Thursday, May 14, 2026

archivekahale news

ಸುದ್ದಿ

ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಸಂಭ್ರಮದಲ್ಲಿ ಸಿಹಿ ಸುದ್ದಿ – ಕಹಳೆ ನ್ಯೂಸ್

ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಸಂಭ್ರಮದಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಉಡುಗೊರೆ ರೂಪದಲ್ಲಿ ಶೇ 2ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಕುಮಾರಸ್ವಾಮಿ ಅವರ ಸರ್ಕಾರವು ಶುಕ್ರವಾರ ಸಂಜೆ ಆದೇಶ ಹೊರಡಿಸಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ನೌಕರರ ಮೂಲ ವೇತನದ ಶೇ 1.75ರಿಂದ 3.75ರಷ್ಟು...
ಸುದ್ದಿ

ಅನಿತಾ ಕುಮಾರಸ್ವಾಮಿ ಧರ್ಮಸ್ಥಳ ಮಂಜುನಾಥಸ್ವಾಮಿ ಸನ್ನಿಧಿಗೆ ಭೇಟಿ – ಕಹಳೆ ನ್ಯೂಸ್

ಬೆಳ್ತಂಗಡಿ: ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ರಾಮನಗರ ಉಪಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಲಿರುವ ಹಿನ್ನಲೆಯಲ್ಲಿ ಶುಕ್ರವಾರ ಧರ್ಮಸ್ಥಳಕ್ಕೆ ಆಗಮಿಸಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಶತ ರುದ್ರಾಭಿಷೇಕ ಪೂಜೆ ಹಾಗೂ ಬಿ. ಫಾರಂನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿದರು. ದೇವರಿಗೆ ಸೇವ, ಪ್ರಾರ್ಥನೆ ಸಲ್ಲಿಸಿ, ಬಳಿಕ ಹೆಗ್ಗಡೆಯವರ ನಿವಾಸದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೆಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಧರ್ಮಸ್ಥಳ ದ ಹೇಮಾವತಿ...
ಸುದ್ದಿ

ಸುಬ್ರಹ್ಮಣ್ಯದ ತುರ್ತು ಸೇವಾ ವಾಹನದ ಅವ್ಯವಸ್ಥೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೇ ಸುಬ್ರಹ್ಮಣ್ಯ ಇತಿಹಾಸ ಪ್ರಸಿದ್ದ ಯಾತ್ರಾ ಸ್ಥಳ. ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಬಂದಂತಹ ಭಕ್ತರಿಗೆ ಹಾಗು ಸುಬ್ರಹ್ಮಣ್ಯದ ಜನತೆಗೆ ಅರೋಗ್ಯ ಸೇವೆ ನೀಡುವ ಏಕೈಕ ತುರ್ತು ಸೇವಾ ವಾಹನಕ್ಕೆ ಈಗ ಚಿಕಿತ್ಸೆಯ ಅನಿವಾರ್ಯತೆ ಇದೆ. ಸರ್ಕಾರ ನಿಡಿರೋ 108 ವಾಹನದ ಸ್ಥಿತಿ ಹೇಗಿದೆ ಎಂದ್ರೆ 3 ಟಯರ್‌ಗಳು ಸಂಪೂರ್ಣ ಸವೆದು ಹೋಗಿ ಟಯರ್ ಒಳಗಿನ ಸರಿಗೆ ಕಾಣುತ್ತಿದೆ. ವಾಹನಕ್ಕಾಗಿ ಕರೆ ಮಾಡಿದರೆ ಸುಬ್ರಹ್ಮಣ್ಯದ ವಾಹನದಲ್ಲಿ...
ಸುದ್ದಿ

