US Open 2025 Badminton : ಕಾರ್ಕಳ ಮೂಲದ ಅಯೂಷ್ ಶೆಟ್ಟಿ ಚಾಂಪಿಯನ್ – ಕಹಳೆ ನ್ಯೂಸ್
ಕ್ಯಾಲಿಫೋರ್ನಿಯಾ: ಯುಎಸ್ ಓಪನ್ BWF Super 300 ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕಾರ್ಕಳ ಮೂಲದ 20 ವರ್ಷದ ಅಯೂಷ್ ಶೆಟ್ಟಿ ಚಾಂಪಿಯನ್ ಆಗಿ ಹೊಮ್ಮಿದ್ದಾರೆ.. ಆಯುಷ್ ಫೈನಲ್ನಲ್ಲಿ ಕೆನಡಾದ ಬ್ರಿಯಾನ್ ಯಾಂಗ್ ಅವರನ್ನು 21-18, 21-13 ಅಂತರದಿಂದ ಸೋಲಿಸಿ ಮೊದಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2025 ರಲ್ಲಿ ಭಾರತಕ್ಕೆ ಸಿಕ್ಕಿದ ಮೊದಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿ ಇದಾಗಿದೆ. 6 ಅಡಿ 4 ಇಂಚು ಎತ್ತರ ಹೊಂದಿರುವ ಶೆಟ್ಟಿ ಭರ್ಜರಿ ಸ್ಮ್ಯಾಶ್ ಹೊಡೆಯುವ ಮೂಲಕ ನೇರ ಸೆಟ್ಗಳಿಂದ ಪಂದ್ಯವನ್ನು ಗೆದ್ದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಭಾರತದ ತನ್ವಿ ಶರ್ಮಾ ರನ್ನರ್ ಅಪ್...







