Tuesday, April 28, 2026

ಪ್ರಾದೇಶಿಕ

ಪುತ್ತೂರು

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ, ಅಂತರಂಗದ ಬೆಳಕು ದೇಶದ ಭವಿಷ್ಯವನ್ನು ಬೆಳಗಬೇಕು; ಯು.ಜಿ.ರಾಧ-ಕಹಳೆ ನ್ಯೂಸ್

ಪುತ್ತೂರು : ವಿದ್ಯಾರ್ಥಿ ಸಂಘಟನೆಗಳು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು. ವಿದ್ಯಾರ್ಥಿಗಳು ಬದುಕನ್ನು ಗೌರವಿಸುವ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು. ದೊರೆತ ಅವಕಾಶಗಳನ್ನು ಉಪಯೋಗಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವವನ್ನು ಪಡೆದುಕೊಳ್ಳಬೇಕು. ಅಂತರಂಗದ ಬೆಳಕು ದೇಶದ ಭವಿಷ್ಯವನ್ನು ಬೆಳಗುವಂತಾಗಬೇಕು ಎಂದು ಉಪ್ಪಿನಂಗಡಿ ಶ್ರೀ ರಾಮ ವಿದ್ಯಾಲಯದ ಸಂಚಾಲಕ ಯು.ಜಿ.ರಾಧ ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ 2020-21 ಸಾಲಿನ ವಿದ್ಯಾರ್ಥಿ ಸಂಘ, ಲಲಿತಾಕಲಾ, ವಿಜ್ಞಾನ, ವಾಣಿಜ್ಯ,...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಯಕ್ಷರಂಗ ಸಿಡಿಲಮರಿ, ಧೀಂಗಿಣ ವೀರ ಡಾ. ಶ್ರೀಧರ ಭಂಡಾರಿ ಪುತ್ತೂರು ಇನ್ನಿಲ್ಲ – ಕಹಳೆ ನ್ಯೂಸ್

ಪುತ್ತೂರು :ಫೆ 19 : ಯಕ್ಷಗಾನ ರಂಗದ ಪುಂಡು ವೇಷಧಾರಿ, ಹಿರಿಯ ಯಕ್ಷಗಾನ ಕಲಾವಿದ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಯಕ್ಷಲೋಕದ ಸಿಡಿಲಮರಿ ಎಂದೇ ಪ್ರಖ್ಯಾತಿಯನ್ನು ಗಳಿಸಿದ ಡಾ. ಶ್ರೀಧರ್ ಭಂಡಾರಿ (73 ವ) ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದರು. ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಅನಿಲ ಹಾಗೂ ಪುತ್ರ ದೇವಿ ಪ್ರಕಾಶ , ದೊಡ್ಡ ಸಂಖ್ಯೆಯ ಶಿಷ್ಯರನ್ನು ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು...
ಪುತ್ತೂರು

ಪುತ್ತೂರು ತಾಲೂಕಿನ ಹಾರಾಡಿ ಎಂಬಲ್ಲಿ ಬ್ಯಾಂಕ್ ಸಿಬ್ಬಂದಿಯಿಂದ ಮನೆ ಜಪ್ತಿ; ಮನೆ ಮಾಲಕಿ ಆತ್ಮಹತ್ಯೆ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ತಾಲೂಕಿನ ಹಾರಾಡಿ ಎಂಬಲ್ಲಿ ಬ್ಯಾಂಕ್ ಸಿಬ್ಬಂದಿ ಮನೆಯನ್ನು ಜಪ್ತಿ ಮಾಡಿದ್ದರಿಂದ ಮನನೊಂದು ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ರಘುವೀರ್ ಪ್ರಭು ಎಂಬವರ ಪತ್ನಿ ಪ್ರಾರ್ಥನಾ ಎಂದು ತಿಳಿದುಬಂದಿದೆ. ರಾಷ್ಟ್ರೀಕೃತ ಬ್ಯಾಂಕೊಂದರ ಸಿಬ್ಬಂದಿ ಮನೆ ಜಪ್ತಿ ಮಾಡಿ ಹೋಗಿದ್ದರು. ಬ್ಯಾಂಕ್ ಸಿಬ್ಬಂದಿ ಹೋದ ಬೆನ್ನಲ್ಲೇ ಪ್ರಾರ್ಥನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮರುಪಾವತಿ ಆಗಿಲ್ಲ ಎಂದು ಬ್ಯಾಂಕ್...
ಪುತ್ತೂರು

