Recent Posts

Tuesday, September 8, 2026

ರಾಜ್ಯ

ರಾಜ್ಯಸುದ್ದಿ

ಮದುವೆಯಾಗುವಂತೆ ಒತ್ತಾಯ : ಪ್ರೇಯಸಿಯನ್ನು ಕೊಂದು ಗೋಣಿ ಚೀಲದಲ್ಲಿ ಶವ ಬಚ್ಚಿಟ್ಟು ಪ್ರಿಯಕರ ಪರಾರಿ – ಕಹಳೆ ನ್ಯೂಸ್

ಹೈದರಾಬಾದ್: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಪ್ರೇಯಸಿಯನ್ನು  21 ವರ್ಷದ ಯುವಕನೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಬಳಿಕ ಆಕೆಯ ಮೃತದೇಹವನ್ನು ಗೋಣಿ ಚೀಲದಲ್ಲಿ ಬಚ್ಚಿಟ್ಟು ಪರಾರಿಯಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮೃತ ಯುವತಿಯನ್ನು ಬಿಹಾರ ಮೂಲದ ರೆಹಾನಾ ಎಂದು ಗುರುತಿಸಲಾಗಿದೆ. ರೆಹಾನಾ ಹೈದರಾಬಾದ್‌ನ ಬ್ಯಾಂಕ್ವೆಟ್ ಹಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಿಹಾರ ಮೂಲದವರೇ ಆಗಿರುವ 21 ವರ್ಷದ ಅಹ್ಮದ್ ಸಲಾಂ ಎಂಬಾತನೊಂದಿಗೆ ರೆಹಾನಾ ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ....
ಬೆಂಗಳೂರುರಾಜ್ಯಸುದ್ದಿ

ಬೆಂಗಳೂರಿನಲ್ಲಿ ತಂದೆ-ಮಗ ಅನುಮಾನಾಸ್ಪದ ಸಾವು: ಪತ್ನಿ ವಶಕ್ಕೆ, ಕೊಲೆ ಶಂಕೆ – ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರಿನ ಚಿಕ್ಕಬಾಣವಾರದ ಗುಡ್ಡೆ ಬಸವಪುರದಲ್ಲಿ ತಂದೆ ಹಾಗೂ 5 ವರ್ಷದ ಮಗ  ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಅಭಿನವ್ (38) ಹಾಗೂ ಅವರ ಮಗ ಯದುವೀರ್ (5) ಮೃತ ದುರ್ದೈವಿಗಳು. ಮೇಲ್ನೋಟಕ್ಕೆ ಇಬ್ಬರ ಸಾವಿನ ಹಿಂದೆಯೂ ಕೊಲೆ ಶಂಕೆ ವ್ಯಕ್ತವಾಗಿದೆ. ಮೃತದೇಹಗಳ ಮೇಲೆ ಗಾಯದ ಗುರುತುಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆ ನಡೆದ ವೇಳೆ ಮೃತರ ಪತ್ನಿ ಪಕ್ಕದ ರೂಮ್‌ನಲ್ಲಿದ್ದಳು ಎನ್ನಲಾಗಿದ್ದು, ಈ ವಿಚಾರ ಪೊಲೀಸರಿಗೆ ಅನುಮಾನ...
ಬೆಂಗಳೂರುರಾಜ್ಯಸುದ್ದಿ

ಕೂಡ್ಲಿಗಿ ಹೈವೇಯಲ್ಲಿ ಬೈಕಿಗೆ ಕಾರು ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು – ಕಹಳೆ ನ್ಯೂಸ್

ಬಳ್ಳಾರಿ: ಬೈಕಿಗೆ ಕಾರು ಡಿಕ್ಕಿಯಿಂದಾಗಿ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಕ್ರಾಸ್  ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಓಬಳಾಪುರ ಗ್ರಾಮದ ಉಮೇಶ್ (54) ಮೃತ ಬೈಕ್ ಸವಾರ. ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಮಾಡುವಾಗ ವೇಗವಾಗಿ ಬಂದು ಕಾರು ಬೈಕ್ ಗೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರು ಚಾಲಕನ ವಿರುದ್ಧ ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ...
ಬೆಂಗಳೂರುರಾಜ್ಯಸುದ್ದಿ

