Friday, June 19, 2026

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ದೆಹಲಿಯ ದ್ವಾರಕ ಏರಿಯಾದಲ್ಲಿ ಪುತ್ರನ ಕಪಾಳಮೋಕ್ಷದಿಂದ ಸ್ಥಳದಲ್ಲೇ ಸಾವನ್ನಪ್ಪಿದ ವೃದ್ದ ತಾಯಿ-ಕಹಳೆ ನ್ಯೂಸ್

ನವದೆಹಲಿ : ದೆಹಲಿಯ ದ್ವಾರಕ ಏರಿಯಾದಲ್ಲಿ ತನ್ನ ತಾಯಿಯೊಂದಿಗೆ ವಾಗ್ವಾದ ನಡೆದ ವೇಳೆ ತೀವ್ರ ಕೋಪಗೊಂಡ ಪುತ್ರ ತಾಯಿಯ ಕೆನ್ನೆಗೆ ಬಾರಿಸಿದ್ದು ವೃದ್ದ ತಾಯಿ ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಹಿರಿಯ ಮಹಿಳೆಯನ್ನು 76 ವರ್ಷದ ಅವ್ತಾರ್ ಕೌರ್ ಎಂದು ಗುರುತಿಸಲಾಗಿದೆ. ನೆರೆ ಮನೆಯವರೊಂದಿಗಿನ ಪಾಕಿರ್ಂಗ್ ಸಮಸ್ಯೆಯ ಬಗ್ಗೆ ವೃದ್ದೆ ತನ್ನ ಪುತ್ರ ಮತ್ತು ಸೊಸೆಯೊಂದಿಗೆ ಮಾತುಕತೆ ನಡೆಸಿದ ವೇಳೆ ವಾಗ್ವಾದ ನಡೆದಿದ್ದು ಕೋಪಗೊಂಡ ಪುತ್ರ...
ಹೆಚ್ಚಿನ ಸುದ್ದಿ

ಮಾಸ್ಕ್ ಧರಿಸದಿದ್ರೆ 6 ತಿಂಗಳು ಜೈಲು ಶಿಕ್ಷೆ ; ಕಠಿಣ ರೂಲ್ಸ್ ಜಾರಿ ಮಾಡಿದ ಜಿಲ್ಲಾಧಿಕಾರಿ-ಕಹಳೆ ನ್ಯೂಸ್

ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು, ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಗಳು ಕಠಿಣ ರೂಲ್ಸ್ ಗಳನ್ನು ಜಾರಿಗೆ ತರುತ್ತಿವೆ. ಅದ್ರಲ್ಲೂ ದೇಶದ ಜಿಲ್ಲೆಯೊಂದರ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸದವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿಯೂ ಕೊರೊನಾ ಭೀತಿ ಎದುರಾಗಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಈಗಾಗಲೇ 2ನೇ ಅಲೆ ಹೆಚ್ಚಿದ್ದು, ರಾಜ್ಯ ಸರಕಾರ ಹೊಸ ಮಾರ್ಗಸೂಚಿಯನ್ನೂ...
ಹೆಚ್ಚಿನ ಸುದ್ದಿ

ಶಬರಿಮಲೆಗೆ ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಿದ, ಪಂದಳಮ್ ಅರಮನೆಯಲ್ಲಿ ಪೆರುಮಾಳ್ ವಂಶಸ್ಥರ ಭೇಟಿ ಮಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ-ಕಹಳೆ ನ್ಯೂಸ್

ಶಬರಿಮಲೆ : ಮಂಗಳವಾರ ಪ್ರಚಾರದ ಮಧ್ಯೆ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಗೆ ಮಾಲಧಾರಿಯಾಗಿ ಕೇರಳ ಚುನಾವಣೆಯ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಕೊಂಡರು. ಸಂಜೆ 5.50ಕ್ಕೆ ಸರಿಯಾಗಿ ಪಂಪಾ ನದಿಯಿಂದ ಬೆಟ್ಟಕ್ಕೆ ಇರುಮುಡಿಯನ್ನು ಹೊತ್ತು ಕಾಲ್ನಡಿಗೆಯಲ್ಲಿ ಹೊರಟ ಡಿಸಿಎಂ ಅವರು, 6.55 ಗಂಟೆಗೆ ಸನ್ನಿಧಾನ ಸೇರಿಕೊಂಡರು. ಅದೇ ವೇಳೆಯಲ್ಲಿ ಸನ್ನಿಧಾನದಲ್ಲಿ ನಡೆಯುವ ವಿಶಿಷ್ಟ್ಯ ಸಾಂಪ್ರದಾಯಿಕ ಪಡಿಪೂಜೆಯಲ್ಲಿ ಭಾಗಿಯಾದ ಅವರು ತದ...
ಹೆಚ್ಚಿನ ಸುದ್ದಿ