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ದಿವಂಗತ ನ್ಯಾ.ರಾಮಾಜೋಯಿಸ್‍ರಿಗೆ ನುಡಿ ನಮನ ಪ್ರಯತ್ನ ಪಟ್ಟರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು; ದು. ಗು. ಲಕ್ಷ್ಮಣ-ಕಹಳೆ ನ್ಯೂಸ್

ಪುತ್ತೂರು : ಜೀವನದಲ್ಲಿ ಪ್ರಯತ್ನ ಪಟ್ಟರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂಬುದಕ್ಕೆ ನ್ಯಾ.ರಾಮಾಜೋಯಿಸ್ ಅವರ ಜೀವನವೇ ಒಂದು ಉದಾಹರಣೆ. ರಾಮಾಜೋಯಿಸ್ ಅವರ ಇಚ್ಛಾಶಕ್ತಿ ನಮಗೆಲ್ಲ ಪ್ರೇರಣೆ ಎಂದು ಹೊಸದಿಗಂತ ದಿನಪತ್ರಿಕೆಯ ಹಿರಿಯ ಪತ್ರಕರ್ತರಾದ ದು.ಗು.ಲಕ್ಷ್ಮಣ ಅವರು ಹೇಳಿದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾನೂನು ಕಾಲೇಜಿನ ಸಹಯೋಗದಲ್ಲಿ ದಿನಾಂಕ 18/02/2021 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ದಿವಂಗತ ನ್ಯಾ.ರಾಮಾಜೋಯಿಸ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ನ್ಯಾಯಾವಾದಿಯಾಗಿ, ನ್ಯಾಯಮೂರ್ತಿಯಾಗಿ,...
ಬಂಟ್ವಾಳ

ಕುಕ್ಕಿಪಾಡಿಯಲ್ಲಿ ಸಂಪೂರ್ಣ ಸುರಕ್ಷಾ ವಿಮಾ ನೋಂದಣಿ ಅಭಿಯಾನ ಉದ್ಘಾಟನೆ-ಕಹಳೆ ನ್ಯೂಸ್

ಬಂಟ್ವಾಳ : ಕುಕ್ಕಿಪಾಡಿ ಒಕ್ಕೂಟ ಅಧ್ಯಕ್ಷೆ ಹಾಗೂ ಕುಕ್ಕಿಪಾಡಿ ಪಂಚಾಯತ್ ನೂತನ ಅಧ್ಯಕ್ಷೆ ಸುಜಾತ ರಾಜು ಪೂಜಾರಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಸಿದ್ಧಕಟ್ಟೆ ವಲಯದ 2021-2022ರ ಸಂಪೂರ್ಣ ಸುರಕ್ಷಾ ವಿಮಾ ನೋಂದಣಿ ಅಭಿಯಾನಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಧರ್ಮಸ್ಥಳ ಕ್ಷೇತ್ರದ ಜನಹಿತ ಕಾರ್ಯಕ್ರಮಗಳಲ್ಲಿ ಒಂದಾದ ಸಂಪೂರ್ಣ ಸುರಕ್ಷಾ ಕಾರ್ಯಕ್ರಮವು ಎಲ್ಲರ ಆರೋಗ್ಯಕ್ಕೂ ರಕ್ಷಾ ಕಚವವಾಗಲಿ ಎಂದು ಶುಭ ಹಾರೈಸಿದರು. ವಲಯ ಮೇಲ್ವಿಚಾರಕಿ ಶ್ರೀಮತಿ ಹರಿಣಾಕ್ಷಿ ರೈ...
ಬೆಳ್ತಂಗಡಿ

ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ತಾಳಿಪಾಡಿ-ಪಲಾರಗೋಳಿ, ಮರೋಡಿ ಇದರ ಪ್ರತಿಷ್ಠಾ ಕಲಶಾಭಿಷೇಕದಲ್ಲಿ ಭಾಗಿಯಾದ ಶಾಸಕ ಹರೀಶ್ ಪೂಂಜಾ-ಕಹಳೆ ನ್ಯೂಸ್

ಬೆಳ್ತಂಗಡಿ : ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮ ನಡೆಯಿತು. ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ತಾಳಿಪಾಡಿ - ಪಲಾರಗೋಳಿ, ಮರೋಡಿ ಇದರ ಪ್ರತಿಷ್ಠಾ ಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು....
ಪುತ್ತೂರು

ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯ; ರಾಮಚಂದ್ರ ಭಟ್-ಕಹಳೆ ನ್ಯೂಸ್

ಪುತ್ತೂರು : ರಕ್ತದಾನ ಮಹಾದಾನ ಎಂಬಂತೆ ಯಾವುದೇ ಕಾರಣಕ್ಕು ರಕ್ತದಾನ ಮಾಡುವಾಗ ಹೆದರಬಾರದು. ರಕ್ತವನ್ನು ನೀಡುವಾಗ ಆರೋಗ್ಯದ ಕಡೆ ಗಮನಹರಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದರಲ್ಲಿ ನಿರ್ದಿಷ್ಟವಾಗಿ ನಿಯಮಗಳನ್ನು ಪಾಲಿಸುವುದು ಒಳಿತು. ರೋಟರಿ ಸಂಸ್ಥೆ ಗಳು ಸಹಾಯದ ಅಗತ್ಯ ಇರುವವರಿಗೆ ಈ ರಕ್ತವನ್ನು ನೀಡುತ್ತದೆ ಎಂದು ರೋಟರಿ ಕ್ಲಬ್ ನ ಗವರ್ನರ್ ರೊ| ರಾಮಚಂದ್ರ ಭಟ್ ಹೇಳಿದರು. ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪುತ್ತೂರು ರೋಟರಿ ಕ್ಲಬ್ ಸಂಸ್ಥೆಯ ವತಿಯಿಂದ ಆಯೋಜಿಸಿದ...
ಪುತ್ತೂರು

ಪ್ರತಿಯೊಂದು ಕಾರ್ಯ ಸಾಧನೆಗೂ ಗುರಿ ಎಂಬುದು ಪ್ರಮುಖ ಅಂಶವಾಗಿರುತ್ತದೆ; ಪ್ರೊ| ವಂದನಾ ಶಂಕರ್-ಕಹಳೆ ನ್ಯೂಸ್

ಪುತ್ತೂರು : ಕಠಿಣ ಶ್ರಮದ ಜೊತೆಗೆ ಚುರುಕುತನ, ಬುದ್ಧಿವಂತಿಕೆ ಎಂಬುದು ಯಶಸ್ಸಿನ ಮೆಟ್ಟಿಲುಗಳು. ಅಷ್ಟೇ ಅಲ್ಲದೆ ಎಲ್ಲಾ ವ್ಯಕ್ತಿತ್ವದ ಜನರು ಗೆಲುವು ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಂದು ಕಾರ್ಯ ಸಾಧನೆಗೂ ಗುರಿ ಎಂಬುದು ಪ್ರಮುಖ ಅಂಶವಾಗಿರುತ್ತದೆ. ಜೀವನದಲ್ಲಿ ಪರಿಪೂರ್ಣತೆ ಹೊಂದಲು ಕೇಳುವ ತಾಳ್ಮೆ, ಸಂವಹನ ಕೌಶಲ್ಯ, ಏಕಾಗ್ರತೆ, ಶ್ರಮ, ನಾಯಕತ್ವ ಗುಣ, ಇವೆಲ್ಲವೂ ಇರಬೇಕಾಗುತ್ತದೆ ಎಂದು ಪ್ರೊ| ವಂದನಾ ಶಂಕರ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ...
1 796 797 798 799 800 872
Page 798 of 872