Thursday, May 14, 2026

archivekahale news

ಸುದ್ದಿ

ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆ ದಶಮ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಮಂಜೇಶ್ವರ:- ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ಬ್ರಹ್ಮ ಶ್ರೀ ನಾರಾಯಣ ಗುರುಗಳ 164 ನೇ ಜನ್ಮ ದಿನಾಚರಣೆ ಮತ್ತು 10 ನೇ ವರ್ಷದ ವಾರ್ಷಿಕೋತ್ಸವದ ದಶಮ ಸಂಭ್ರಮ ಕಾರ‍್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಹೊಸಂಗಡಿಯ ಹಿಲ್ ಸೈಡ್ ಸಭಾಭವನದಲ್ಲಿ ಇಂದು ಬೆಳಗ್ಗೆ ನಡೆಯಿತು. ಜಿಲ್ಲಾ ಸಮಿತಿ ಅಧ್ಯಕ್ಷ:- ಶ್ರೀ ಕೃಷ್ಣ ಶಿವ ಕೃಪಾ ಕುಂಜತ್ತೂರು ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿದರು. ಕಾರ‍್ಯಕ್ರಮದ ಆಮಂತ್ರಣ...
ಸುದ್ದಿ

ಪತ್ರಕರ್ತರ ‘ಬ್ರಾಂಡ್ ಮಂಗಳೂರು’ ಯೋಜನೆಗೆ ಸಿಎಂ ಚಾಲನೆ – ಕಹಳೆ ನ್ಯೂಸ್

ಮಂಗಳೂರು: ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್, ಪತ್ರಿಕಾಭವನ ಟ್ರಸ್ಟ್ ವತಿಯಿಂದ ಟಿಎಂಎಪೈ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರ 'ಬ್ರಾಂಡ್ ಮಂಗಳೂರು' ಯೋಜನೆಗೆ ಸಿಎಂ ಚಾಲನೆ ನೀಡಿದರು. ಹಾಗೇ ಪತ್ರಕರ್ತರ 'ಗ್ರಾಮ ವಾಸ್ತವ್ಯ' ಯೋಜನೆಗೆ ಕುಮಾರಸ್ವಾಮಿ ಚಾಲನೆಯನ್ನು ನೀಡಿದರು. ಪತ್ರಕರ್ತರ ಬ್ರಾಂಡ್ ಮಂಗಳೂರು ಕಾರ್ಯಕ್ರಮಕ್ಕೆ ಮೈತ್ರಿ ಸರ್ಕಾರ ಸಂಫೂರ್ಣ ಬೆಂಬಲ ಸೂಚಿಸುತ್ತೆ ಎಂದರು. ಈ ವೇಳೆ ಯುಟಿ ಖಾದರ್, ಐವನ್ ಡಿಸೋಜಾ, ಭಾಸ್ಕರ್ ಮೊಯ್ಲಿ, ರಮಾನಾಥ...
ಸುದ್ದಿ

ಶಾಸಕರ ಕಚೇರಿಗಳು ಜನಸಂಪರ್ಕ ಕೇಂದ್ರವಾಗಿ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಲಿ: ಎಚ್.ಡಿ.ಕೆ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಖ್ ಅವರು ಮಂಗಳೂರಿನಲ್ಲಿ ಆರಂಭಿಸಿರುವ ನೂತನ ಕಚೇರಿಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಉದ್ಘಾಟಿಸಿದರು. ಅಂತೆಯೇ ಶಾಸಕ ಭೋಜೇಗೌಡ ಅವರ ಕಚೇರಿ ಉದ್ಘಾಟನೆ ಮಾಡಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಶಾಸಕರ ಕಚೇರಿಗಳು ಜನಸಂಪರ್ಕ ಕೇಂದ್ರವಾಗಿ, ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಲಿ ಎಂದು ಹಾರೈಸಿದರು....
ಸುದ್ದಿ

