ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ ಆರೋಪ : ವಿಡಿಯೋ ಕಾಲ್ ಮಾಡಿ ಯುವಕ ಆತ್ಮಹತ್ಯೆ -ಕಹಳೆ ನ್ಯೂಸ್
ಬೆಂಗಳೂರು: ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ ಮಾಡಿದಳೆಂದು ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 23 ವರ್ಷದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿ ಮಾಡುತ್ತಿದ್ದ ಯುವತಿಗೆ ವಿಡಿಯೋ ಕಾಲ್ ಮಾಡಿ ಸಾಯುತ್ತಿರುವುದಾಗಿ ತಿಳಿಸಿದ್ದ ಎನ್ನಲಾಗಿದೆ. ಸಾಯುವ ಮುನ್ನ ಕರೆ ಮಾಡಿದ್ದ ವಿಡಿಯೋ ಕಾಲ್ ಹಾಗೂ ಮೆಸೇಜ್‌ನ ಸ್ಕ್ರೀನ್‌ಶಾಟ್‌ಗಳು ಲಭ್ಯವಾಗಿವೆ. ಅಲ್ಲದೇ ಮನೆಯವರಿಗೆ ಗೊತ್ತಿಲ್ಲದೆ ಮದುವೆಯಾಗಿದ್ದಾಗಿ...







