Saturday, May 2, 2026

ಪ್ರಾದೇಶಿಕ

ಪುತ್ತೂರು

ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಸಲಾಂ: ಅನಿತಾ ಕಾಮತ್

ಪುತ್ತೂರು: ಕೊರೊನ ಸಮಯದಲ್ಲಿ ಸಂಚರಿಸುವುದಕ್ಕೆ ಕಷ್ಟದ ಪರಿಸ್ಥಿತಿ ಇದ್ದಾಗಲೂ ಕೆಲವು ಬಸ್ಸುಗಳ ಓಡಾಟಕ್ಕೆ ವ್ಯವಸ್ಥೆ ಮಾಡಿರುವುದು ಜನರಿಗೆ ಸಹಕಾರಿಯಾಗಿದೆ. ಕೆಲವು ಸಾರಿಗೆ ಸಿಬ್ಬಂದಿಗಳು ಮಾನವೀಯತೆ ಮೆರೆದು ತಮ್ಮ ಕೆಲಸ ನಿರ್ವಹಿಸುವವರ ಮಧ್ಯೆ ಮಾನವೀಯತೆ ಮರೆತವರು ಇದ್ದಾರೆ. ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಸಲಾಂ. ಬಸ್ಸು ಹಾಳಾದಾಗ ಕೆಲವು ಸಂಧರ್ಭದಲ್ಲಿ ಜಾಗರೂಕತೆಯಲ್ಲಿ ಪ್ರಯಾಣಿಕರನ್ನು ಮನೆ ತಲುಪಿಸುವ ಕೆಲಸ ಮಾಡುತ್ತಾರೆ. ಈ ಬಸ್ಸಿನ ಪ್ರಯಾಣದಲ್ಲಿ ಆಗುವ ಅನುಭವಗಳು ಅನೇಕ ಎಂದು ಇಲ್ಲಿನ...
ಪುತ್ತೂರು

ಉಪ್ಪಿನಂಗಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳ, ಬರೋಬ್ಬರಿ 15 ಪೊಲೀಸ್ ಠಾಣೆಗಳಲ್ಲಿ 30 ಕಳ್ಳತನ ಪ್ರಕರಣ ದಾಖಲು-ಕಹಳೆ ನ್ಯೂಸ್

ಉಪ್ಪಿನಂಗಡಿ: 15 ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಹೆಚ್ಚು ದಾಖಲಾಗಿರುವ ಕಳ್ಳತನ ಪ್ರಕರಣಕ್ಕೆ ಸಂಬ0ಧಿಸಿದ0ತೆ ಆರೋಪಿವೋರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ಠಾಣಾ ಪಿಎಸ್‌ಐ ಈರಯ್ಯ.ಡಿ.ಎನ್ ಅವರ ನೇತೃತ್ವದಲ್ಲಿ ಅಪರಾಧ ಪತ್ತೆ ತಂಡವನ್ನು ರಚಿಸಿ, ಕಳ್ಳರ ಬಂಧನಕ್ಕೆ ಬಲೆ ಬೀಸಲಾಗಿತ್ತು. ಇದೀಗ ಪ್ರಕರಣ ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು, ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿ ಹಮೀದ್ ಯಾನೆ ಕುಂಞ ಮೋನು ಎಂಬಾತನನ್ನು ಬಂಧಿಸಿದ್ದಾರೆ. ಹಮೀದ್ ಮೇಲೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ನಗರ,...
ಬೆಳ್ತಂಗಡಿ

ಶಿಶಿಲದಲ್ಲಿ ಜಿಲ್ಲಾಧಿಕಾರಿಗಳ ‘ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಪ್ರಥಮ ಗ್ರಾಮ ವಾಸ್ತವ್ಯ-ಕಹಳೆ ನ್ಯೂಸ್

ಬೆಳ್ತಂಗಡಿ: ಜಿಲ್ಲಾಧಿಕಾರಿಗಳ ‘ನಡೆ ಹಳ್ಳಿಯ ಕಡೆ’ ಪ್ರಥಮ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಶಿಶಿಲದಲ್ಲಿ ನಡೆಯಿತು. ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕು ಆಡಳಿತ ಬೆಳ್ತಂಗಡಿ ಸಹಭಾಗಿತ್ವದಲ್ಲಿ ಶಿಶಿಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಮೂಲಕ ಶಾಸಕ ಹರೀಶ್ ಪೂಂಜ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್,...
ಮೂಡಬಿದಿರೆ