ಅಕ್ರಮ ಮರಳು ಸಾಗಾಟ: ವಿಡಿಯೋ ವೈರಲ್ – ಕಹಳೆ ನ್ಯೂಸ್

ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಅಗಿದೆಂದು ನಿರೂಪಿಸಲು ಟಿಪ್ಪರ್ ಲಾರಿಗೆ ಪೊಲಿಸರೇ ಮರಳು ಲೋಡ್ ಮಾಡಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಸಮೀಪ ನಡೆದಿದೆ. ಅಡ್ಡೂರಿನ ಅಕ್ಬರ್ ಅಲಿ ಎಂಬವರಿಗೆ ಸೇರಿದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ ಎನ್ನುವ ದೂರು ಪೊಲೀಸರಿಗೆ ಬಂದಿತ್ತು, ಬಗ್ಗೆ ತನಿಖೆ ನಡೆಸಲು ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಲಾರಿಯನ್ನು ಅಕ್ಬರ್ ಅಲಿಯವರ ಮನೆಯಲ್ಲಿ ಖಾಲಿ ಮಾಡಿ ನಿಲ್ಲಿಸಲಾಗಿತ್ತು, ದೂರು ಬಂದ ಹಿನ್ನಲೆಯಲ್ಲಿ ಲಾರಿಯನ್ನು...
ಸುದ್ದಿ

ಸುಬ್ರಹ್ಮಣ್ಯ ಸ್ವಾಮೀಜಿಯವರ ಮನವೊಲಿಸಿ ಕ್ಷಮೆ ಯಾಚಿಸಿ, ಆಡಳಿತ ಮಂಡಳಿಗೆ ಪೇಜಾವರ ಶ್ರೀ ಸೇರಿದಂತೆ ಅಷ್ಟಮಠಾಧೀಶರ ಆಗ್ರಹ – ಕಹಳೆ ನ್ಯೂಸ್

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಠಕ್ಕೂ ದೇವಾಲಯಕ್ಕೂ ನಡುವೆ ಕಾಣಿಸಿಕೊಂಡಿರುವ ಭಿನ್ನಮತ ತಾರಕ್ಕೇರಿದ್ದು, ಈ ವಿವಾದವನ್ನು ಬಗೆಹರಿಸಲು ಜಿಲ್ಲೆಯ ಅಷ್ಟಮಠ ಮಧ್ಯಪ್ರವೇಶ ಮಾಡಿದೆ. ಉಡುಪಿ ಕೃಷ್ಣಮಠಕ್ಕೆ ಸಂಬಂಧಿಸಿದಂತೆ ಅಷ್ಟಮಠಾಧೀಶರು ಈ ವಿಚಾರದಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿಗಳ ಬೆಂಬಲಕ್ಕೆ ನಿಂತಿದ್ದಾರೆ. ಸುಬ್ರಹ್ಮಣ್ಯ ಮಠವು ಮಧ್ವ ಮತಕ್ಕೆ ಸಂಬಂಧಪಟ್ಟ ಧಾರ್ಮಿಕ ಕೇಂದ್ರವಾದ ಕಾರಣ ಪೇಜಾವರ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರಿಗೆ ಅನಗತ್ಯ...
ಸುದ್ದಿ

ಜೈಲಿನಲ್ಲಿರುವ ಮುಸ್ಲಿಂ ಅರೋಪಿಗೆ ವಿದ್ಯಾರ್ಥಿನಿಯಿಂದ ಗಾಂಜಾ ಪೂರೈಕೆ ; ಉನ್ನತ ತನಿಖೆಗೆ ಬಜರಂಗದಳದ ಭುಜಂಗ ಕುಲಾಲ್‌ ಆಗ್ರಹ – ಕಹಳೆ ನ್ಯೂಸ್

