13ರಿಂದ ದತ್ತಮಾಲಾ ಅಭಿಯಾನ | ದತ್ತಪೀಠ ಹಿಂದೂಗಳ ಧಾರ್ಮಿಕ ಕೇಂದ್ರ – ಮುತಾಲಿಕ್.
ಚಿಕ್ಕಮಗಳೂರು: ಶ್ರೀರಾಮ ಸೇನೆ ವತಿಯಿಂದ ಈ ವರ್ಷದ ದತ್ತಮಾಲಾ ಅಭಿಯಾನವು ನ.13 ರಿಂದ 19ರ ವರೆಗೆ ನಡೆಯಲಿದೆj ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ವರ್ಷದ ದತ್ತಮಾಲಾ ಅಭಿಯಾನ ಇದಾಗಿದ್ದು, ನ.13ರಿಂದ ಮಾಲಾಧಾರಣೆ ಪ್ರಾರಂಭವಾಗಲಿದೆ. ನ.19ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಧರ್ಮಸಭೆ ನಡೆಯಲಿದೆ. ನಂತರ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆಯಲಾಗುವುದು. ಆ ನಂತರ ಅಲ್ಲಿ ಹೋಮ ಹವನ ಪೂಜಾ ವಿಧಿ ವಿಧಾನಗಳ ನಂತರ...







