Sunday, June 14, 2026

ಸುದ್ದಿ

ಸುದ್ದಿ

ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ -ಕಹಳೆ ನ್ಯೂಸ್

ಕೊಯಮತ್ತೂರು: ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿಯೊಬ್ಬಳ ಮನೆಗೆ ಯುವಕನೊಬ್ಬ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ತೊಂಡಾಮುತ್ತೂರು ಎಂಬ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವರದಿಗಳ ಪ್ರಕಾರ, ಆರೋಪಿ ಯುವಕ ಅದೇ ಭಾಗದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ....
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿಯಲ್ಲಿ ಕಾರು-ಬೈಕ್ ಡಿಕ್ಕಿ: ಚಿಕಿತ್ಸೆ ಫಲಿಸದೆ ಫೋಟೋಗ್ರಾಫರ್ ಗಣೇಶ್ ನಿಧನ..!!-ಕಹಳೆ ನ್ಯೂಸ್

ಮಂಗಳೂರು :  ಸೋಮಂತಡ್ಕ ಅಗರಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಫೋಟೋಗ್ರಾಫರ್ ಗಣೇಶ್ ಗೌಡ(36) ಅವರು ಮೇ 25ರಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಳೆಂಜ ನಿವಾಸಿ ನೋಣಯ್ಯ ಗೌಡ ಅವರ ಪುತ್ರರಾದ ಗಣೇಶ್ ಗೌಡ ಅವರು ಕಾಯರ್ತಡ್ಕದಲ್ಲಿ ತಮ್ಮದೇ ಆದ ಗಣೇಶ್ ಸ್ಟುಡಿಯೋ ನಡೆಸುತ್ತಿದ್ದರು. ಗಣೇಶ್ ಗೌಡ ಅವರು ಮೇ 24 ರಂದು ಉಜಿರೆಯಿಂದ ಕಕ್ಕಿಂಜೆ ಕಡೆಗೆ...
ಸುದ್ದಿ

ಮಂಗಳೂರು: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ; ಮತ್ತೊರ್ವ ಆರೋಪಿಯ ಬಂಧನ-ಕಹಳೆ ನ್ಯೂಸ್

ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೈನ್ ಅಲಿಯಾಸ್ ಟ್ಯಾಬ್ಲೆಟ್ ಆರೀಫ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊರ್ವ ಆರೋಪಿಯನ್ನು ಮೇ 25 ರಂದು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ. ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್ ಇಬ್ರಾಹಿಂ ಸಿನಾನ್ ಯಾನೆ ಚಿನ್ನು(21) ಬಂಧಿತ ಆರೋಪಿ. ಆರೋಪಿಯು ಮೃತ ರೌಡಿಶೀಟರ್ ಟೊಪ್ಪಿ ನೌಫಾಲ್ ಎಂಬಾತನ ಸಹೋದರನಾಗಿದ್ದಾನೆ. ಮಾರ್ಚ್ 27 ರಂದು ಬೆಳಗಿನ...
ಸುದ್ದಿ

ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು : ಬೆಂಗಳೂರಿಂದ ಬಿಹಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ತಪ್ಪಿದ ಅನಾಹುತ -ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರಿನಿಂದ ಬಿಹಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ  ಭಾರೀ ಪ್ರಮಾದವೊಂದು ತಪ್ಪಿದ್ದು, ನೂರಾರು ಜೀವಗಳು ಪ್ರಾಣಾಪಾಯದಿಂದ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೇ 23 ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಬಿಹಾರಕ್ಕೆ ತೆರಳುತ್ತಿದ್ದ ದಾನಪೂರ್ ವಿಶೇಷ ರೈಲು ( ಸಂಖ್ಯೆ 03252) ಚಲಿಸುತ್ತಿದ್ದಾಗಲೇ ಜಾಯಿಂಟ್‌ ವೀಲ್‌ ಕಟ್ಟಾಗಿತ್ತು. ಮೇ 24 ರಂದು ಆಂಧ್ರ ಪ್ರದೇಶದ ವಿಜಯವಾಡ ನಿಲ್ದಾಣ ದಾಟಿ 30 ಕಿಮೀ ದೂರದಲ್ಲಿ 100...
ಸುದ್ದಿ