ಮಂಗಳೂರು : ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಜೈಲಿನಲ್ಲಿರುವ ಮುಸ್ತಫಾ ಎಂಬವರಿಗೆ ಗಾಂಜಾ ಪೂರೈಕೆ ಮಾಡುವ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಈ ಪ್ರಕರಣದ ಹಿಂದೆ ಲವ್ ಜಿಹಾದ್‌ನ ಶಂಕೆ ವ್ಯಕ್ತವಾಗುತ್ತಿದೆ. ಪ್ರಿÃತಿ ಪ್ರೆÃಮಕ್ಕೆ ಬಲಿಯಾಗಿ ಈ ಹುಡುಗಿ ಮುಸ್ತಫಾನ ಮೋಸದ ಬಲೆಗೆ ಬಿದ್ದು ಅವನ ಬ್ಲಾಕ್‌ಮೇಲ್‌ಗೆ ಹೆದರಿ ಈ ಜಾಲಕ್ಕೆ ಬಲಿಯಾಗಿರಬಹುದು. ಈ ಲವ್ ಜಿಹಾದ್‌ನಿಂದಾಗಿ ಹಲವು ಹಿಂದು ಹುಡುಗಿಯರು ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ, ಭಯೋತ್ಪಾದನಾ ಚಟುವಟಿಕೆಗಳಿಗೆ ಬಲಿಯಾದ...
ರಾಜಕೀಯಸುದ್ದಿ

ರಫೇಲ್​ ಹಗರಣ: ಸಂವಾದ ನಡೆಸಲು ರಾಹುಲ್​ ಗಾಂಧಿ ಬೆಂಗಳೂರಿಗೆ – ಕಹಳೆ ನ್ಯೂಸ್

ಬೆಂಗಳೂರು:  ಹಿಂದೂಸ್ಥಾನ್​ ಏರೋನಾಟಿಕ್ಸ್​ ಲಿಮಿಟೆಡ್​ನ ಸಿಬ್ಬಂದಿ ಮತ್ತು ನಿವೃತ್ತ ನೌಕರರೊಂದಿಗೆ ರಫೇಲ್​ ಹಗರಣದ ವಿಷಯದ ಮೇಲೆ ಸಂವಾದ ನಡೆಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್​ ಗಾಂಧಿ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಸಚಿವ ಡಿ.ಕೆ ಶಿವಕುಮಾರ್​, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತಿತತರು ಹೂಗುಚ್ಛ ನೀಡಿ ಸ್ವಾಗತಿಸಿದರು. ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ...
ಸುದ್ದಿ

ಬದುಕನ್ನು ನಿರ್ವಹಿಸುವ ಕಲೆಯ ಅರಿವು ಮೂಡುತ್ತಿಲ್ಲ: ಡಾ.ಶ್ರೀಧರ ನಾಯ್ಕ್ – ಕಹಳೆ ನ್ಯೂಸ್

ಪುತ್ತೂರು: ಶಾಲಾ ಕಾಲೇಜು ಪರೀಕ್ಷೆಗಳಿಗಳಿಗಿಂತ ಜೀವನದ ಪರೀಕ್ಷೆಗಳು ಬಹು ಅಮೂಲ್ಯವಾದವುಗಳು. ಅಂಕದ ಪರೀಕ್ಷೆಯ ಬಗೆಗಿನ ಆಸಕ್ತಿ ಬದುಕನ್ನು ಅಂಕೆಯಲ್ಲಿಟ್ಟುಕೊಳ್ಳುವುದರ ಬಗೆಗೆ ಇಲ್ಲದಿರುವುದು ಖೇದಕರ. ಬದುಕನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವೈಫಲ್ಯ ಕಾಣುತ್ತಿರುವುದೇ ಇಂದಿನ ಅನೇಕ ಸಾಮಾಜಿಕ, ಸಾಂಸ್ಕೃತಿಕ ವಿಘಡಣೆಗೆ ಕಾರಣವಾಗುತ್ತಿದೆ ಎಂದು ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ನಾಯ್ಕ್ ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯ...
1 1,339 1,340 1,341 1,342 1,343 1,459
Page 1341 of 1459