
ಆರಂಭದಲ್ಲಿ ಬಹುಪಾಲು ನಿಯಂತ್ರಣ ಕಾಯ್ದುಕೊಂಡಿದ್ದ ಮ್ಯಾಗ್ನಸ್ ಬಳಿಕ ಅಂತಿಮ ಹಂತದಲ್ಲಿ ಬಹುದೊಡ್ಡ ತಪ್ಪುಗಳನ್ನು ಮಾಡಿದರು. ಇದರಿಂದ 19 ವರ್ಷದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ಅವರಿಗೆ ಗೆಲುವು ಸುಲಭವಾಯಿತು.
ತನ್ನ ಸೋಲು ಅರಿವಾಗುತ್ತಿದ್ದಂತೆಯೇ ಮ್ಯಾಗ್ನಸ್ ಬುದ್ದಿಯ ಮೇಲೆ ನಿಯಂತ್ರಣ ಕಳೆದುಕೊಂಡರು. ಟೇಬಲ್ ಗೆ ಗುದ್ದಿದ್ದಲ್ಲದೇ ಓಹ್ ಮೈ ಗಾಡ್ ಎಂದು ಚೀರಿದರು. ಇದರಿಂದ ಆಘಾತಗೊಂಡ ಗುಕೇಶ್ ಟೇಬಲ್ ನಿಂದ ದೂರ ಸರಿದು ನಿಂತರು. ಆಗ ಅವಸರದಿಂದ ನಡೆದು ಬಂದ ಮ್ಯಾಗ್ನಸ್ ಗುಕೇಶ್ ಅವರ ಬೆನ್ನು ತಟ್ಟಿ ಅಲ್ಲಿಂದ ಜಾಗ ಖಾಲಿ ಮಾಡಿದರು.











