Monday, April 27, 2026

ಪ್ರಾದೇಶಿಕ

ಪುತ್ತೂರು

ಪುತ್ತೂರಿನಲ್ಲಿ ಮಹಿಳೆಯರಿಗೆ ಕೆಲಸದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚನೆ; ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು- ಕಹಳೆ ನ್ಯೂಸ್

ಪುತ್ತೂರು:ಯುವತಿಯರಿಗೆ ಕೆಲಸ ಕೊಡಿಸುವ ಆಸೆ ತೋರಿಸಿ‌ ಅವರಿಂದ ಹಣ ಪಡೆದು ವಂಚಿಸಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಗಂಡನ ಸ್ನೇಹಿತನೆಂದು ನಂಬಿಸಿ ನವೆಂಬರ್ 27,ಪುತ್ತೂರಿನ ನಿವಾಸಿಯೊಬ್ಬರು ಮಂಗಳೂರು ಮೂಲದ ಯುವತಿಯರಿಬ್ಬರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ  ಹಣ ಪಡೆದು ವಂಚನೆ ಮಾಡಿದ್ದರು. ಈ ಕುರಿತು ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚಿತ ಉಡುಪಿ ಮೂಲದ ಆದರ್ಶ್ ಎಂಬವರು ಎಂದು ತಿಳಿದು ಬಂದಿದೆ....
ಬಂಟ್ವಾಳ

ಬಂಟ್ವಾಳ ಸೇರಿದಂತೆ ಹಲವೆಡೆ ಗುಡುಗು ಸಿಡಿಲಿನ‌ ಮಳೆ-ಕಹಳೆ ನ್ಯೂಸ್

ಬಂಟ್ವಾಳ: ಕರಾವಳಿ ಮತ್ತು ದಕ್ಷಿಣ ಕನ್ನಡ ಒಳನಾಡಿನ ಭಾಗ ಬೆಂಗಳೂರು, ಮಂಗಳೂರಿನಲ್ಲಿ ಮಂಗಳವಾರ ಸಂಜೆ ವೇಳೆ ಭಾರೀ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ನಿಜವಾಗಿದ್ದು, ಇಂದು ಸಂಜೆ ಸುಮಾರು 6ರ ಬಳಿಕ ತಾಲೂಕಿನ ಹಲವೆಡೆ ಗಾಳಿ, ಗುಡುಗು, ಸಿಡಿಲಿನ ಸಹಿತ ಮಳೆಯಾಗಿದೆ. ಭಾರಿ ಸೆಖೆ ಇದ್ದ ಪ್ರದೇಶಗಳಲ್ಲಿ ಈಗ ತಂಪಾದ ವಾತಾವರಣ ಮೂಡಿದ್ದರೆ,ಒಂದೆಡೆ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವವರು , ಬಸ್ ನಿಲ್ದಾಣಗಳಲ್ಲಿ ಕಾಯುವವರು, ಸಮಸ್ಯೆ...
ಬೆಳ್ತಂಗಡಿ

ಬೆಳ್ತಂಗಡಿ ಸೋಮಾವತಿ ನದಿಯಲ್ಲಿ ಇಬ್ಬರು ನಾಪತ್ತೆ-ಕಹಳೆ ನ್ಯೂಸ್

ಬೆಳ್ತಂಗಡಿ; ಇಲ್ಲಿನ ಸೋಮಾವತಿ ನದಿಯಲ್ಲಿ ನಿನ್ನೆ ಇಬ್ಬರು ಮೀನು ಹಿಡಿಯಲು ಹೊಳೆಗೆ ಬದಿ ಬಂದು ನೀರು ಪಾಲಾಗಿದ್ದಾರೆ ಎಂಬ ಗುಮಾನಿ  ಕೇಳಿಬರುತ್ತಿದೆ. ಈ  ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳದಿಂದ ಹುಡುಕಾಟ ಆರಂಭವಾಗಿದೆ.ಇವರಿಬ್ಬರೂ ಉಜಿರೆ ಕಡೆಯವರೆಂದು ಗೊತ್ತಾಗಿದ್ದು ಅವರು ತಂದಿದ್ದ ಬಲೆ, ಮೊಬೈಲ್ ಫೋನ್ ಮತ್ತು ಪರಿಕರಗಳು ಹೊಳೆಯ ಬದಿ ಪತ್ತೆಯಾಗಿದೆ. ಇದರಿಂದಾಗಿ ಅವರಿಬ್ಬರೂ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆಯೇ ಎಂಬ ಬಲವಾದ ಶಂಕೆ ಮೂಡಿದೆ....
ಪುತ್ತೂರು

