Thursday, May 14, 2026

archivekahale news

ಸುದ್ದಿ

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಆರ್ಥಿಕ ನೆರವು – ಕಹಳೆ ನ್ಯೂಸ್

ಪುತ್ತೂರು: ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ನಿವಾಸಿ ರಾಘವ ಪೂಜಾರಿಯವರ ಪುತ್ರ ಗೌತಮ್ ಎಂಬವರು ನರಸಂಬಂಧಿತ ಕಾಯಿಲೆಯಿಂದ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಚಿಕಿತ್ಸೆಗೆ ಆರ್ಥಿಕ ನೆರವಿನ ಚೆಕ್ಕನ್ನು ಉದ್ಯಮಿ,ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರೀಟೇಬಲ್ ಟ್ರಸ್ಟ್ ನ ದರ್ಬೆಯ ಕಚೇರಿಯಲ್ಲಿ ಹಸ್ತಾಂತರಿಸಿದರು....
ಸುದ್ದಿ

ಕುಕ್ಕೇ ಸುಬ್ರಮಣ್ಯದಲ್ಲಿ ಉರುಳು ಸೇವೆ ಸಲ್ಲಿಸಿದ ಭಾರತದ ಸ್ಟಾರ್ ಕ್ರೀಡಾಪಟು ಪೂವಮ್ಮ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸ್ಟಾರ್ ಕ್ರೀಡಾಪಟು ಪೂವಮ್ಮ ಕುಕ್ಕೇ ಸುಬ್ರಮಣ್ಯದಲ್ಲಿ, ಸುಬ್ರಮಣ್ಯ ದೇವರಿಗೆ ಉರುಳು ಸೇವೆ ಸಮರ್ಪಣೆ ಮಾಡಿದರು. ದೇವಳದ ಹೊರಾಂಗಣದಲ್ಲಿ ಉರುಳು ಸೇವೆ ಮಾಡಿದ ಬಳಿಕ ಶ್ರೀ ದೇವರ ದರುಶನ ಪಡೆದು ಶೇಷ ಸೇವೆ ನೆರವೇರಿಸಿದರು. ಶ್ರೀ ದೇವರ ದರುಶನದ ಬಳಿಕ ಶ್ರೀ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರ ದರುಶನ ಮಾಡಿದರು. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದಪದಕ ಗೆದ್ದರೆ ಉರುಳು ಸೇವೆ ಸಲ್ಲಿಸುತ್ತೇನೆ...
ಸುದ್ದಿ

ಮನೆಯೊಳಗೆ ಬಂದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದ ಉರಗ ತಜ್ಞರು – ಕಹಳೆ ನ್ಯೂಸ್

ಚಿಕ್ಕಮಗಳೂರು: ಎರಡು ದಿನಗಳಿಂದ ಮನೆಯೊಳಗೆ ಅವಿತು ಕುಳಿತಿದ್ದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಪ್ರಶಾಂತ್ ಎಂಬುವರ ಮನೆಯ ಆವರಣದಲ್ಲಿ ಎರಡು ದಿನಗಳಿಂದ ಕಾಳಿಂಗ ಸರ್ಪ ಬೀಡುಬಿಟ್ಟಿತ್ತು. ಸರ್ಪಗಳು ಒಂದೇ ಜಾಗದಲ್ಲಿ ಇರೋದಿಲ್ಲ. ಹೋಗುತ್ತೆ ಎಂದು ಪ್ರಶಾಂತ್ ಮನೆಯವ್ರು ಕೂಡ ಸುಮ್ಮನಾಗಿದ್ರು. ಆದ್ರೆ, ಎರಡು ದಿನವಾದ್ರು ಕಾಳಿಂಗ ಜಾಗ ಖಾಲಿ ಮಾಡದ ಹಿನ್ನೆಲೆ ಪ್ರಶಾಂತ್ ಉರಗ...
ಸುದ್ದಿ