ಅಮೇರಿಕಾದ ಮೂರು ಪ್ರತ್ಯೇಕ ಸ್ಥಳದಲ್ಲಿ ಬಂದೂಕುಧಾರಿಗಳ ದಾಳಿ ; 8 ಮಂದಿ ಸಾವು-ಕಹಳೆ ನ್ಯೂಸ್

ಅಮೇರಿಕಾದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಈಶಾನ್ಯ ಅಟ್ಲಾಂಟಾದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಚೆರೋಕೀ ಕೌಂಟಿ ಪಾರ್ಲರ್ ನಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥ ರೋಡ್ನಿ ಬ್ರ್ಯಾಂಟ್, ಸಂಜೆ 5ಗಂಟೆ ವೇಳೆಗೆ ಚೆರೋಕೀ ಕೌಂಟಿ ಪಾರ್ಲರ್ ನ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಬಳಿಕ...
ಹೆಚ್ಚಿನ ಸುದ್ದಿ

ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಪ್ರಕಟ-ಕಹಳೆ ನ್ಯೂಸ್

ರಾಜ್ಯದ ಬೆಳಗಾವಿ ಲೋಕಸಭೆ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಮೂರು ಕ್ಷೇತ್ರಗಳಿಗೂ ಮುಂದಿನ ತಿಂಗಳು ಏಪ್ರಿಲ್ 17ರಂದು ಮತದಾನ ನಡೆಯಲಿದೆ. ಮೂರು ಕ್ಷೇತ್ರಗಳ ಮತ ಏಣಿಕೆ ಮೇ 2ರಂದು ನಡೆಯಲಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ನಿಧನದಿಂದಾಗಿ ಉಪಚುನಾವಣೆ ನಡೆಯುತ್ತಿದೆ. ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸಿಂಧಗಿ ವಿಧಾನಸಭೆ ಕ್ಷೇತ್ರಕ್ಕೆ ಇನ್ನು ಉಪಚುನಾವಣೆ ಘೋಷಣೆಯಾಗಿಲ್ಲ....
ಹೆಚ್ಚಿನ ಸುದ್ದಿ

ಉಗ್ರರ ನಡೆಸಿದ ದಾಳಿಯಲ್ಲಿ ಪಶ್ಚಿಮ ಆಫ್ರಿಕಾದ ನೈಜರ್‌ನಲ್ಲಿ 58 ಜನರ ದುರ್ಮರಣ-ಕಹಳೆ ನ್ಯೂಸ್

ಪಶ್ಚಿಮ ಆಫ್ರಿಕಾದ ನೈಜರ್ ದೇಶದ ರಾಜಧಾನಿ ನಿಯಾಮೆ ಸಮೀಪದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 58 ಜನರು ಮೃತಪಟ್ಟಿರುವ ಘಟನೆ ನಡೆದಿದೆ. ಮಾಲಿಯ ಗಡಿಯಲ್ಲಿ ಈ ದಾಳಿ ನಡೆದಿದ್ದು, ಸರ್ಕಾರಿ ಬಸ್ ಅನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ ಎಂದು ನೈಜರ್ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬ್ಯಾನಿಬಂಗಸ್ ಪಟ್ಟಣಕ್ಕೆ ಹೊಂದಿಕೊಂಡಿರುವ ಚಿನೆಡೋಗರ್ ಹಳ್ಳಿಯ ಸಮೀಪದಲ್ಲಿ ಈ ದಾಳಿ ನಡೆದಿದ್ದು, ನಾಲ್ಕು ವಾಹನಗಳಲ್ಲಿ ಬಂದಿದ್ದ ಉಗ್ರರು ಬಸ್ ಅನ್ನು ಅಡ್ಡಗಟ್ಟಿ ಬಾಂಬ್...
ಹೆಚ್ಚಿನ ಸುದ್ದಿ