ತುಳುನಾಡಿನ ಕಾರಣಿಕ ಪುರುಷರಾದ ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಳ ಬ್ರಹ್ಮ ಕಲಶೋತ್ಸವದ ಪೂರ್ವಭಾವಿ ಸಭೆ; ಜನವರಿಯಲ್ಲಿ ಕಛೇರಿ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು: ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆಯಲ್ಲಿ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನ ವತಿಯಿಂದ ಜೀರ್ಣೋದ್ಧಾರ ಗೊಂಡಿರುವ ಕೋಟಿ ಚೆನ್ನಯರ ಆರಾಧ್ಯ ದೇವರಾದ ನಾಗಬೆರ್ಮರಗುಡಿ ತೀರ್ಥಬಾವಿ ನಾಗಸನ್ನಿಧಿ ರಕ್ತೇಶ್ವರಿ ಮತ್ತು ದೇಯಿಬೈದತಿ ಸಮಾಧಿ ಸ್ಥಳಗಳ ಬ್ರಹ್ಮ ಕಲಶೋತ್ಸವದ ಪೂರ್ವಭಾವಿ ಸಭೆಯು ಬಪ್ಪಳಿಗೆ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಭಾ ಭವನದಲ್ಲಿ ಡಿಸೆಂಬರ್ 6 ರಂದು ನಡೆಯಿತು. ಈ ಸಭೆಯಲ್ಲಿ...
ಪುತ್ತೂರು

ಮುಳಿಯ ಜ್ಯುವೆಲ್ಸ್‍ನಲ್ಲಿ ಸಂಸ್ಥಾಪಕರ ದಿನಾಚರಣೆ ಆಚರಣೆ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ಪ್ರಸಿದ್ಧ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್‍ನಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಡಿಸೆಂಬರ್ 7ರಂದು ಆಚರಿಸಲಾಯಿತು. ಸಂಸ್ಥೆಯ ಚೇರ್‍ಮೇನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಕೇಶವಪ್ರಸಾದ್ ಮುಳಿಯರವರು ದೀಪ ಬೆಳಗಿಸಿ ಮಾತನಾಡಿ ಸಂಸ್ಥೆಯು ಸ್ಥಾಪಕರ ದಿನಾಚರಣೆ ಪ್ರಯುಕ್ತ ಡಿಸೆಂಬರ್ 7, 8, 9ರಂದು ಗ್ರಾಹಕರು ನಮ್ಮಲ್ಲಿ ಖರೀದಿಸಿದ ಪ್ರತೀ ಗ್ರಾಂನಲ್ಲಿ ರೂ.50ನ್ನು ವ್ಯಾಪಾರ ಯಾ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಆವಿಷ್ಕಾರ ಮಾಡಿದವರನ್ನು ಗುರುತಿಸಲು ವಿನಿಯೋಗಿಸಲಾಗುವುದು ಎಂದರು. ಈಗಾಗಲೇ ಹಲವಾರು ವರ್ಷಗಳಿಂದ ಈ...
ಬಂಟ್ವಾಳ