ಕೈದಿಯನ್ನು ಭೇಟಿ ಮಾಡಲು ಬಂದಾಕೆಯ ಬಂಧನ: ಗಾಂಜಾ, ಮೊಬೈಲ್ ವಶ – ಕಹಳೆ ನ್ಯೂಸ್

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನಿಗೆ ಗಾಂಜಾ ಹಾಗೂ ಮೊಬೈಲ್ ನ್ನು ನೀಡಲು ಪ್ರಯತ್ನಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಸ್ತಫಾ ಎಂಬ ವಿಚಾರಣಾಧೀನ ಕೈದಿಯನ್ನು ಭೇಟಿಯಾಗಲು ಅನುಮತಿಯನ್ನು ಪಡೆದು ಬಂದಿದ್ದ ವಿದ್ಯಾರ್ಥಿನಿ ಆತನಿಗೆ ನೀಡಲು ಗಾಂಜಾ ಹಾಗೂ ಮೊಬೈಲ್ ನ್ನು ತಂದಿದ್ದಾಳೆ. ಖಚಿತ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಬಂದ ಸಿಸಿಬಿ ಇನ್ಸ್ ಪೆಕ್ಟರ್ ಶಾಂತಾರಾಮ, ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯನ್ನು...
ರಾಜಕೀಯಸುದ್ದಿ

ಉಪ ಚುನಾವಣೆ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ: ದಿನೇಶ್‌ ಗುಂಡೂರಾವ್‌ – ಕಹಳೆ ನ್ಯೂಸ್

ಬೆಂಗಳೂರು : ಉಪ ಚುನಾವಣೆ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ರಾಮನಗರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದೂ ನಿರ್ಧಾರವಾಗಿದೆ. ಇದನ್ನು ಧಿಕ್ಕರಿಸಿ ಯಾರಾದರೂ ಬಂಡಾಯವೆದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದ್ದಾರೆ. ಈ ಚುನಾವಣೆಯನ್ನು ಜಂಟಿಯಾಗಿ ಎದುರಿಸಲಾಗುತ್ತಿದೆ. ಬಳ್ಳಾರಿ, ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲೂ ಗೊಂದಲವಿಲ್ಲ. ಶಿವಮೊಗ್ಗದಿಂದ ಜೆಡಿಎಸ್‌ನ ಮಧು ಬಂಗಾರಪ್ಪ ಸ್ಪರ್ಧಿಸುತ್ತಾರೊ ಇಲ್ಲವೊ ಎನ್ನುವುದು ಗೊತ್ತಿಲ್ಲ. ಆದರೆ, ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಸಂಘಟನೆ ಶಕ್ತಿಯುತವಾಗಿದ್ದು ಸೂಕ್ತ ಅಭ್ಯರ್ಥಿಯನ್ನು...
ಸುದ್ದಿ

ಕರಾವಳಿ ದಸರಾದ ಪ್ರಮುಖ ಆಕರ್ಷಣೆ ಹುಲಿ ಕುಣಿತ – ಕಹಳೆ ನ್ಯೂಸ್

ಮಂಗಳೂರು: ನವರಾತ್ರಿ ವೇಳೆ ಕರಾವಳಿ ಜನರಿಗೆ ಥಟ್ಟನೆ ನೆನಪಾಗುವುದು ಹುಲಿ ಡಾನ್ಸ್. ಹುಲಿಯಂತೇ ಕಾಣುವ ವೇಷಧಾರಿಗಳಿಂದ ತಾಸೆಯ ತಾಳಕ್ಕೆ ವಿಶಿಷ್ಟ ನರ್ತನ ಕಂಡು ಬರುತ್ತದೆ. ಕರಾವಳಿಯ ದಸರಾ ಉತ್ಸವ ಮತ್ತು ಮೆರವಣಿಗೆಯಲ್ಲಿ ಈ ಹುಲಿ ಕುಣಿತವೇ ಮುಖ್ಯ ಆಕರ್ಷಣೆಯಾಗಿದ್ದು ಈ ಕುರಿತಾದ ಇಂಟ್ರೆಸ್ಟಿಂಗ್ ರಿಪೋರ್ಟು ಇಲ್ಲಿದೆ. ದಸರಾ ಬಂದರೆ ಕರಾವಳಿಯಲ್ಲಿ ತಾಸೆಯ ಸದ್ದು ಮೊಳಗಲಾರಂಭಿಸುತ್ತದೆ. ತಾಸೆಯ ಬಡಿತದ ತಾಳಕ್ಕೆ ತಕ್ಕಂತೆ ತುಳುನಾಡಿನ ಪಿಲಿಗಳ ದರ್ಬಾರ್ ಶುರುವಾಗುತ್ತೆ. ಅದರಲ್ಲೂ ಕುದ್ರೋಳಿ ದೇವಾಲಯದಲ್ಲಿ...
ಸುದ್ದಿ

