ಬಂಟ್ವಾಳ : ಇಲ್ಲಿನ ಬೋಳಂತೂರು ನಿವಾಸಿ, ಕಾಂಗ್ರೆಸ್ ಮುಖಂಡ ಬೋಳಂತೂರು ಚಂದ್ರಹಾಸ ಶೆಟ್ಟಿ (66) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಬೀಡಿ ಉದ್ಯಮಿಯಾಗಿ, ವೀರಕಂಭ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಬಿ.ಸಿ.ರೋಡು ಪೆÇಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸಮಾಜಮುಖಿ ಚಟುವಟಿಕೆಗಳಿಂದಲೇ ಗುರುತಿಸಿಕೊಂಡಿದ್ದರು....
ಬಂಟ್ವಾಳ : ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ರೂ 2 ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡು ಇಂದು ದೇವಿಗೆ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ. ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಗಂಟೆ 8.16ರ ಶುಭ ಸುಮುಹೂರ್ತ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಬ್ರಹ್ಮಕಲಶಾಭಿಷೇಕ ಮತ್ತು ಶ್ರೀ ಗಣಪತಿ, ಶ್ರೀ ಶಾಸ್ತಾರ, ಪರಿವಾರ ದೈವ,...
ಪುತ್ತೂರು : ಭಾರತೀಯ ವೈವಿಧ್ಯಮಯ ಕಲೆಗಳನ್ನು ಕಲಾಪ್ರಿಯರಿಗೆ ಉಣಬಡಿಸುವ ನಿಟ್ಟಿನಲ್ಲಿ ಕಳೆದ ೧೬ ವರ್ಷಗಳಿಂದ ಪ್ರಸಿದ್ಧ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನಗಳನ್ನು ಸಾರ್ವಜನಿಕರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಇದರ ಆಶ್ರಯದಲ್ಲಿ ಫೆ.೨೭ ರಿಂದ ಮಾ.೧ ರ ತನಕ ೩ ದಿನಗಳ ಕಲೋಪಾಸನಾ ಸಾಂಸ್ಕೃತಿಕ ಕಲಾ ಸಂಭ್ರಮ ರಿಸರ್ಚ್ ಸೆಂಟರ್‌ನ ಆವರಣದಲ್ಲಿ ಜರಗಲಿದೆ. ಈ ಕುರಿತು ಕಹಳೆ ನ್ಯೂಸ್...
ಪುತ್ತೂರು : ಮಕ್ಕಳಿಗೆ ವಿವಿಧ ರೀತಿಯ ಕೌಶಲ್ಯವನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು. ವಿದ್ಯಾರ್ಥಿಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಣಲು ಇಂತಹ ಕಾರ್ಯಕ್ರಮ ಪ್ರೇರಣೆ ನೀಡುತ್ತದೆ. ಜೀವನಕ್ಕೆ ಬೇಕಾದ ಶಿಕ್ಷಣ ಇಂದು ದೊರೆಯುತ್ತಿಲ್ಲ, ಆ ಕಾರಣಕ್ಕೆ ಸಮಸ್ಯೆಗಳನ್ನು ಪರಿಹರಿಸಲು ತಾಳ್ಮೆ ಇಲ್ಲದ ಪರಿಸ್ಥಿತಿ ಉದ್ಭವವಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ಶಿಕ್ಷಕ ಬಾಳಿಲ ವಿದ್ಯಾಬೋಧಿನಿ ಫ್ರೌಢ ಶಾಲೆಯ ನಿವೃತ ಮುಖ್ಯೋಪಾಧ್ಯಾಯ ಬಿ.ವಿ. ಶಗ್ರಿತ್ತಾಯ ಹೇಳಿದರು. ಇಲ್ಲಿನ ವಿವೇಕಾನಂದ ಕಾಲೇಜಿನ ಭವಿಷ್ ಘಟಕವನ್ನು ಉದ್ಘಾಟಿಸಿ...
ಪುತ್ತೂರು : ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಿಂಹವನ ಪಂಜಳ ನಿವಾಸಿ ಹರೀಶ್ ಕುಮಾರ್ ಇವರಿಗೆ ಜಾಗದ ಹಕ್ಕುಪತ್ರ ಪಡೆಯಲು (94 ಸಿ ಸಿ)ಶುಲ್ಕ ಪಾವತಿಸಲು ಆರ್ಥಿಕ ಸಹಾಯದ ಚೆಕ್ಕನ್ನು ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನೀಡಿದರು....
ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಬನ್ನೂರು ಗ್ರಾಮಾ ಪಂಚಾಯತ್‍ನ ಸಹಯೋಗದೊಂದಿಗೆ ಬನ್ನೂರಿನಲ್ಲಿ ಗ್ರಾಮ ಸಮೀಕ್ಷೆ ಕಾರ್ಯಕ್ರಮವು ನಡೆಯಿತು. ಪ್ರತಿ ಮನೆಗಳಿಗೆ ಭೇಟಿ ನೀಡಿ ಅಲ್ಲಿನ ನೀರಿನ ಉಪಲಭ್ಯತೆ, ಕೆರೆ ಬಾವಿಗಳ ನೀರಿನ ವ್ಯವಸ್ಥೆ, ನೀರು ಇಂಗುವ ಪ್ರಮಾಣದ ಬಗ್ಗೆ ಈ ಸಂದರ್ಭದಲ್ಲಿ ಮಾಹಿತಿಯನ್ನು ಕಲೆ ಹಾಕಲಾಯಿತು. ಈ ಸಂದರ್ಭದಲ್ಲಿ ಬನ್ನೂರು ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ಶ್ರೀಮತಿ ಜಯ, ಬನ್ನೂರು ಗ್ರಾಮ ವಿಕಾಸ...