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್‌ ಪಾಟೀಲ್‌ ಅವಿರೋಧ ಆಯ್ಕೆ -ಕಹಳೆ ನ್ಯೂಸ್

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್‌ ಪಾಟೀಲ್‌ (GS Patil) ಸರ್ವಾನುಮತನದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಹಾಗೂ ಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ಜಿ.ಎಸ್‌ ಪಾಟೀಲ್‌ ಅವರನ್ನ ಕರೆತಂದು ಸ್ಪೀಕರ್‌ ಪೀಠದಲ್ಲಿ ಕೂರಿಸಿದರು. ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಕಲಾಪದೊಳಗೆ ವಿಪಕ್ಷ ಬಿಜೆಪಿ ಸದಸ್ಯರು ಪ್ರವೇಶಿಸಿದ್ರು. ಆಯ್ಕೆ ನಡೆದಿದ್ದು ಹೇಗೆ? ಸ್ಪೀಕರ್ ಆಯ್ಕೆ ಬಗ್ಗೆ ಸದನದಲ್ಲಿ ಹಂಗಾಮಿ ಸ್ಪೀಕರ್...
ದೆಹಲಿರಾಜ್ಯಸುದ್ದಿ

ಗಲ್ಫ್‌ ಉದ್ಯೋಗಕ್ಕಿಂತ ಭಾರತೀಯ ಸೇನೆಯೇ ಉತ್ತಮ : ನೇಪಾಳದಲ್ಲಿ ನೇಮಕಾತಿ ಪುನರಾರಂಭಿಸುವಂತೆ ಬೃಹತ್‌ ಪ್ರತಿಭಟನೆ – ಕಹಳೆ ನ್ಯೂಸ್

ನವದೆಹಲಿ: ಭಾರತೀಯ ಸೇನೆಯಲ್ಲಿ ನೇಪಾಳಿ ಯುವಕರ ನೇಮಕಾತಿಯನ್ನು ಅಗ್ನಿಪಥ್  ಯೋಜನೆಯಡಿಯಲ್ಲಿ ತಕ್ಷಣವೇ ಪುನರಾರಂಭಿಸಬೇಕು ಎಂದು ಆಗ್ರಹಿಸಿ ನೇಪಾಳದ ಪೋಖರಾ ನಗರದಲ್ಲಿ ಮಾಜಿ ಗೂರ್ಖಾ ಸೈನಿಕರು Sಹಾಗೂ ಅವರ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ನೇಪಾಳಿ ಪೋರ್ಟಲ್ ‘ರಾಟೋಪಾಟಿ’ ವರದಿಯ ಪ್ರಕಾರ, ಪ್ರತಿಭಟನೆಯು ಬುಧವಾರ (ಆಗಸ್ಟ್ 12) ನಡೆದಿದ್ದು, ‘ಇಂಡಿಯನ್ ಎಕ್ಸ್-ಸರ್ವೀಸ್‌ಮೆನ್ ಗೂರ್ಖಾ ಬ್ರಿಗೇಡ್ ನೇಪಾಳ ಪೋಖರಾ’ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಭಾರತದ ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಥ್ ಅವರ...
ಜಿಲ್ಲೆಮೈಸೂರುರಾಜ್ಯಸುದ್ದಿ

