Recent Posts

Thursday, June 18, 2026

ಸುದ್ದಿ

ಸುದ್ದಿ

ಕಾರ್ಯಕರ್ತನಲ್ಲಿ ವೈಚಾರಿಕ ಬದ್ಧತೆ ಬೆಳೆಸುವುದು ಪಕ್ಷದ ಕಾರ್ಯವೈಖರಿ ತಿಳಿಸುವ ಪ್ರಶಿಕ್ಷಣ. ಶಾಸಕ ಎ ಕಿರಣ್ ಕೊಡ್ಗಿ- ಕಹಳೆ ನ್ಯೂಸ್

ಕುಂದಾಪುರ;  ಭಾರತೀಯ ಜನತಾ ಪಾರ್ಟಿ ಕುಂದಾಪುರದ ಕಾರ್ಯಾಲಯದಲ್ಲಿ ಪ್ರಶಿಕ್ಷಣ ಪೂರ್ವಭಾವಿಯ ಸಭೆ-ಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ *ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ* ಪಕ್ಷದಲ್ಲಿ ವ್ಯಕ್ತಿ ನಿರ್ಮಾಣದಿಂದ ಸಂಘಟನೆ ನಿರ್ಮಾಣ ನಡೆಸಲಾಗುತ್ತಿದೆ. ಸಂಘಟನೆಯಿಂದ ಪ್ರಶಿಕ್ಷಣದ ಮುಖ್ಯ ಗುರಿ ಕಾರ್ಯಕರ್ತನಲ್ಲಿ ವೈಚಾರಿಕ ಬದ್ಧತೆ ಬೆಳೆಸುವುದು ಪಕ್ಷದ ಕಾರ್ಯವೈಖರಿ ತಿಳಿಸುವ ನಿಟ್ಟಿನಲ್ಲಿ ಪ್ರಶಿಕ್ಷಣ ಎಂದು ಪೂರ್ವಭಾವಿ ಸಭೆಯಲ್ಲಿ ಶಾಸಕರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ವಹಿಸಿದರು....
ಅಂತಾರಾಷ್ಟ್ರೀಯಸುದ್ದಿ

ಅಮೆರಿಕಕ್ಕೆ ಮತ್ತೊಮ್ಮೆ ಶಾಕ್ : ಐದನೇ ತಲೆಮಾರಿನ F-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ‌ -ಕಹಳೆ ನ್ಯೂಸ್

ಟೆಹ್ರಾನ್: ಇರಾನ್‌  ವಿರುದ್ಧದ ಯುದ್ಧದಲ್ಲಿ ಅಮೆರಿಕಕ್ಕೆ  ಮತ್ತೊಮ್ಮೆ ಶಾಕ್‌ ಎದುರಾಗಿದೆ. ಐದನೇ ತಲೆಮಾರಿನ F-35 ಫೈಟರ್ ಜೆಟ್ (F-35 Fighter Jet) ಮೇಲೆ ಇರಾನ್‌ ದಾಳಿ ಮಾಡಿದೆ ಎಂದು ವರದಿಯಾಗಿದೆ. ಇರಾನ್ ಮೇಲೆ ಯುದ್ಧ ಕಾರ್ಯಾಚರಣೆ ನಡೆಸಿದ ನಂತರ ಅಮೆರಿಕದ ಎಫ್-35 ಲೈಟ್ನಿಂಗ್ II ವಿಮಾನವು ಮಧ್ಯಪ್ರಾಚ್ಯದ ಅಮೆರಿಕದ ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಇರಾನ್‌ನ ಆಕಾಶದ ಮೇಲೆ ಮೇಲ್ಮೈಯಿಂದ ಗಾಳಿಗೆ ಹಾರುವ...
ಜಿಲ್ಲೆಬೆಂಗಳೂರುಸುದ್ದಿ

