ಬಿಜೆಪಿ ಯಾತ್ರೆಗೆ ಸಿದ್ಧವಾದ ಹೈಟೆಕ್ ಬಸ್ | ಇದರಲ್ಲಿ ಏನೆಲ್ಲಾ ಇದೆ ಗೊತ್ತಾ?
ಬೆಂಗಳೂರು : ನ.2 ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ಸೊಂದನ್ನು ಸಿದ್ಧಪಡಿಸಲಾಗಿದೆ. ಇದರ ಬೆಲೆ ಸುಮಾರು 1 ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ. ಏನೀನಿದೆ? ಅತ್ಯಾಧುನಿಕ ಸೌಲಭ್ಯವುಳ್ಳ ಬಸ್‍ನಲ್ಲಿ ಮುಂಭಾಗ 12 ಮಂದಿ ನಿಂತುಕೊಂಡು ಭಾಷಣ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಲಗುವ ವ್ಯವಸ್ಥೆ, 10 ಜನ ಕುಳಿತು ಸಭೆ ನಡೆಸಬಹುದಾದಷ್ಟು ದೊಡ್ಡ ಹಾಲ್, ಸುಡುಬಿಸಿಲಿನಿಂದ ರಕ್ಷಣೆ ಪಡೆಯಲು ಅತ್ಯಾಧುನಿಕ...






