Sunday, June 14, 2026

ಸುದ್ದಿ

ದೆಹಲಿಸುದ್ದಿ

ಎರಡೇ ವಾರದಲ್ಲಿ 4ನೇ ಬಾರಿಗೆ ತೈಲ ಶಾಕ್‌ : ಮತ್ತೆ ಪೆಟ್ರೋಲ್‌, ಡೀಸೆಲ್‌ ದರ ತಲಾ 2 ರೂ. ಏರಿಕೆ-ಕಹಳೆ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರ ಬೆಳ್ಳಂಬೆಳಗ್ಗೆ ದೇಶದ ಗ್ರಾಹಕರಿಗೆ ʻತೈಲ ಶಾಕ್ʼ‌ ಕೊಟ್ಟಿದೆ.  ಪೆಟ್ರೋಲ್‌  ಮೇಲಿನ ಬೆಲೆ ಪ್ರತಿ ಲೀಟರ್‌ಗೆ 2.61 ರೂ. ಮತ್ತು ಡೀಸೆಲ್‌ ಬೆಲೆ  ಪ್ರತಿ ಲೀಟರ್‌ಗೆ 2.71 ರೂ. ಏರಿಕೆ ಮಾಡಿದೆ. ಇದು ಕಳೆದ 10 ದಿನಗಳಲ್ಲಿ 4ನೇ ಬಾರಿಗೆ ಮಾಡಿದ ದರ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ  ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 110.89 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 98.80 ರೂ.ಗೆ ತಲುಪಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ...
ಉಡುಪಿಸುದ್ದಿ

ಭಟ್ಕಳ ನದಿ ದುರಂತ : ಸಾವಿನ ಸಂಖ್ಯೆ 11ಕ್ಕೆ ಏರಿಕೆ -ಕಹಳೆ ನ್ಯೂಸ್

ಕಾರವಾರ: ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಭಾನುವಾರ 10 ಜನರ ಮೃತದೇಹ ಪತ್ತೆಯಾಗಿದ್ದವು, ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನ ಮಾದೇವ್ ನಾಯ್ಕ್ ಎಂದು ಗುರುತಿಸಲಾಗಿದೆ. ನದಿಯಲ್ಲಿ ನಾಪತ್ತೆಯಾಗಿದ್ದವರಿಗಾಗಿ ಇಂದು ಬೆಳಿಗ್ಗೆ 8 ಗಂಟೆಯಿಂದ ಎನ್‌ಡಿಆರ್‌ಎಫ್ ತಂಡ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕಾಣೆಯಾಗಿದ್ದ ಮಾದೇವ್ ನಾಯ್ಕ್ ಅವರ ಮೃತದೇಹ ತಟ್ಟೆಹಕ್ಕಲು ನದಿಯ ಅಳವೆಯಲ್ಲಿ ಪತ್ತೆಯಾಗಿದೆ. ನದಿಯ ನೀರಿನಲ್ಲಿ...
ಸುದ್ದಿ

114 ರಫೇಲ್ ಜೆಟ್‌ ಖರೀದಿಗೆ ವಿನಂತಿ ಪತ್ರ ಅಂತಿಮಗೊಳಿಸಿದ ಭಾರತ :ಶೀಘ್ರದಲ್ಲೇ ಫ್ರಾನ್ಸ್‌ಗೆ ಕಳುಹಿಸಲು ನಿರ್ಧಾರ -ಕಹಳೆ ನ್ಯೂಸ್

