ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕಣ್ಣೂರಿನ ಆಟೋ ಚಾಲಕ : ಬರೋಬ್ಬರಿ 10ಕೋಟಿ ರೂ. ಅದೃಷ್ಟ ಲಾಟರಿ ಗೆದ್ದ ನಾಸರ್ – ಕಹಳೆ ನ್ಯೂಸ್
ಕಣ್ಣೂರು: ಕೇರಳದ ಆಟೋ ಚಾಲಕರೊಬ್ಬರಿಗೆ ಬಂಪರ್ ಅದೃಷ್ಟ ಒಳಿದಿದ್ದು, ನಿನ್ನೆ ರಾತ್ರಿಯಷ್ಟೇ ಅವರು ಲಾಟರಿ ಟಿಕೆಟ್ ಖರೀದಿಸಿದ್ದು, ಇಂದು 10 ಕೋಟಿ ಬಂಪರ್ ಲಾಟರಿ ಗೆಲ್ಲುವ ಮೂಲಕ ಕೋಟ್ಯಾಧಿಪತಿಯಾಗಿದ್ದಾರೆ. ಅದೃಷ್ಟ ಯಾವಾಗ, ಯಾರಿಗೆ ಯಾವ ರೂಪದಲ್ಲಿ ಬರುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ. ಅದೆಷ್ಟೋ ಜನರು ಲಾಟರಿ ಗೆಲ್ಲುವ ಮೂಲಕವೇ ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗಿದ್ದಾರೆ. ಅದೃಷ್ಟ ಇದ್ದವರಿಗೆ ಲಾಟರಿ ಹೊಡಿಯುತ್ತದೆ. ಹೀಗೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ...
