Thursday, May 14, 2026

archivekahale news

ಸುದ್ದಿ

Big Breaking : ಕುಕ್ಕೆ ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಉಪವಾಸ ; ಗೋಸಂರಕ್ಷಣೆಗೆ ಅಡ್ಡಿಉಂಟು ಮಾಡಿದವರ ವಿರುದ್ಧ ನೀರಾಹಾರ ಸಮರ – ಕಹಳೆ ನ್ಯೂಸ್

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠದ ನಡುವಿನ ವಿವಾದ ತಾರಕಕ್ಕೇರಿದ್ದು, ಕುಕ್ಕೆ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಉಪವಾಸ ಕೂರುವ ಮೂಲಕ ಪರಿಸ್ಥಿತಿ ಗಂಭೀರತೆ ಪಡೆದುಕೊಂಡಿದೆ. ದೇವಸ್ಥಾನ ಆಡಳಿತ ಮಂಡಳಿ ವಿರುದ್ದ ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದ್ದು, ಆಡಳಿತ ಮಂಡಳಿ ಕ್ರಮದ ವಿರುದ್ದ ಸ್ವಾಮೀಜಿ ಉಪವಾಸ ಆರಂಭಿಸಿದ್ದಾರೆ. ಮಠದಲ್ಲಿ ಸುಬ್ರಹ್ಮಣ್ಯನ ಸೇವೆಗಳನ್ನ ನಡೆಸದಂತೆ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿದೆ. ಇಷ್ಟು ಮಾತ್ರವಲ್ಲದೆ ತನಗೆ ನಿತ್ಯ...
ಸುದ್ದಿ

ಮಂಗಳೂರು ದಸರಾ: ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ನಾಳೆ ಸಿಎಂ ಭೇಟಿ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಲ್ಲೀಗ ನವರಾತ್ರಿಯ ಸಂಭ್ರಮ, ಸಡಗರ. ವರ್ಷದಿಂದ ವರ್ಷಕ್ಕೆ ಈ ನವರಾತ್ರಿಯ ವೈಭವ ಮಂಗಳೂರಲ್ಲಿ ವೃದ್ದಿಸುತ್ತಲೇ ಇದೆ. ಮಂಗಳೂರು ದಸರಾಕ್ಕೆ ಕುದ್ರೋಳಿ ಗೋಕರ್ಣನಾಥ ದೇವಾಲಯದ ವಿಶೇಷ ನವರಾತ್ರಿ ಮೆರುಗು ನೀಡುತ್ತಿದೆ. ನಾಳೆ ಸಿಎಂ ಕೂಡಾ ಭೇಟಿ ನೀಡಲಿದ್ದಾರೆ. ಬನ್ನಿ, ಅದ್ರ ಝಲಕ್ ನೋಡೋಣ. ಮೈಸೂರಲ್ಲಿ ಚಾಮುಂಡೇಶ್ವರಿ ಅಗ್ರದೇವತೆಯಾದರೆ, ಮಂಗಳೂರು ದಸರಾಕ್ಕೆ ಶಾರದ ಮಾತೆಯೊಂದಿಗೆ ಶಕ್ತಿಯ ಪ್ರತೀಕವಾಗಿರುವ ನವದುರ್ಗೆಯರೇ ಆದಿ. ಇದು ದೂರದ ಮೈಸೂರು ದಸರಾದ ಮೆರಗನ್ನು ತುಳುನಾಡಿನ ಜನರಿಗೆ ಮಂಗಳೂರಿನಲ್ಲಿಯೇ...
ಸುದ್ದಿ

ಮಡಿಕೇರಿ ದಸರಾ ವೈಭವ, ಹಲವು ವಿಶೇಷತೆಗಳ ಕೇಂದ್ರ – ಕಹಳೆ ನ್ಯೂಸ್

ಮಡಿಕೇರಿ: ಮಡಿಕೇರಿ ದಸರಾ ಮೈಸೂರು ದಸರಾದಷ್ಟೆ ಪ್ರಸಿದ್ದಿ ಪಡೆದಿದ್ದು ಮಡಿಕೇರಿ ದಸರಾವು ಹಲವು ವಿಶೇಷತೆಗಳ ಕೇಂದ್ರವಾಗಿದೆ. ಮಡಿಕೇರಿ ದಸರಾದಲ್ಲಿ ಏನೆಲ್ಲಾ ಇರುತ್ತೆ ಎಂಬುವುದನ್ನು ಹೇಳುತ್ತೆ ಈ ಸ್ಟೋರಿ. ಮಡಿಕೇರಿ ದಸರಾ ಅಂದ್ರೆ ಇಡೀ ಕೊಡಗು ಜಿಲ್ಲೆಯೆ ಸಂಭ್ರಮದಲ್ಲಿ ಮಿಂದೇಳುತ್ತೆ. ಕರಗ ಕುಣಿತ, ಪೂಜೆ ಪುನಸ್ಕಾರ, ವೈಭವದ ಮೆರವಣಿಗೆ ಎಲ್ಲರನ್ನು ರಂಜಿಸುತ್ತೆ. ಈ ಮಡಿಕೇರಿ ದಸರಾ ಶುರುವಾಗಲು ಸಣ್ಣ ಇತಿಹಾಸವಿದೆ. ಹಿಂದೆ ಮಡಿಕೇರಿ ಜನರು ರೋಗದಿಂದ ಬಳಲುತ್ತಿದ್ದಾರೆ ಎಂದು ಜಾನಪದ ಕಥೆಯು...
ಸುದ್ದಿ