ಹಸೆಮಣೆ ಏರಬೇಕಿದ್ದ SBI ಉದ್ಯೋಗಿಗಳಿಬ್ಬರು ನೇಣಿಗೆ ಶರಣು – ಕಹಳೆ ನ್ಯೂಸ್

ಮೈಸೂರು: ಡಿಸೆಂಬರ್‌ನಲ್ಲಿ ಹಸೆಮಣೆ ಏರಬೇಕಿದ್ದ SBI ಉದ್ಯೋಗಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆಗೆ  ಶರಣಾದ ಘಟನೆ ಮೈಸೂರು ಜಿಲ್ಲೆ ಹುಣಸೂರು ಹಾಗೂ ಕೇರಳದಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಲು ಸಿದ್ಧವಾಗಿದ್ದ ಜೋಡಿ ನೇಣಿಗೆ ಕೊರಳೊಡ್ಡಿರುವುದು ಕುಟುಂಬದಲ್ಲಿ ಆಘಾತ ಮೂಡಿಸಿದೆ. ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಚಂದ್ರನ್ ಅವರ ಪುತ್ರಿ ಅನುಶ್ರೀ (26) ಮೃತ ಯುವತಿ. ಇತ್ತೀಚೆಗಷ್ಟೇ SBI ಉದ್ಯೋಗಕ್ಕೆ ಸೇರಿದ್ದ ಅನುಶ್ರೀ, ತರಬೇತಿ ವೇಳೆ ಕೇರಳದ ಎರ್ನಾಕುಲಂನ SBIನಲ್ಲಿ ಕೆಲಸ ಮಾಡುತ್ತಿದ್ದ ಇರಿಟ್ಟಿ ಮೂಲದ ಅಮಲ್...
ಬೆಂಗಳೂರುರಾಜ್ಯಸುದ್ದಿ

ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ – ಜೈಲಾಧಿಕಾರಿ ಸಸ್ಪೆಂಡ್, SPಗೆ ಶೋಕಾಸ್ ನೋಟಿಸ್ – ಕಹಳೆ ನ್ಯೂಸ್

ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಕೇಸ್ ಸಂಬಂಧ ಜೈಲಧಿಕಾರಿಯನ್ನು ಸಸ್ಪೆಂಡ್ ಮಾಡಿ ಡಿಜಿಪಿ ಅಲೋಕ್ ಕುಮಾರ್  ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ ಹಿನ್ನೆಲೆ ಜೈಲಿನ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅನ್ನು ಸಸ್ಪೆಂಡ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಖೈದಿಗಳು ಧರಿಸುವ ಬಿಳಿ ಬಟ್ಟೆ ಧರಿಸ್ತಿರಲಿಲ್ಲ. ಇದೀಗ ಅಂಡ್ರಾಯ್ಡ್ ಮೊಬೈಲ್ ಸಹ ಸಿಕ್ಕಿದೆ. ಹೀಗಾಗಿ ಕರ್ತವ್ಯ ಲೋಪದ ಕಾರಣ ಕೇಳಿ ಜೈಲು ಎಸ್‌ಪಿ...
ದೆಹಲಿರಾಜ್ಯಸುದ್ದಿ

ಕೆಂಪುಕೋಟೆಯಲ್ಲಿ ಫಸ್ಟ್‌ ಟೈಮ್‌ ಮೊಳಗಲಿದೆ ‘ವಂದೇ ಮಾತರಂ’ ಗಾಯನ – ಕಹಳೆ ನ್ಯೂಸ್

ನವದೆಹಲಿ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ವಂದೇ ಮಾತರಂ ಗೀತೆಗೆ 150ನೇ ವರ್ಷ ತುಂಬುತ್ತಿರುವ ಹೊತ್ತಲ್ಲೇ ಈ ಬಾರಿಯ 80ನೇ ಸ್ವಾತಂತ್ರ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯ ಮೇಲೆ `ವಂದೇ ಮಾತರಂ’ ಗೀತೆ ಮೊಳಗಲಿದೆ. ಪ್ರಧಾನಿ ಮೋದಿ ಅವರು ಧ್ವಜಾರೋಹಣ ನೆರವೇರಿಸಿದ ಬಳಿಕ ರಾಷ್ಟ್ರಗೀತೆ ಜೊತೆಗೆ ವಂದೇ ಮಾತರಂ ಹಾಡಲಾಗುವುದು ಅಂತ ರಕ್ಷಣಾ ಇಲಾಖೆ ತಿಳಿಸಿದೆ. ಅಂದಹಾಗೆ, ಈ ಬಾರಿ ಮೋದಿ ಅವರ ಭಾಷಣದಲ್ಲಿ ಯುವಶಕ್ತಿ ಮತ್ತು 2047ರ ವಿಕಸಿತ ಭಾರತಕ್ಕೆ ಯಂಗ್...
1 3 4 5 6 7 319
Page 5 of 319