ತುಮಕೂರಿನಲ್ಲಿ ಲಾಕಪ್‌ ಡೆತ್‌ ಪ್ರಕರಣ ಸಿಐಡಿ ತನಿಖೆಗೆ: ಪರಮೇಶ್ವರ್‌ -ಕಹಳೆ ನ್ಯೂಸ್

ಬೆಂಗಳೂರು: ತುಮಕೂರಿನಲ್ಲಿ ಲಾಕಪ್ ಡೆತ್ ಪ್ರಕರಣವನ್ನ ಸಿಐಡಿ ತನಿಖೆಗೆ ಆದೇಶಿಸಿದ್ದು, ವರದಿ ಕೊಡ್ತಾರೆ ಅಂತಾ ಗೃಹ ಸಚಿವ ಪರಮೇಶ್ವರ್  ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ನಿನ್ನೆ ವಿಚಾರಣೆ ಮಾಡುವಾಗಲೇ ಸಾವಾಗಿದೆ. ಯಾವ ಕಾರಣದಿಂದ ಸಾವಾಗಿದೆ ಎಂಬ ಮಾಹಿತಿ ಇಲ್ಲ. ಅದಕ್ಕಾಗಿ ಸಿಐಡಿ ತನಿಖೆಗೆ ಆದೇಶ ಮಾಡಿದ್ದೇನೆ ಎಂದು ತಿಳಿಸಿದರು. ಹಲ್ಲೆ ಮಾಡಿದ್ದಕ್ಕೆ ಸಾವಾಗಿದೆ ಎಂಬ ಕುಟುಬಂಸ್ಥರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಐಡಿ ತನಿಖೆಯಲ್ಲಿ ಹೊಡೆದಿದ್ರೂ ಗೊತ್ತಾಗಲಿದೆ. ಮರಣೋತ್ತರ ಪರೀಕ್ಷೆಯಲ್ಲಿ...
ಜಿಲ್ಲೆರಾಜ್ಯಸುದ್ದಿ

10,000 ರೂ. ಹಣ ಡ್ರಾ ಮಾಡಲು ಹೋಗಿದ್ದ ವ್ಯಕ್ತಿಗೆ ಎಟಿಎಂ ದೋಷದಿಂದ ಸಿಕ್ತು 3 ಲಕ್ಷ ರೂ.-ಕಹಳೆ ನ್ಯೂಸ್

ಗಾಂಧೀನಗರ: ಗುಜರಾತ್‌ನ ಸೂರತ್‌ನಲ್ಲಿ 10,000 ರೂ. ಹಣ ವಿತ್‌ಡ್ರಾ ಮಾಡಲು ಹೋದ ವ್ಯಕ್ತಿಗೆ ಎಟಿಎಂ ದೋಷದಿಂದ 3 ಲಕ್ಷ ರೂ. ಸಿಕ್ಕಿರುವ ಘಟನೆ ನಡೆದಿದೆ. ಒಂಬತ್ತು ವರ್ಷಗಳು, ಲೆಕ್ಕವಿಲ್ಲದಷ್ಟು ಇಮೇಲ್‌ಗಳು ಮತ್ತು ದೂರುಗಳ ದೀರ್ಘ ಹೋರಾಟದ ನಂತರ, ಬ್ಯಾಂಕ್ ಆಫ್ ಬರೋಡಾ ಈಗ ಮೂಲ ಮೊತ್ತದ ಸುಮಾರು 30 ಪಟ್ಟು ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಪ್ರಕರಣ 2017ರ ಫೆ.18 ರಂದು ನಡೆದಿತ್ತು. ಸೂರತ್‌ನ ಉಧ್ನಾ ಪ್ರದೇಶದ ಗ್ರಾಹಕರೊಬ್ಬರು ಎಸ್‌ಬಿಐ...
ಸುದ್ದಿ

ಲೆಬನಾನ್‌ನಲ್ಲಿ ವರದಿ ಮಾಡುವಾಗ ಪಕ್ಕದಲ್ಲೇ ಬಿದ್ದ ಬಾಂಬ್ : ರಿಪೋರ್ಟರ್‌ ಜಸ್ಟ್‌ – ಕಹಳೆ ನ್ಯೂಸ್

ಬೈರುತ್‌: ದಕ್ಷಿಣ ಲೆಬನಾನ್‌ನಲ್ಲಿ ಯುದ್ಧದ ಲೈವ್‌ ವರದಿಗಾರಿಕೆ ಮಾಡುತ್ತಿದ್ದ ರಷ್ಯಾದ ಮಾಧ್ಯಮವೊಂದರ ವರದಿಗಾರನ ಪಕ್ಕದಲ್ಲೇ ಇಸ್ರೇಲ್‌ನ ಕ್ಷಿಪಣಿ ಬಿದ್ದಿದೆ. ಸುಮಾರು 10 ಮೀಟರ್‌ ಅಂತರದಲ್ಲಿ ಬಾಂಬ್ ಬಿದ್ದಿದ್ದು, ಅದೃಷ್ಟವಶಾತ್‌ ವರದಿಗಾರ ಹಾಗೂ ಕ್ಯಾಮೆರಾಮೆನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಮಿಲಿಟರಿ ನೆಲೆಯ ಸಮೀಪವಿರುವ ಅಲ್-ಕಾಸ್ಮಿಯಾ ಸೇತುವೆಯ ಬಳಿ ಸ್ಟೀವ್ ಸ್ವೀನಿ ಮತ್ತು ಅವರ ಕ್ಯಾಮೆರಾಮನ್ ಅಲಿ ರಿಡಾ ವರದಿ ಮಾಡುತ್ತಿದ್ದರು. ಈ ವೇಳೆ ಕ್ಷಿಪಣಿ ಬಿದ್ದಿದೆ. ಕ್ಷಿಪಣಿ ಬಿದ್ದ ದೃಶ್ಯ ಕ್ಯಾಮೆರಾದಲ್ಲಿ...
ಜಿಲ್ಲೆಸುದ್ದಿಹಾಸನ