ಬೈಕ್ ಆಸೆಯಿಂದ, ಬೈಕ್ ಮಾಲಕನನ್ನೇ ಕೊಲೆಗೈದ ಪಿಯುಸಿ ಹುಡುಗ – ಕಹಳೆ ನ್ಯೂಸ್

ಚಿಕ್ಕಮಗಳೂರು: ಆಧುನಿಕ ಜಗತ್ತು ಹಾಗೂ ಯುವಜನತೆ ಎಷ್ಟು ಕೆಟ್ಟಿದ್ದಾರಂದ್ರೆ ಮೈಬಗ್ಗಿಸಿ ದುಡಿಯೋಲ್ಲ ಆದ್ರೆ, ಬಯಸಿದ್ದೆಲ್ಲಾ ಬೇಕು. ಅದಕ್ಕಾಗಿ ಕೊಲೆ ಬೇಕಾದ್ರು ಮಾಡ್ತಾರೆ. ಅವನ ವಯಸ್ಸು ಇನ್ನೂ 19. ಓದುತ್ತಿರೋದು ಪಿಯುಸಿ. ಮಾಡ್ತಿರೋದು ಪೇಪರ್ ಹಾಕೋ ಕೆಲಸ. ಪೇಪರ್ ಹಾಕೋಕೆ ಹೋಗುವಾಗ ಎದುರಿಗೆ ಬಂದ ಬೈಕ್ಗೆ ಕೈಹೊಡ್ದ. ಅಣ್ಣಾ... ಅಲ್ಲಿ ತನ್ಕ ಡ್ರಾಪ್ ಪ್ಲೀಸ್ ಅಂದ. ಪಾಪ ಹುಡ್ಗ ಅಂತ ಆತ ಬೈಕ್ ಹತ್ತಿಸಿಕೊಂಡ. ಬೈಕ್ ಓಡಿಸ್ತಿದ್ದೋನು ಫೋನ್ ಬಂತೆಂದು ಬೈಕ್...
ಸುದ್ದಿ

ತಿತ್ಲಿ ಚಂಡಮಾರುತಕ್ಕೆ ಜನಜೀವನ ಅಸ್ತವ್ಯಸ್ಥ: ಹವಾಮಾನ ಇಲಾಖೆ ಎಚ್ಚರಿಕೆ ಸೂಚನೆ – ಕಹಳೆ ನ್ಯೂಸ್

ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ ಅಪ್ಪಳಿಸಿರುವ ತಿತ್ಲಿ ಚಂಡಮಾರುತಕ್ಕೆ ಜನಜೀವನ ಅಸ್ತವ್ಯಸ್ಥವಾಗಿದೆ. ಹಾಗೇ ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ತಿತ್ಲಿ ಚಂಡಮಾರುತದಿಂದ ಮುನ್ನೆಚ್ಚರಿಕೆ ವಹಿಸುವಂತೆ ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗಂಟೆಗೆ 120 ರಿಂದ 140 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಅದರೊಟ್ಟಿಗೆ ಮಳೆಯೂ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯ ಸೂಚನೆ ನೀಡಿದೆ. ಇನ್ನು ಈ ತಿತ್ಲಿ...
1 1,342 1,343 1,344 1,345 1,346 1,459
Page 1344 of 1459