ಗ್ರಾಪಂಚಾಯಿತಿ ಚುನಾವಣೆ: ಬಂಟ್ವಾಳ ತಾಲೂಕಿನ 13, ಮಂಗಳೂರಿನ 4 ಸೇರಿ ಒಟ್ಟು 17 ಮತದಾನ ಕೇಂದ್ರ ಶಿಫ್ಟ್-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ 13 ಮತ್ತು ಮಂಗಳೂರು ತಾಲೂಕಿನ 4 ಮತದಾನ ಕೇಂದ್ರಗಳು ಸೇರಿ ಒಟ್ಟು 17 ಮತದಾನ ಕೇಂದ್ರಗಳನ್ನು ಸ್ಥಳಾಂತರ ಮಾಡಲು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಗ್ರಾಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳ ಮತಗಟ್ಟೆ ಕೇಂದ್ರಗಳನ್ನು ಪರಿಶೀಲಿಸಿದಾಗ, ಮತಗಟ್ಟೆ ಕೇಂದ್ರಗಳು ಶಿಥಿಲಗೊಂಡಿರುವುದು, ಮತದಾರರಿಗೆ ದೂರವಾದ ಜಾಗ ಹಾಗೂ ಕೆಲ ಖಾಸಗಿ ಶಾಲಾ ಕಟ್ಟಡಗಳ ರಿಪೇರಿ ಇರುವ ಕಾರಣ, ಮತದಾನಕ್ಕೆ ಯೋಗ್ಯವಲ್ಲದ ಕಾರಣ ಬದಲಾವಣೆ ಮಾಡುವುದು ಸೂಕ್ತವೆಂದು ಹೊಸ...
ಬಂಟ್ವಾಳ

ಬಂಟ್ವಾಳದಲ್ಲಿ ಜಿಲ್ಲಾ ಮಟ್ಟದ ರೈತರ ಸಭೆ, ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲಕ್ಕೆ ನಿರ್ಧಾರ-ಕಹಳೆ ನ್ಯೂಸ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದ ಸಭೆ ಭಾನುವಾರ ಬಂಟ್ವಾಳದ ಪ್ರವಾಸಿ ಮಂದಿರದಲ್ಲಿ ಸಿ.ಐ.ಟಿ.ಯು. ನ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಅದ್ಯಕ್ಷತೆಯಲ್ಲಿ ನಡೆಯಿತು. ಡಿ.8ರಂದು ಅಖಿಲ ಭಾರತ ರೈತರ ಸಂಘರ್ಷ ಸಮನ್ವಯ ಸಮಿತಿ ಕರೆ ನೀಡಿದ ಭಾರತ ಬಂದ್ ಗೆ ಸಂಪೂರ್ಣ ಬೆಂಬಲವಾಗಿ ಜಿಲ್ಲೆಯ ಒಕ್ಕೂಟವು ಡಿ.8ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ನಂತೂರು ಸರ್ಕಲ್ ನಲ್ಲಿ ರಾಸ್ತಾ ರೋಕೊ ಚಳುವಳಿ...
ಮೂಡಬಿದಿರೆ

ಮೂಡುಬಿದಿರೆಯಲ್ಲಿ ಲೋಕಾರ್ಪಣೆಗೊಂಡ ಶ್ರೀ ಸತ್ಯಸಾರಮಾನಿ ಯುವಸೇನೆ ಕೇಂದ್ರ ಸಮಿತಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಆಚರಣೆ- ಕಹಳೆ ನ್ಯೂಸ್

ಮೂಡುಬಿದಿರೆ: ಸಮುದಾಯದಲ್ಲಿ ಹಲವು ಪ್ರತಿಭೆಗಳಿವೆ ಅವರನ್ನು ಗುರುತಿಸಿ ಪ್ರೊತ್ಸಾಹಿಸುವಂತ ಕಾರ್ಯವನ್ನು ಶ್ರೀ ಸತ್ಯಸಾರಮನಿ ಯುವಸೇನೆ ಮಾಡಬೇಕು. ನಾವು, ಪ್ರತಿಪ್ಠೆ, ನಾಯಕತ್ವಕ್ಕಾಗಿ ಕೆಲಸ ಮಾಡದೆ ಸಮುದಾಯದ ಅಭಿವೃದ್ಧಿಗಾಗಿ ಯುವಸೇನೆಯ ಜೊತೆ ಕೈ ಜೋಡಿಸಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಚಲನಚಿತ್ರ ನಟ ಮೋಹನ್ ಶೇಣಿ ಅವರು ಹೇಳಿದ್ದಾರೆ. ನಿನ್ನೆ ಮೂಡಬಿದಿರೆಯ ಸ್ವರ್ಣ ಮಂದಿರದಲ್ಲಿ ನಡೆದ ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಮತ್ತು ಶ್ರೀ ಸತ್ಯಸಾರಮಾನಿ ಯುವಸೇನೆ...
1 835 836 837 838 839 872
Page 837 of 872