ಮೂಡುಬಿದಿರೆಯ “ಕೋಟಿ ಚೆನ್ನಯ” ಜೋಡುಕರೆ ಕಂಬಳ- ಕಹಳೆ ನ್ಯೂಸ್

18ನೇ ವರ್ಷದ ಹೊನಲು ಬೆಳಕಿನ ಪ್ರತಿಷ್ಠಿತ "ಕೋಟಿ ಚೆನ್ನಯ" ಜೋಡುಕರೆ ಬಯಲು ಕಂಬಳೋತ್ಸವವನ್ನು ಇಂದು ಉದ್ಘಾಟಿಸಲಾಯಿತು. ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಕಡಲಕೆರೆ ನಿಸರ್ಗಧಾಮ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಒಂಟಿಕಟ್ಟೆಯ “ಫೆಬಿಯನ್ ಕೊಲಾಸೊ ವೇದಿಕೆ”ಯಲ್ಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾಧ್ಯಕ್ಷರು ಸುದರ್ಶನ್.ಎಂ., ಪ್ರಮುಖರಾದ ಕುಲದೀಪ ಎಂ., ಈಶ್ವರ ಭಟ್, ರಾಜೇಂದ್ರ ಸಿಂಗ್, ಅಭಯಚಂದ್ರ ಜೈನ್, ಪ್ರಸಾದ್ ಕುಮಾರ್, ಸುಚರಿತ ಶೆಟ್ಟಿ, ವಿಶ್ವನಾಥ ಪ್ರಭು, ಧನಲಕ್ಷ್ಮೀ...
ಪುತ್ತೂರು

ಶಿವಾಜಿ ಮಹಾರಾಜರ ಆದರ್ಶವನ್ನು ಪಾಲನೇ ಮಾಡಬೇಕು: ತಿರುಮಲೇಶ್ವರ ಭಟ್-ಕಹಳೆ ನ್ಯೂಸ್

ಪುತ್ತೂರು:ಶಿವಾಜಿ ಮಹಾರಾಜರನ್ನು ಪಡೆದ ನಾವು ಮತ್ತು ನಮ್ಮ ದೇಶದ ಜನತೆ ಪುಣ್ಯವಂತರು. ಇಂತಹಾ ಮಹಾನ್ ಪುರುಷನ ಶೌರ್ಯ, ಜಾಣ್ಮೆ, ಸಾಹಸ, ದೇಶ ಪ್ರೇಮ ಅವರ ಜೀವನ ಚರಿತ್ರೆಯ ಇನ್ನೂ ಅನೇಕ ವಿಚಾರಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿಯೇ ಕೊಂಡಾಡುವ0ತಾಗಿದೆ ಎಂದು ಶ್ರೀರಾಮ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ತಿರುಮಲೇಶ್ವರ ಭಟ್ ಹೇಳಿದರು. ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ವತಿಯಿಂದ ನಡೆದ ಶಿವಾಜಿ ಮಹಾರಾಜನ ಜನ್ಮ ಸಂಸ್ಮರಣೆ ಕಾರ್ಯಕ್ರಮದಲ್ಲಿ...
ದಕ್ಷಿಣ ಕನ್ನಡಪುತ್ತೂರುವಾಣಿಜ್ಯಸುದ್ದಿ

ಫೆ.೨೦ ರಂದು `ಪುತ್ತೂರು ಸುದ್ದಿ ಚಾನೆಲ್’ ಲೋಕಾರ್ಪಣೆ ; ಲೋಕಲ್ ವೋಕಲ್ ಕಾರ್ಯಕ್ರಮಕ್ಕೆ ಚಾಲನೆ ಸುದ್ದಿ ವರ್ಷದ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನ – ಕಹಳೆ ನ್ಯೂಸ್

