Tuesday, May 26, 2026
ಸುದ್ದಿ

700 ಅಡಿ ಕಂದಕಕ್ಕೆ ಉರುಳಿದ ಸ್ಕಾರ್ಪಿಯೋ : ಮಹಾಬಲೇಶ್ವರಕ್ಕೆ ತೆರಳಿದ್ದ 8 ಮಂದಿ ದುರ್ಮರಣ -ಕಹಳೆ ನ್ಯೂಸ್

ಜೈಪುರ: ಸ್ಕಾರ್ಪಿಯೋ ಎಸ್‌ಯುವಿ ಕಾರೊಂದು ಸುಮಾರು 700 ಅಡಿ ಕಂದಕಕ್ಕೆ ಉರುಳಿ ಬಿದ್ದು, ಕನಿಷ್ಠ 8 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ  ರಾಯಗಡದ ಅಂಬೆನಾಲಿ ಘಾಟ್ ಬಳಿ ನಡೆದಿದೆ.

ಮಹಾಬಲೇಶ್ವರ ಮತ್ತು ಪೋಲಾದ್‌ಪುರದ ನಡುವೆ ಇರುವ ಅಂಬೆನಾಲಿ ಘಾಟ್‌ ಬಳಿ ದುರಂತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 8 ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಹಾಗೂ ಸ್ಥಳೀಯ ಪೊಲೀಸರು ಶೋಧ ಆರಂಭಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಂಶ್ ಸಮೀರ್ ಚವ್ಹಾಣ್ (19), ರಿತೇಶ್ ರಾಜೇಂದ್ರ ಲೋಖಂಡೆ (22), ಸುಹಾಸ್ ಜಿತೇಂದ್ರ ಲೋಖಂಡೆ (20), ಉತ್ಕರ್ಷ್ ಆನಂದ್ ಶಿಂಗ್ಟೆ (21), ನಿಖಿಲ್ ಅಭಿಮನ್ಯು ಶಿಂಗ್ಟೆ (25), ಮಹೇಶ್ ಅನಿಲ್ ಪವಾರ್ (25), ಆದಿತ್ಯ ಅಶೋಕ್ ಸಾಳುಂಖೆ (21), ರಾಜೇಶ್ ಅಶೋಕ್ ಕಾಟ್ಕರ್ (35) ಮೃತರು. ಬಲಿಪಶುಗಳೆಲ್ಲರೂ ಸತಾರಾ ಜಿಲ್ಲೆಯ ಮೂಲದವರೆಂದು ತಿಳಿದುಬಂದಿದೆ.