Wednesday, May 27, 2026
ಸುದ್ದಿ

ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು : ಬೆಂಗಳೂರಿಂದ ಬಿಹಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ತಪ್ಪಿದ ಅನಾಹುತ -ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರಿನಿಂದ ಬಿಹಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ  ಭಾರೀ ಪ್ರಮಾದವೊಂದು ತಪ್ಪಿದ್ದು, ನೂರಾರು ಜೀವಗಳು ಪ್ರಾಣಾಪಾಯದಿಂದ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೇ 23 ರಂದು ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಬಿಹಾರಕ್ಕೆ ತೆರಳುತ್ತಿದ್ದ ದಾನಪೂರ್ ವಿಶೇಷ ರೈಲು ( ಸಂಖ್ಯೆ 03252) ಚಲಿಸುತ್ತಿದ್ದಾಗಲೇ ಜಾಯಿಂಟ್‌ ವೀಲ್‌ ಕಟ್ಟಾಗಿತ್ತು. ಮೇ 24 ರಂದು ಆಂಧ್ರ ಪ್ರದೇಶದ ವಿಜಯವಾಡ ನಿಲ್ದಾಣ ದಾಟಿ 30 ಕಿಮೀ ದೂರದಲ್ಲಿ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದಾಗ ಜಾಯಿಂಟ್‌ ವೀಲ್‌ ಕಟ್ಟಾಗಿ ಪ್ರಯಾಣಿಕರಿದ್ದ ಬೋಗಿ ಹಾಗೂ ಇಂಜಿನ್‌ ಇದ್ದ ಬೋಗಿ ಬೇರ್ಪಟ್ಟಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅದೃಷ್ಟವಶಾತ್‌ ರೈಲು ನಿಯಂತ್ರಣ ಕಳೆದುಕೊಳ್ಳದ ಕಾರಣ ಹಾಗೂ ಲೋಕೋಪೈಲಟ್‌ನ ಸಮಯ ಪ್ರಜ್ಞೆ ಮುಂದಾಗುವ ಅನಾಹುತ ತಪ್ಪಿಸಿತ್ತು. ಘಟನೆ ಬಳಿಕ 4 ಘಂಟೆಗಳ ಕಾಲ ರೈಲು ಸಂಚಾರ ವಿಳಂಬಗೊಂಡಿತ್ತು.