ಪುತ್ತೂರು: `ಪುತ್ತೂರು ಸುದ್ದಿ ಚಾನೆಲ್' ಲೋಕಾರ್ಪಣೆ, ಲೋಕಲ್ ವೋಕಲ್ ಕಾರ್ಯಕ್ರಮಕ್ಕೆ ಚಾಲನೆ, ಸುದ್ದಿ ವರ್ಷದ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನ ಸಹಿತ ವಿವಿಧ ಕಾರ್ಯಕ್ರಮಗಳು ಫೆ.೨೦ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ ೧೧.೩೦ಕ್ಕೆ ಪುತ್ತೂರು ದೇವಣ್ಣ ಕಿಣಿ ಕಟ್ಟಡದಲ್ಲಿರುವ ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಸುದ್ದಿ ಚಾನೆಲ್ ಕಛೇರಿ ಉದ್ಘಾಟನೆ ಮತ್ತು ಖ್ಯಾತ ಕಲಾವಿದರನ್ನೊಳಗೊಂಡ `ಅಂಬರ ಮರ್ಲೆರ್' ತುಳು ಹಾಸ್ಯ ಧಾರಾವಾಹಿಗೆ ಕರ್ನಾಟಕ ಸರಕಾರದ ಬಂದರು, ಮೀನುಗಾರಿಕೆ...
ಪುತ್ತೂರು

ಕೃಷಿಗೆ ಸಾವಯುವ ಗೊಬ್ಬರದ ಉಪಯೋಗ ಉತ್ತಮ; ಗಣಪತಿ ಭಟ್‍ಎಕ್ಕಡ್ಕ-ಕಹಳೆ ನ್ಯೂಸ್

ಪುತ್ತೂರು : ರಾಸಯನಿಕ ಕ್ರಿಮಿನಾಶಕಗಳ ಉಪಯೋಗದಿಂದ ರೈತ ಸ್ನೇಹಿ ಪ್ರಾಣಿಗಳಾದ ಎರೆಹುಳುಗಳು ನಾಶ ಹೊಂದುವುದರ ಜೊತೆಗೆ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಕೃಷಿ ಚಟುವಟಿಕೆಗೆ ರಾಸಾಯನಿಕದ ಬದಲು ಹಟ್ಟಿಗೊಬ್ಬರ ಹಾಗೂ ಸೂಟುಮಣ್ಣಿನ್ನು ಉಪಯೋಗಿಸುವುದು ಉತ್ತಮ. ಸಾವಯುವ ಕೃಷಿಯಿಂದ ಅನೇಕರಿಗೆ ಉತ್ತಮ ಫಲ ದೊರೆತಿದೆ. ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸುವುದರಿಂದ ಸಮಯ ಹಾಗೂ ಶಕ್ತಿಯ ಉಳಿತಾಯವಾಗುತ್ತದೆ. ಕೃಷಿ ಉಪಯೋಗಿ ಸವಲತ್ತುಗಳನ್ನು ಎಲ್ಲರೂ ಉಪಯೋಗಿಸಿಕೊಳ್ಳುವುದರ ಮೂಲಕ ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಪ್ರಗತಿಪರ ಕೃಷಿಕ...
ಬಂಟ್ವಾಳ

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಉರುವಾಲು ಎಂಬಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪೋಕ್ಸೊ ಪ್ರಕರಣದಡಿ ಆರೋಪಿಯ ಬಂಧನ-ಕಹಳೆ ನ್ಯೂಸ್

ಬಂಟ್ವಾಳ : ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಉರುವಾಲು ಎಂಬಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೊ ಪ್ರಕರಣದಡಿ ಆರೋಪಿಯನ್ನ ಬಂಧಿಸಲಾಗಿದೆ. ಸಮದ್ ನೆಕ್ಕಿಲ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಉರುವಾಲು ಗ್ರಾಮದ ಕುಪ್ಪೆಟ್ಟಿಯ ನೆಕ್ಕಿಲ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಬಾಲಕಿಯು ತನ್ನ ತಾಯಿ, ಅಜ್ಜಿ, ತಮ್ಮನ ಜೊತೆ ವಾಸ್ತವ್ಯವಿದ್ದು, ಕಳೆದ 3 ತಿಂಗಳ ಹಿಂದೆ ಬಾಡಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಸಮದ್...
1 795 796 797 798 799 873
Page 797 of 873