
ಬೆಂಗಳೂರು: ಮನಿ ಲಾಂಡರಿಂಗ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಸೈಬರ್ ವಂಚಕರು ವೃದ್ಧೆ ಬಳಿ 24 ಕೋಟಿ ರೂ. ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿವಾಜಿನಗರ ನಿವಾಸಿಯಾಗಿರುವ ವೃದ್ಧೆ ಲಕ್ಷ್ಮೀ ರಾಮಮೂರ್ತಿಗೆ ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಆಸ್ತಿ ಮಾರಿದ್ದರಿಂದ ವೃದ್ಧೆಗೆ ಕೋಟ್ಯಂತರ ರೂ. ಹಣ ಬಂದಿತ್ತು. ಇವರ ಬ್ಯಾಂಕ್ ಟ್ರಾನ್ಸಾಕ್ಷನ್ ಬಗ್ಗೆ ಮಾಹಿತಿ ತಿಳಿದ ಸೈಬರ್ ವಂಚಕರು ಕಳೆದ ಜನವರಿಯಿಂದ ಮೇವರೆಗೆ ಮನಿ ಲಾಂಡರಿಂಗ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಬರೋಬ್ಬರಿ 24 ಕೋಟಿ ಸೈಬರ್ ವಂಚಕರ ಪಾಲಾಗಿದೆ.
24 ಕೋಟಿ ಕೊಟ್ಟರೂ ಇನ್ನೂ ಹಣ ಕೊಡಬೇಕು ಎಂದು ವಂಚಕರು ತಾಕೀತು ಮಾಡಿಕೊಂಡಿದ್ದರು. ಹೀಗಾಗಿ ವೃದ್ಧೆ ಮನೆಯಲ್ಲಿದ್ದ 1.30 ಕೆಜಿ ಚಿನ್ನದ ಒಡೆವೆ ಅಡ ಇಡಲು ಬ್ಯಾಂಕ್‌ಗೆ ಬಂದಿದ್ದರು. ಅಡ ಇಟ್ಟು ಹಣವನ್ನ ವಂಚಕರಿಗೆ ನೀಡಲು ಬಂದಿದ್ದರು. ಇದನ್ನು ಗಮನಿಸಿದ್ದ ಕಂಟೋನ್ಮೆಂಟ್ ಬ್ರಾಂಚ್ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬ್ಯಾಂಕ್‌ಗೆ ತೆರಳಿದ್ದ ಸಿಸಿಬಿ ಸೈಬರ್ ಪೊಲೀಸರ ತಂಡ ಬ್ಯಾಂಕ್‌ನಲ್ಲಿ ವೃದ್ಧೆ ಲಕ್ಷ್ಮೀ ರಾಮಮೂರ್ತಿಯನ್ನು ವಿಚಾರಿಸಿದ್ದಾರೆ. ಆಗಲೂ ವೃದ್ಧೆ ಘಟನೆ ಬಗ್ಗೆ ಬಾಯಿ ಬಿಡಲು ರೆಡಿ ಇರಲಿಲ್ಲ. ಕೊನೆಗೆ ಪೊಲೀಸ್ ಭಾಷೆಯಲ್ಲಿ ಕೇಳಿದಾಗ ಡಿಜಿಟಲ್ ಅರೆಸ್ಟ್ ಮಾಡಿದ್ರು ಎಂದು ಹೇಳಿದ್ದಾರೆ.