Breaking News : ಸಿ.ಎಂ. ಕುಮಾರಸ್ವಾಮಿ ಸಮಸ್ಯೆ ಬಗೆಹರಿಸುವ ಭರವಸೆ ; ಉಪವಾಸ ಕೈಬಿಟ್ಟ ಸುಬ್ರಹ್ಮಣ್ಯ ಸ್ವಾಮೀಜಿ – ಕಹಳೆ ನ್ಯೂಸ್

ಕುಕ್ಕೇ ಸುಬ್ರಹ್ಮಣ್ಯ : ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪವಾಸ ಸತ್ಯಾಗ್ರಹ ಅಂತ್ಯ.   ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಮಣ್ಯಮಠ ದ ಸ್ವಾಮೀಜಿಗಳಾದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಕುಕ್ಕೇ ಸುಬ್ರಹ್ಮಣ್ಯದ ವಿವಾದಗಳಿಗೆ ಹಾಗು ಮಠದ ಮೇಲೆ ನಿರಂತರ ನಡೆಯುವ ಷಡ್ಯಂತರಗಳಿಗೆ ಬೆಸೆತ್ತು ಅ.13 ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಶ್ರೀ ಸುಬ್ರಮಣ್ಯ ಮಠದ ಮಠಾಧಿಪತಿಗಳ ಗುರುಗಳಾದ ಪೇಜಾವರ...
ಸುದ್ದಿ

ಅಶಕ್ತರ ನೋವಿಗೆ ಧ್ವನಿಯಾದ ಮುಖ್ಯಮಂತ್ರಿ ಎಚ್.ಡಿ.ಕೆ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರ‍್ಯಕ್ರಮಗಳಲ್ಲಿ ಭಾಗವಹಿಸಲು ಇಂದು ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲೆಯ ಹಲವು ನಾಗರೀಕರ ಅಹವಾಲನ್ನು ಆಲಿಸಿ, ಅವರ ನೋವುಗಳಿಗೆ ಪರಿಹಾರ ಒದಗಿಸಿದರು. ಮುಖ್ಯಮಂತ್ರಿಗಳು ಇಂದು ತಾವು ಕಾರ‍್ಯಕ್ರಮಗಳಲ್ಲಿ ಭಾಗವಹಿಸಿ, ಹೊರಹೋಗುವಾಗ ತನಗಾಗಿ ಅರ್ಜಿ ಹಿಡಿದು ಕಾದು ಕುಳಿತಿದ್ದ ಹಿರಿಯ ನಾಗರೀಕರು, ಮಹಿಳೆಯರು, ವಿರ್ದ್ಯಾರ್ಥಿಗಳು ಸೇರಿದಂತೆ ಹಲವು ನಾಗರೀಕರಿಂದ ನೇರವಾಗಿ ಅಹವಾಲು ಆಲಿಸಿದರು. ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬಹುದಾದ ಹಲವು ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲು...
ಸುದ್ದಿ

ಮಂಗಳೂರು ದಸರಾ: ಎಚ್.ಡಿ.ಕುಮಾರಸ್ವಾಮಿಯಿಂದ ಚಾಲನೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ದಸರಾ ಉತ್ಸವವನ್ನು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಳೆಯ ಮಧ್ಯೆಯೂ ಮಂಗಳೂರು ದಸರಾ ಉತ್ಸವವನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಕುಮಾರಸ್ವಾಮಿ ದಸರಾ ಉತ್ಸವದ ಧ್ವಜವನ್ನು ಉತ್ಸವ ಸಮಿತಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್‌ ರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಜ್ಯದಲ್ಲಿ ಮೈಸೂರು ಅರಸರ ರಾಜ ಪರಂಪರೆಯೊಂದಿಗೆ ಮೈಸೂರು ದಸರಾ ನಡೆದು ಬಂದಿದೆ. ರಾಜ್ಯದ ಹಲವು ಕಡೆಗಳಲ್ಲಿ...
ಸುದ್ದಿ

