಾರ್ ಸಲಹೆ – ಕಹಳೆ ನ್ಯೂಸ್

ಮಂಗಳೂರು: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಕುರಿತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಕರಾವಳಿ ಭಾಗದಲ್ಲಿನ ಸಮಸ್ಯೆಯ ಬಗೆಗೆ ಚರ್ಚಿಸಲಾಯಿತು. ನೆಲ್ಯಾಡಿ ಭಾಗದಲ್ಲಿನ ಭೂ ಸಮಸ್ಯೆ, ಟೋಲ್‌ಗೇಟ್, ಪ್ಯಾಚ್‌ವರ್ಕ್, ಉಳಿದ ಕಾಮಾಗಾರಿಯನ್ನು ಪೂರ್ತಿಗೊಳಿಸಬೇಕೆಂದು ನಳಿನ್ ಕುಮಾರ್ ಸಲಹೆಯಿತ್ತರು. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಿಜಿನಲ್ ಆಫೀಸರ್, ಮಂಗಳೂರು ಹಾಗೂ ಹಾಸನ ವಿಭಾಗದ ಪ್ರಾಜೆಕ್ಟ್ ಡೈರೆಕ್ಟರ್, ಜಿಲ್ಲಾಧಿಕಾರಿ...
ಸುದ್ದಿ

ಈಜುಕೊಳದಲ್ಲಿ ದುರ್ಘಟನೆ: ಅಸ್ವಸ್ಥಗೊಂಡ ಮಕ್ಕಳು – ಕಹಳೆ ನ್ಯೂಸ್

ಮಂಗಳೂರು: ಈಜಲು ಬಂದ ಮೂರು ಮಕ್ಕಳು ಅಸ್ವಸ್ಥಗೊಂಡ ಘಟನೆಯು ಮಂಗಳೂರಿನ ಅಲೋಶಿಯಸ್ ಈಜುಕೊಳದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಂಗಳಾ ಸ್ಟೇಡಿಯಂ ದುರಸ್ತಿ ಹಿನ್ನೆಲೆಯಲ್ಲಿ ಅಭ್ಯಾಸಕ್ಕೆಂದು ಮೂರು ಮಕ್ಕಳು ಅಲೋಶಿಯಸ್ ಸ್ವಿಮ್ಮಿಂಗ್ ಫೂಲ್‌ಗೆ ಈಜಾಡಲು ಬಂದಿದ್ದರು. ಈಜಾಡುತ್ತಿದ್ದ ವೇಳೆ ಸಿಬ್ಬಂದಿಯು ಕೆಮಿಕಲ್ ಪಂಪ್ ಮಾಡಿದ್ದಾನೆ. ಇದರಿಂದ ಅಸ್ವಸ್ಥಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬ ಸಿಬ್ಬಂದಿಯ ನಿರ್ಲ ಕ್ಷ್ಯದಿಂದ ಮೂವರ ಪ್ರಾಣಕ್ಕೆ ಆಪತ್ತು ತಂದೊಡ್ಡಿತು....
ಸುದ್ದಿ

ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಊರ್ವಾದ ಮನೆಯಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋವಾದ ನೆವಿಲೆ ಫೆರ್ನಾಂಡಿಸ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ....
ಸುದ್ದಿ

ಚಾರ್ಮಾಡಿ ಘಾಟ್‌ನ ತಿರುವಿನಲ್ಲಿ ಲಾರಿ ಪಲ್ಟಿ: ಪ್ರಯಾಣಿಕರ ಪರದಾಟ – ಕಹಳೆ ನ್ಯೂಸ್

ಚಾರ್ಮಾಡಿ ಘಾಟ್‌ನ 6ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾದ ಘಟನೆ ಇಂದು ಬೆಳಗಿನ ಜಾವ ಐದು ಗಂಟೆಯ ಸುಮಾರಿಗೆ ನಡೆದಿದೆ. ಈ ವೇಳೆ ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎದುರಾಯಿತು. ಶಿರಾಡಿ ಘಾಟ್‌ನ ಬಂದ್ ಹಿನ್ನೆಲೆ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ಚಾರ್ಮಾಡಿ ಘಾಟ್ ಆಗಿದ್ದು, ಲಾರಿಯನ್ನು ತೆರವುಗೊಳಿಸಲು ಪೊಲೀಸರು ಹಾಗೂ ಸ್ಥಳೀಯರು ಪರದಾಡುವಂತಹ...
ಸುದ್ದಿ

ಸುರತ್ಕಲ್ ಅಕ್ರಮ ಟೋಲ್‌ಗೇಟ್ ಮುಚ್ಚಿಹಾಕಲು ಬೃಹತ್ ಪಾದಯಾತ್ರೆ – ಕಹಳೆ ನ್ಯೂಸ್

ಮಂಗಳೂರು: ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ವತಿಯಿಂದ ಸುರತ್ಕಲ್ ಅಕ್ರಮ ಟೋಲ್‌ಗೇಟ್ ಮುಚ್ಚಿಹಾಕಲು ಒತ್ತಾಯಿಸಿ, ರಾಷ್ಟ್ರೀಯ ಹೆದ್ದಾರಿ ಗುಂಡಿ ಮುಚ್ಚಲು ಸರ್ವಿಸ್ ರಸ್ತೆಗಳ ನಿರ್ಮಾಣಕ್ಕೆ ಆಗ್ರಹಿಸಿ ಕೂಳೂರು ಜಂಕ್ಷನ್‌ನಿಂದ ಸುರತ್ಕಲ್ ಟೋಲ್‌ಗೇಟ್‌ವರೆಗೆ ಬೃಹತ್ ಪಾದಯಾತ್ರೆ ನಡೆಯಿತು. ಈ ಸಂದರ್ಬದಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ , ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ , ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು....
ಸುದ್ದಿ

ಖಾಸಗೀ ಕಂಪನಿಗಳು ಆಧಾರ್ ಮಾಹಿತಿ ಕೇಳುವಂತಿಲ್ಲ: ಸುಪ್ರೀಂ ಕೋರ್ಟ್ ಆದೇಶ – ಕಹಳೆ ನ್ಯೂಸ್

ನವದೆಹಲಿ: ದೇಶದಲ್ಲೇ ಬಹುಚರ್ಚಿತ ವಿಷಯವಾಗಿದ್ದ ಆಧಾರ್ ಮಾನ್ಯತೆ ವಿಚಾರದಲ್ಲಿ ಕೊನೆಗೂ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು ಹೊರಬಿದ್ದಿದ್ದು, ಆಧಾರ್ ಕಾರ್ಡ್ ಸಾಂವಿಧಾನಿಕ ಅಂದಿರೋ ಸುಪ್ರೀಂ ಕೋರ್ಟ್ ಪಂಚಸದಸ್ಯ ಪೀಠ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್ ಮಾಹಿತಿ ಕೇಳುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದೆ.  ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಹತ್ವದ ತೀರ್ಪು ಹೊರಬಿದ್ದಿದೆ. ಒಟ್ಟು 40 ಪುಟಗಳ ತೀರ್ಪಿನ ಸಾರಾಂಶದಲ್ಲಿ ‘ಖಾಸಗೀತನದ ಹಕ್ಕು ಪ್ರತಿಯೊಬ್ಬರಿಗೂ ಘನತೆಯಿಂದ...
1 1,372 1,373 1,374 1,375 1,376 1,459
Page 1374 of 1459