Recent Posts

Thursday, June 18, 2026
ಜಿಲ್ಲೆಬೆಂಗಳೂರುಸುದ್ದಿ

ತುಮಕೂರಿನಲ್ಲಿ ಲಾಕಪ್‌ ಡೆತ್‌ ಪ್ರಕರಣ ಸಿಐಡಿ ತನಿಖೆಗೆ: ಪರಮೇಶ್ವರ್‌ -ಕಹಳೆ ನ್ಯೂಸ್

ಬೆಂಗಳೂರು: ತುಮಕೂರಿನಲ್ಲಿ ಲಾಕಪ್ ಡೆತ್ ಪ್ರಕರಣವನ್ನ ಸಿಐಡಿ ತನಿಖೆಗೆ ಆದೇಶಿಸಿದ್ದು, ವರದಿ ಕೊಡ್ತಾರೆ ಅಂತಾ ಗೃಹ ಸಚಿವ ಪರಮೇಶ್ವರ್  ಹೇಳಿದ್ದಾರೆ.

ಜಾಹೀರಾತು
ಜಾಹೀರಾತು

ಬೆಂಗಳೂರಲ್ಲಿ ಮಾತನಾಡಿದ ಅವರು, ನಿನ್ನೆ ವಿಚಾರಣೆ ಮಾಡುವಾಗಲೇ ಸಾವಾಗಿದೆ. ಯಾವ ಕಾರಣದಿಂದ ಸಾವಾಗಿದೆ ಎಂಬ ಮಾಹಿತಿ ಇಲ್ಲ. ಅದಕ್ಕಾಗಿ ಸಿಐಡಿ ತನಿಖೆಗೆ ಆದೇಶ ಮಾಡಿದ್ದೇನೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಲ್ಲೆ ಮಾಡಿದ್ದಕ್ಕೆ ಸಾವಾಗಿದೆ ಎಂಬ ಕುಟುಬಂಸ್ಥರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಐಡಿ ತನಿಖೆಯಲ್ಲಿ ಹೊಡೆದಿದ್ರೂ ಗೊತ್ತಾಗಲಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೂಡ ಗೊತ್ತಾಗುತ್ತದೆ. ಎಲ್ಲ ಘಟನೆಗಳ ಬಗ್ಗೆ ತನಿಖೆ ಮಾಡಿ ಸಿಐಡಿ ವರದಿ ಕೊಡುತ್ತೆ. ಹಲ್ಲೆಯ ಘಟನೆ ಆಗಿದ್ರೆ ಸಂಬಂಧಪಟ್ಟವರ ಮೇಲೆ ಕ್ರಮ‌ ತೆಗೆದುಕೊಳ್ಳುತ್ತೇವೆ ಅಂತಾ ಸ್ಪಷ್ಟಪಡಿಸಿದರು.

ಇದೇ ವೇಳೆ ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡಲು ಹೋಗಿ ಅಪ್ರಾಪ್ತರು ಸಾವಿಗೀಡಾದ ಬಗ್ಗೆ ಮಾತನಾಡಿ, ಯುವಕರು ವ್ಹೀಲಿಂಗ್ ಮಾಡುವುದು, ರೀಲ್ಸ್ ಮಾಡಲು ಹೋಗ್ತಾರೆ. ಏನೋ ಒಂದು ಖುಷಿಗೆ ಮಾಡ್ತಾರೆ. ಹಾಗೆ ಮಾಡಬಾರದು ಅಂತ ಬಹಳ ಕಂಟ್ರೋಲ್ ಮಾಡಿದ್ದೇವೆ. ಆದರೂ, ಪೊಲೀಸ್ ಕಣ್ತಪ್ಪಿಸಿ ಹೋಗಿ ಹೀಗೆ ಮಾಡಿಕೊಳ್ಳುತ್ತಾರೆ ಅಂತ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ವ್ಹೀಲಿಂಗ್ ಮಾಡೋದು ಮಾನಿಟರ್ ಮಾಡಿದ್ದೇವೆ. ಆದರೂ, ಬೆಳಗಿನ ಜಾವ ಹೋಗಿ ವ್ಹೀಲಿಂಗ್ ಮಾಡ್ತಾರೆ. ಇದನ್ನು ಮಾನಿಟರ್ ಮಾಡಲು ಪೊಲೀಸರಿಗೆ ಕಷ್ಟ ಆಗುತ್ತೆ. ಇವರಿಗೆ ಎಜುಕೇಟ್ ಮಾಡಲು ಪೊಲೀಸ್ ಪ್ರಯತ್ನ ಮಾಡ್ತಾರೆ ಅಂತ ಸ್ಪಷ್ಟಪಡಿಸಿದರು.