ಬ್ರಾಹ್ಮಣರ ಹೆಣ್ಣುಮಕ್ಕಳು ಇತರ ಜಾತಿಯವರನ್ನು ಮದುವೆಯಾಗುವುದನ್ನು ತಡೆಯಬೇಕು; ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ-ಕಹಳೆ ನ್ಯೂಸ್

ಶಿವಮೊಗ್ಗ : ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಬ್ರಾಹ್ಮಣರ ಹೆಣ್ಣು ಮಕ್ಕಳು ಇತರ ಜಾತಿಯವರನ್ನು ಮದುವೆಯಾಗಲು ಮುಂದಾಗುವುದನ್ನು ತಡೆಯಬೇಕಿದೆ ಎಂದು ಹೇಳಿದ್ದಾರೆ. ಬ್ರಾಹ್ಮಣರ ಹೆಣ್ಣು ಮಕ್ಕಳು ಇತರ ಜಾತಿಯವರನ್ನು ಮದುವೆಯಾಗಲು ಮುಂದಾಗುವುದನ್ನು ತಡೆಯಲು ಮಾತೃ ಮಂಡಳಿ ರಚನೆ ಮಾಡಬೇಕಾದ ಅಗತ್ಯವಿದೆ. ಅದು ಮನೆಯಿಂದಲೇ ಆರಂಭವಾಗಬೇಕಿದೆ. ಸಾಮಾಜಿಕವಾಗಿ ಬ್ರಾಹ್ಮಣರ ಪ್ರತಿ ಕುಟುಂಬಗಳು ಬೆಳೆಯಬೇಕು ಎಂದು ಸ್ವಾಮೀಜಿಗಳು ಹೇಳಿದರು. ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಕಳೆದ 3 ದಿನಗಳಿಂದ...
ಹೆಚ್ಚಿನ ಸುದ್ದಿ

ಸರ್ಕಾರಿ ಆಸ್ಪತ್ರೆಯ ಮುಂದೆ ನವಜಾತ ಶಿಶುವಿನ ಮೃತದೇಹವನ್ನು ಕಚ್ಚಿ ಎಳೆದಾಡಿದ ಬೀದಿ ನಾಯಿಗಳು-ಕಹಳೆ ನ್ಯೂಸ್

ಭುವನೇಶ್ವರ : ಸರ್ಕಾರಿ ಆಸ್ಪತ್ರೆಯ ಮುಂದೆ ನವಜಾತ ಶಿಶುವಿನ ದೇಹವನ್ನು ಬೀದಿ ನಾಯಿಗಳು ಕಚ್ಚಿ ಎಳೆದಾಡಿದ ಘಟನೆ ಹೃದಯ ವಿದ್ರಾವಕ ನಡೆದಿದೆ. ಈ ಘಟನೆ ಒಡಿಶಾದ ಭದ್ರಾಕ್ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ. ನಂತರ ಬೀದಿ ನಾಯಿಗಳನ್ನು ಸ್ಥಳೀಯರು ಬೆನ್ನಟ್ಟಿ ಶವವನ್ನು ವಶಪಡಿಸಿಕೊಂಡಿದ್ದು, ಜನರು ನಾಯಿಗಳನ್ನು ಬೆನ್ನಟ್ಟುತ್ತಿದ್ದಂತೆ ಶಿಶುವಿನ ದೇಹವನ್ನು ತ್ಯಜಿಸಿ ಓಡಿಹೋಗಿದೆ ಎಂದು ತಿಳಿದು ಬಂದಿದೆ. ತಾನು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಾಗ, ನವಜಾತ ಶಿಶುವಿನ ಮೃತದೇಹವನ್ನು ಬೀದಿ ನಾಯಿಗಳು ಕಚ್ಚಿ...
1 78 79 80 81 82 174
Page 80 of 174