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದವರ ಬಂಧನ – ಕಹಳೆ ನ್ಯೂಸ್

ಮಂಗಳೂರು: ವಳಚ್ಚಿಲ್‍ಪದವಿನ ಬಳಿಯಿರುವ ಶ್ರೀನಿವಾಸ ಕಾಲೇಜು ಬಳಿಯ ಬಸ್ಸು ತಂಗುದಾಣದ ಬಳಿ ಎಫ್‍ಝೆಡ್ ಮೋಟಾರು ಸೈಕಲ್‍ನಲ್ಲಿ ಬಂದು ವಿದ್ಯಾರ್ಥಿಗಳಿಗೆ ಮಾದಕ ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಇಮ್ರಾನ್ ಮತ್ತು ಇಮ್ತಿಯಾಜ್ ಅಹಮ್ಮದ್ ಎಂದು ಶಂಕಿಸಲಾಗಿದೆ. ಆರೋಪಿಗಳಿಂದ ಸುಮಾರು 1 ಕೆ.ಜಿ. 350 ಗ್ರಾಮ್ ಗಾಂಜಾ, 15396 ನಗದು, ಎರಡು ಮೊಬೈಲ್ ಪೋನ್, ಒಂದು ಎಪ್‍ಝೆಡ್ ಮೋಟಾರು ಸೈಕಲ್‍ನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ...
ಕ್ರೀಡೆಸುದ್ದಿ

ಗುಜರಾತ್ ಫಾರ್ಚೂನ್ ಜಿಯಾಂಟ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ ಗೆಲುವು – ಕಹಳೆ ನ್ಯೂಸ್

ಸೋನಿಪತ್‌: ಹರ್ಯಾಣ ರಾಜ್ಯದ ಸೋನಿಪತ್‌ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 2018 ರ 11ನೇ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜಿಯಾಂಟ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ 32-25ರ ಗೆಲುವು ದಾಖಲಿಸಿದೆ. ಇಲ್ಲಿಗೆ ಹರ್ಯಾಣಕ್ಕೆ ಲಭಿಸಿದ ಮೊದಲ ಗೆಲುವಿದು. ನಿನ್ನೆ ನಡೆದ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡ ತವರು ನೆಲವಾದ್ದರಿಂದ ಉತ್ತಮ ಆಟ ಪ್ರದರ್ಶಿಸಿ ಜಯ ತನ್ನಡೆಗೆ ಸೆಳೆದುಕೊಂಡಿತು. ಹರ್ಯಾಣ-ಗುಜರಾತ್ ಝೋನ್ ಎ ಯಲ್ಲಿದ್ದು ಎರಡೂ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿದ್ದವು. ಈ...
ಸುದ್ದಿ

ರೈಲಿನಡಿಗೆ ಸಿಲುಕಿ ವ್ಯಕ್ತಿ ಸಾವು – ಕಹಳೆ ನ್ಯೂಸ್

ಮಂಗಳೂರು: ರೈಲಿನಡಿಗೆ ಬಿದ್ದು ವ್ಯಕ್ತಿಯೋರ್ವ ಮ್ರತ ಪಟ್ಟ ಘಟನೆ ಇಂದು ಬೆಳಿಗ್ಗೆ ಮಾರ್ನಬೈಲು ಎಂಬಲ್ಲಿ ನಡೆದಿದೆ. ಸುಮಾರು 35 ವರ್ಷ ಪ್ರಾಯದ ಗಂಡಸು ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ರೈಲು ಹಳಿಯಲ್ಲಿ ರುಂಡ ಮತ್ತು ದೇಹ ಪ್ರತ್ಯೇಕ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ. ಕರ್ತವ್ಯದ ನಿಮಿತ್ತ ತೆರಳಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ರೈಲ್ವೆ...
ಸುದ್ದಿ

ನೆರೆ ವಿಕೋಪ: ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೆರೆ ವಿಕೋಪದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಪರಿಹಾರ ಧನದ ಚೆಕ್ ಅನ್ನು ಹಸ್ತಾಂತರಿಸಿದರು. ಅಳಪೆಯ ಬಶೀರ್ ಹಾಗೂ ಪಡಿಲ್‌ನ ನಿವಾಸಿ ವಿನಾಯಕ್ ಅವರಿಗೆ ಅಂದಾಜು ಮೊತ್ತ 70 ಸಾವಿರದಷ್ಟು ಮೊತ್ತದ ಚೆಕ್‌ಅನ್ನು ಶಾಸಕ ಡಿ ವೇದವ್ಯಾಸ ಕಾಮತ್ ಅವರು ನೀಡಿದರು. ಬಳಿಕ ಮಾತನಾಡಿದ ಅವರು ಭಾರಿ ಮಳೆಯಿಂದ ಮಂಗಳೂರು ದಕ್ಷಿಣದ ಹಲವೆಡೆ ನಾಗರಿಕರು ಸಾಕಷ್ಟು...
ಸುದ್ದಿ

ಕಸಾಯಿಖಾನೆ 15 ಕೋಟಿ ಅನುದಾನ ನೀಡಿರೋದನ್ನು ಖಂಡಿಸುತ್ತೇವೆ: ವಿ.ಹಿಂ.ಪ – ಕಹಳೆ ನ್ಯೂಸ್

ಮಂಗಳೂರು: ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಮಂಗಳೂರು ಇದರ ವತಿಯಿಂದ ಮಂಗಳೂರು ಮಹಾ ನಗರ ಪಾಲಿಕೆ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಮಂಗಳೂರು ಕಸಾಯಿಖಾನೆಗೆ ಯುಟಿ ಖಾದರ್ ಹದಿನೈದು ಕೋಟಿ ರೂಪಾಯಿ ಘೋಷಿಸಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ನಿರತ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಯಕರ್ತರು ಯುಟಿ ಖಾದರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಯುಟಿ ಖಾದರ್...
1 1,340 1,341 1,342 1,343 1,344 1,459
Page 1342 of 1459