ಹಣಕಾಸು ವಿಚಾರಕ್ಕೆ ಯುವಕನ ಹತ್ಯೆ : ಒಂದು ಮೂಳೆಯೂ ಸಿಗದಂತೆ ಸುಟ್ಟು ಹಾಕಿದ ದುಷ್ಕರ್ಮಿಗಳು – ಕಹಳೆ ನ್ಯೂಸ್

ಹಾಸನ: ಹಣಕಾಸು ವಿಚಾರಕ್ಕೆ ಯುವಕನನ್ನು ಕರೆದೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಅರಸೀಕೆರೆ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದ ಯುವಕನನ್ನು ವರುಣ್.ಕೆ.ಎಂ (22) ಎಂದು ಗುರುತಿಸಲಾಗಿದೆ. ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ಹಿಂಭಾಗದಲ್ಲಿ ಯುವಕನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಬಳಿಕ ವರುಣ್ ಶವದ ಒಂದು ಮೂಳೆಯೂ ಸಿಗದಂತೆ ಸುಟ್ಟು ಹಾಕಿದ್ದಾರೆ. ಮಾ.15 ರಂದು ಗಂಡಸಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವರುಣ್‌ ಸ್ನೇಹಿತ ನೀಡಿದ ಸುಳಿವಿನ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಇರಾನ್‌ ಯುದ್ಧ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ಲಾಸ್ಟಿಕ್ ಉದ್ಯಮಕ್ಕೆ ಬಂದ್ ಭೀತಿ-ಕಹಳೆ ನ್ಯೂಸ್

ಮಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದೀಗ ಕರಾವಳಿಯ ಪ್ಲಾಸ್ಟಿಕ್ ಉದ್ಯಮದ  ಮೇಲೆ‌ ಭಾರಿ ಹೊಡೆತ ಬಿದ್ದಿದೆ. ಕರಾವಳಿಯ ಪ್ಲಾಸ್ಟಿಕ್ ಪ್ಯಾಕ್ಟರಿಗಳು ಬಂದ್ ಆಗುವ ಭೀತಿ ಎದುರಾಗಿದೆ. ಪೆಟ್ರೋಲಿಯಂ ಬೈ ಪ್ರಾಡೆಕ್ಟ್‌ನ‌ ಕಚ್ಚಾ ವಸ್ತುವಿನಿಂದ ತಯಾರಿಸಲಾಗುವ ಪ್ಲಾಸ್ಟಿಕ್ ಉತ್ಪನ್ನಗಳ ಸುಮಾರು 50 ಕ್ಕೂ ಹೆಚ್ಚು ಫ್ಯಾಕ್ಟರಿಗಳು ಮಂಗಳೂರು  ಹಾಗೂ ಉಡುಪಿಯಲ್ಲಿವೆ . ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಉತ್ಪಾದನಾ ವೆಚ್ಚವನ್ನ ಭರಿಸಲು ಫ್ಯಾಕ್ಟರಿಗಳು ಪರದಾಡುತ್ತಿದೆ‌....
ಜಿಲ್ಲೆಸುದ್ದಿಹಾಸನ

ಮಾಜಿ ಪ್ರಧಾನಿ ದೇವೇಗೌಡರ ಸಹೋದರಿ ನಿಧನ – ಕಹಳೆ ನ್ಯೂಸ್

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ (ತಂಗಿ) ಜವರಮ್ಮ (88) ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನದ Hassan) ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಾ.19 ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಂಗಿ ನಿಧನಕ್ಕೆ ದೇವೇಗೌಡರು ಕಂಬನಿ ಮಿಡಿದಿದ್ದಾರೆ....
1 97 98 99 100 101 3,396
Page 99 of 3396