Thursday, April 23, 2026
ಬೆಂಗಳೂರುರಾಜ್ಯಸುದ್ದಿ

ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ ಆರೋಪ :  ವಿಡಿಯೋ ಕಾಲ್ ಮಾಡಿ ಯುವಕ ಆತ್ಮಹತ್ಯೆ -ಕಹಳೆ ನ್ಯೂಸ್

ಬೆಂಗಳೂರು: ಪ್ರೀತಿ ಹೆಸರಲ್ಲಿ ಯುವತಿಯಿಂದ ಮೋಸ ಮಾಡಿದಳೆಂದು ವಿಡಿಯೋ ಕಾಲ್ ಮಾಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 23 ವರ್ಷದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೀತಿ ಮಾಡುತ್ತಿದ್ದ ಯುವತಿಗೆ ವಿಡಿಯೋ ಕಾಲ್ ಮಾಡಿ ಸಾಯುತ್ತಿರುವುದಾಗಿ ತಿಳಿಸಿದ್ದ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಾಯುವ ಮುನ್ನ ಕರೆ ಮಾಡಿದ್ದ ವಿಡಿಯೋ ಕಾಲ್ ಹಾಗೂ ಮೆಸೇಜ್‌ನ ಸ್ಕ್ರೀನ್‌ಶಾಟ್‌ಗಳು ಲಭ್ಯವಾಗಿವೆ. ಅಲ್ಲದೇ ಮನೆಯವರಿಗೆ ಗೊತ್ತಿಲ್ಲದೆ ಮದುವೆಯಾಗಿದ್ದಾಗಿ ಅಭಿಷೇಕ್ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ.

ಯುವತಿಯ ಹಿಂದೆ ಬಿದ್ದಿದ್ದಾನೆ ಅಂತಾ ಅಭಿಷೇಕ್ ಮೇಲೆ ಆಕೆಯ ಪೋಷಕರು ದೂರು ನೀಡಿದ್ದರು. ಸ್ಟೇಷನ್‌ನಲ್ಲಿ ಇಬ್ಬರ ನಡುವೆ ರಾಜಿ ಸಂಧಾನ ನಡೆಸಲಾಗಿತ್ತು. ಅದಾದ ಬಳಿಕ ಇಬ್ಬರೂ ಕದ್ದುಮುಚ್ಚಿ ಮದುವೆಯಾಗಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಯುವತಿ ಅಭಿಷೇಕ್‌ನ ಅವಾಯ್ಡ್ ಮಾಡುತ್ತಿದ್ದಳು. ಹೀಗಾಗಿ, ಡೆತ್‌ನೋಟ್ ಬರೆದಿಟ್ಟು, ವಿಡಿಯೋ ಕಾಲ್ ಮಾಡಿ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಪೊಲೀಸರು ಯುವತಿ ವಿಚಾರಣೆ ನಡೆಸುತ್ತಿದ್ದಾರೆ.