ನವದೆಹಲಿ/ಪ್ಯಾರಿಸ್‌: ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಭಾರತವೂ 114 ರಫೇಲ್‌ ಯುದ್ಧ ವಿಮಾನಗಳ ಖರೀದಿಗಾಗಿ ವಿನಂತಿ ಪತ್ರವನ್ನು  ಅಂತಿಮಗೊಳಿಸಿದ್ದು, ಶೀಘ್ರದಲ್ಲೇ ಫ್ರಾನ್ಸ್‌ಗೆ ಕಳುಹಿಸಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ 114 ಜೆಟ್‌ಗಳ ಪೈಕಿ 90 ರಫೇಲ್‌ ಜೆಟ್‌ಗಳನ್ನು ಡಸಾಲ್ಟ್ ಏವಿಯೇಷನ್ ​​ಮತ್ತು ಭಾರತೀಯ ಕಂಪನಿಯ ಸಹಯೋಗದಲ್ಲಿ ಭಾರತದಲ್ಲೇ ತಯಾರಿಸಲಿದೆ. ಫ್ರಾನ್ಸ್‌ (France) ವಿನಂತಿ ಪತ್ರಕ್ಕೆ ಪ್ರತಿಕ್ರಿಯಿಸಿದ ಕೂಡಲೇ ಭಾರತವು ಜೆಟ್‌ಗಳ ಸ್ವಾಧೀನಕ್ಕಾಗಿ...
ಜಿಲ್ಲೆಪುತ್ತೂರುಸುದ್ದಿ

ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಳಿಗೆ ಎಸ್.ಎಲ್.ವಿ. ಬುಕ್ ಹೌಸ್ ನಲ್ಲಿ “ಬ್ಯಾಕ್ ಟೂ ಸ್ಕೂಲ್ ಆಫರ್” ಆರಂಭ -ಕಹಳೆ ನ್ಯೂಸ್

ಪುತ್ತೂರು : ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಾರಾಟ ಮಳಿಗೆ ಎಸ್.ಎಲ್.ವಿ. ಬುಕ್ ಹೌಸ್ ನಲ್ಲಿ ಬ್ಯಾಕ್ ಟೂ ಸ್ಕೂಲ್ ಆಫರ್ ಪ್ರಾರಂಭಗೊಂಡಿದೆ. ವೈಟ್ ಸ್ಪೇಸ್' ನೋಟ್ ಪುಸ್ತಕಗಳಲ್ಲಿ 25% ಡಿಸ್ಕೌಂಟ್ ಮತ್ತು ಇತರ ಸಾಮಾಗ್ರಿಗಳಲ್ಲಿ 4೦% ವರೆಗೆ ರಿಯಾಯಿತಿ ಬ್ಯಾಕ್ ಟೂ ಸ್ಕೂಲ್ ಆಫರ್ ನಲ್ಲಿ ಲಭ್ಯವಿದೆ. ಕರ್ನಾಟಕದ ರಾಜ್ಯಾದ್ಯಂತ ಪುತ್ತೂರು, ಮಂಗಳೂರಿನ ಬಿಜೈ, ಮಾರ್ನಮಿಕಟ್ಟೆ, ಮೇರಿಹಿಲ್, ಮೂಡಬಿದ್ರೆ, ಮೈಸೂರು, ಚಾಮರಾಜನಗರ, ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ ಎಲ್ ವಿ...
ಬೆಂಗಳೂರುರಾಜ್ಯಸುದ್ದಿ