ಹೌರಾದ ಕುಖ್ಯಾತ ಗ್ಯಾಂಗ್‌ಸ್ಟರ್‌ಗೆ ಪೊಲೀಸರ ಶಾಕ್: ಒಳ ಉಡುಪಿನಲ್ಲೇ ರಸ್ತೆಯಲ್ಲಿ ಪರೇಡ್…! -ಕಹಳೆ ನ್ಯೂಸ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾ  ನಗರದಲ್ಲಿ ಸಾರ್ವಜನಿಕರನ್ನು ಭಯಭೀತಿಗೊಳಿಸುತ್ತಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ಹಾಗೂ ರೌಡಿ ಆಕಾಶ್ ಸಿಂಗ್  ಅಹಂಕಾರವನ್ನು ಪೊಲೀಸರು ಅಡಗಿಸಿದ್ದಾರೆ. ಕೇವಲ ಒಳ ಉಡುಪಿನಲ್ಲಿ (ಬನಿಯನ್ ಮತ್ತು ಅಂಡರ್‌ವೇರ್) ಸಾರ್ವಜನಿಕವಾಗಿ ರಸ್ತೆಯುದ್ದಕ್ಕೂ ಪರೇಡ್‌ ಮಾಡುವ ಮೂಲಕ ಹೌರಾ ಪೊಲೀಸರು ಕಾನೂನಿಗೆ ಇರುವ ಶಕ್ತಿಯನ್ನು ತೋರಿಸಿದ್ದಾರೆ. ಹೌರಾ ಭಾಗದಲ್ಲಿ ತಾನೊಬ್ಬ ದೊಡ್ಡ ‘ಡಾನ್’ ಎಂದು ಬಿಂಬಿಸಿಕೊಂಡು ವಸೂಲಿ ದಂಧೆ, ಹಫ್ತಾ ವಸೂಲಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ ಆಕಾಶ್...
ಸುದ್ದಿ

700 ಅಡಿ ಕಂದಕಕ್ಕೆ ಉರುಳಿದ ಸ್ಕಾರ್ಪಿಯೋ : ಮಹಾಬಲೇಶ್ವರಕ್ಕೆ ತೆರಳಿದ್ದ 8 ಮಂದಿ ದುರ್ಮರಣ -ಕಹಳೆ ನ್ಯೂಸ್

ಜೈಪುರ: ಸ್ಕಾರ್ಪಿಯೋ ಎಸ್‌ಯುವಿ ಕಾರೊಂದು ಸುಮಾರು 700 ಅಡಿ ಕಂದಕಕ್ಕೆ ಉರುಳಿ ಬಿದ್ದು, ಕನಿಷ್ಠ 8 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ  ರಾಯಗಡದ ಅಂಬೆನಾಲಿ ಘಾಟ್ ಬಳಿ ನಡೆದಿದೆ. ಮಹಾಬಲೇಶ್ವರ ಮತ್ತು ಪೋಲಾದ್‌ಪುರದ ನಡುವೆ ಇರುವ ಅಂಬೆನಾಲಿ ಘಾಟ್‌ ಬಳಿ ದುರಂತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 8 ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಹಾಗೂ ಸ್ಥಳೀಯ ಪೊಲೀಸರು...
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಯುವ ಸ್ನೇಹ ಸಂಭ್ರಮ – 2026 -ಕಹಳೆ ನ್ಯೂಸ್

ಕಲ್ಲಡ್ಕ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಯುವ ಸ್ನೇಹ ಸಂಭ್ರಮ 2026 ಎಂಬ ಒಂದು ದಿನದ ಸ್ನೇಹ ಪ್ರವಾಸವು ಮೇ 24 ಭಾನುವಾರ ನೆರವೇರಿತು. .ಬೆಳಿಗ್ಗೆ 6.00 ಗಂಟೆಗೆ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಕೊಡಾಜೆ ಅವರು ಎಲ್ಲರನ್ನು ಸ್ವಾಗತಿಸಿ ಸದಸ್ಯರ ಪ್ರವಾಸಕ್ಕೆ ಚಾಲನೆ ನೀಡಿದರು. ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರ, ಕಾಪು ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಬಳಿಕ ಬ್ರಹ್ಮಾವರದ ಸುಂದರ ಪ್ರಕೃತಿ...
ಸುದ್ದಿ

ತಡರಾತ್ರಿ ಪೊಲೀಸ್ ಸಿಬ್ಬಂದಿ ಮೇಲೆಯೇ ಪುಂಡರ ಅಟ್ಟಹಾಸ -ಕಹಳೆ ನ್ಯೂಸ್

ಮಂಗಳೂರು: ನಗರದಲ್ಲಿ ತಡರಾತ್ರಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಭೀಕರ ಹಲ್ಲೆ ನಡೆಸಿರುವ ಘಟನೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಡಿಕಲ್ ಉರ್ವ ಬಳಿಯ ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ ಬಳಿ ಈ ಕೃತ್ಯ ನಡೆದಿದ್ದು, ಸದ್ಯ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ ಸುಮಾರು 2:00 ಗಂಟೆಯ ಸುಮಾರಿಗೆ ಉರ್ವ ಠಾಣೆಯ ಪೊಲೀಸ್ ಸಿಬ್ಬಂದಿ ಎಂದಿನಂತೆ ನೈಟ್ ರೌಂಡ್ಸ್ ಕರ್ತವ್ಯದಲ್ಲಿದ್ದರು....
1 24 25 26 27 28 3,392
Page 26 of 3392