ಮನೆಗೆ ಸಿಡಿಲು ಬಡಿದು ಭಾರೀ ನಷ್ಟ – ಕಹಳೆ ನ್ಯೂಸ್

ಮೂಡುಬಿದಿರೆ: ಮನೆಯೊಂದಕ್ಕೆ ಸಿಡಿಲು ಬಡಿದು ಸುಮಾರು 4ಲಕ್ಷ ರೂಗಳಷ್ಟು ನಷ್ಟವಾದ ಘಟನೆ ಕಲ್ಲಮುಂಡ್ಕೂರು ವ್ಯಾಪ್ತಿಯ ಬೆಳ್ಳಿಬೆಟ್ಟು ಎಂಬಲ್ಲಿ ಶನಿವಾರ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಳ್ಳಿಬೆಟ್ಟು ನಿವಾಸಿ ಲಕ್ಷ್ಮೀ ಪೂಜಾರ್ತಿ ಎಂಬವರ ಮನೆಗೆ ಶನಿವಾರ ತಡರಾತ್ರಿ ಸಿಡಿಲು ಬಡಿದು ಮನೆಯ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದೆ ಮತ್ತು ಮನೆಯ ಮೇಲ್ಛಾವಣಿ ಗೋಡೆಗಳಿಗೂ ಹಾನಿಯಾಗಿದ್ದು ನಷ್ಟ ಸರಿ ಸುಮಾರು 4 ಲಕ್ಷಗಳು ಎಂದು ಅಂದಾಜಿಸಲಾಗಿದೆ. ಸಿಡಿಲು ಬಡಿದ ಸಂದರ್ಭ ಮನೆಯಲ್ಲಿ...
ಸುದ್ದಿ

ಸುಬ್ರಹ್ಮಣ್ಯಶ್ರೀಗಳಿಗೆ ಅತಿ ಶೀಘ್ರದಲ್ಲಿ ನ್ಯಾಯ ಸಿಗುವಂತಾಗಲಿ: ಭೀಮನಕಟ್ಟೆ ಶ್ರೀಪಾದರು – ಕಹಳೆ ನ್ಯೂಸ್

ಬೆಂಗಳೂರು: ಸುಬ್ರಹ್ಮಣ್ಯ ಶ್ರೀಗಳು ಕೈಗೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲವಾಗಿ, ನವರಾತ್ರಿ ಪ್ರಯುಕ್ತ ಬೆಂಗಳೂರಿನ ಶ್ರೀಮಠದಲ್ಲಿರುವ ಭೀಮನಕಟ್ಟೆ ಶ್ರೀಪಾದರು ಉಪವಾಸವನ್ನು ಆಚರಿಸಿ, ಸುಬ್ರಹ್ಮಣ್ಯಶ್ರೀಗಳಿಗೆ ಅತಿ ಶೀಘ್ರದಲ್ಲಿ ನ್ಯಾಯ ಸಿಗುವಂತಾಗಲಿ ಎಂದು ತಮ್ಮ ಆರಾಧ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಾವೆಲ್ಲಾ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ಶ್ರೀಗಳ ನ್ಯಾಯಯುತ ಹೋರಾಟದಲ್ಲಿ ಭಾಗವಹಿಸಲು ಆಗದಿರಬಹುದು ,ಆದರೆ ಇರುವಲ್ಲಿಯೇ ದೇವರಲ್ಲಿ ಪ್ರಾರ್ಥನೆ ಮಾಡೋಣ. ನಮ್ಮ ಸನಾತನ ಸಂಸ್ಕೃತಿಯ ಮೇಲೆ ಆಗುತ್ತಿರುವ ಹಲವು ಬಗೆಯ ಆಕ್ರಮಣಗಳಲ್ಲಿ ಇದು ಒಂದು....
1 1,338 1,339 1,340 1,341 1,342 1,459
Page 1340 of 1459