ವೃದ್ಧೆಗೆ ಡಿಜಿಟಲ್ ಅರೆಸ್ಟ್ : ಬರೋಬ್ಬರಿ 24 ಕೋಟಿ ರೂ. ದೋಚಿದ ಸೈಬರ್ ವಂಚಕರು -ಕಹಳೆ ನ್ಯೂಸ್

ಬೆಂಗಳೂರು: ಮನಿ ಲಾಂಡರಿಂಗ್  ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಸೈಬರ್ ವಂಚಕರು ವೃದ್ಧೆ ಬಳಿ 24 ಕೋಟಿ ರೂ. ದೋಚಿರುವ ಘಟನೆ ಬೆಂಗಳೂರಿನಲ್ಲಿ  ನಡೆದಿದೆ. ಶಿವಾಜಿನಗರ ನಿವಾಸಿಯಾಗಿರುವ ವೃದ್ಧೆ ಲಕ್ಷ್ಮೀ ರಾಮಮೂರ್ತಿಗೆ ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಆಸ್ತಿ ಮಾರಿದ್ದರಿಂದ ವೃದ್ಧೆಗೆ ಕೋಟ್ಯಂತರ ರೂ. ಹಣ ಬಂದಿತ್ತು. ಇವರ ಬ್ಯಾಂಕ್ ಟ್ರಾನ್ಸಾಕ್ಷನ್ ಬಗ್ಗೆ ಮಾಹಿತಿ ತಿಳಿದ ಸೈಬರ್ ವಂಚಕರು ಕಳೆದ ಜನವರಿಯಿಂದ ಮೇವರೆಗೆ ಮನಿ ಲಾಂಡರಿಂಗ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ....
ಬೆಂಗಳೂರುರಾಜ್ಯಸುದ್ದಿ

ವರದಕ್ಷಿಣೆ ಕಿರುಕುಳ ಆರೋಪ : ನೇಣು ಬಿಗಿದು ಕಾನ್‌ಸ್ಟೇಬಲ್ ಪತ್ನಿ ಆತ್ಮಹತ್ಯೆ – ಕಹಳೆ ನ್ಯೂಸ್

ಬೆಂಗಳೂರು: ಪೊಲೀಸ್ ಕ್ವಾರ್ಟಸ್‌ನಲ್ಲೇ ನೇಣುಬಿಗಿದುಕೊಂಡು ಕಾನ್‌ಸ್ಪೇಬಲ್ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರ (KR Pura) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಲಕ್ಷ್ಮೀ ಪ್ರಿಯಾ (26) ಆತ್ಮಹತ್ಯೆಗೆ ಶರಣಾದ ಮಹಿಳೆ. ಮೃತಳ ತಂದೆ ಕುಮಾರ್ ಆರಾಧ್ಯ ಅವರು ನೀಡಿದ ದೂರಿನ ಮೇರೆಗೆ ಹೆಚ್‌ಎಎಲ್ ಠಾಣೆಯ  ಕಾನ್‌ಸ್ಟೇಬಲ್ ರಾಜೇಶ್ ಹಾಗೂ ತಂದೆ-ತಾಯಿ ಸೇರಿದಂತೆ ನಾಲ್ವರ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು...
ಬೆಂಗಳೂರುರಾಜ್ಯಸುದ್ದಿ

ಇಂದು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ -ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದ ಅನೇಕ ಕಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು (Rain), 17 ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ರಾಮನಗರ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 24ರಂದು ಗುಡುಗು, ಮಿಂಚು, ಗಾಳಿ ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ...
ಬೆಂಗಳೂರುರಾಜ್ಯಸುದ್ದಿ

ಬೆಂಗಳೂರಿಗೆ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಚೊಚ್ಚಲ ಭೇಟಿ :ಇಂದು ನಾಯಕರೊಂದಿಗೆ ಸಭೆ -ಕಹಳೆ ನ್ಯೂಸ್

ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಜಯಭೇರಿ ಬಾರಿಸಿದ ಬೆನ್ನಲ್ಲೇ, ಭಾರತೀಯ ಜನತಾ ಪಕ್ಷದ ಹೈಕಮಾಂಡ್ ಈಗ ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದತ್ತ ತನ್ನ ಸಂಪೂರ್ಣ ಚಿತ್ತ ನೆಟ್ಟಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಈಗಿನಿಂದಲೇ ಸನ್ನದ್ಧಗೊಳಿಸಲು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಶನಿವಾರ ತಡರಾತ್ರಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಚೊಚ್ಚಲ ಭೇಟಿ ನೀಡಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಿತಿನ್ ನಬಿನ್ ಅವರನ್ನು ರಾಜ್ಯ...
1 25 26 27 28 29 3,392
Page 27 of 3392