Saturday, May 2, 2026

ಪ್ರಾದೇಶಿಕ

ಬೆಳ್ತಂಗಡಿ

ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ತಾಳಿಪಾಡಿ-ಪಲಾರಗೋಳಿ, ಮರೋಡಿ ಇದರ ಪ್ರತಿಷ್ಠಾ ಕಲಶಾಭಿಷೇಕದಲ್ಲಿ ಭಾಗಿಯಾದ ಶಾಸಕ ಹರೀಶ್ ಪೂಂಜಾ-ಕಹಳೆ ನ್ಯೂಸ್

ಬೆಳ್ತಂಗಡಿ : ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮ ನಡೆಯಿತು. ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ತಾಳಿಪಾಡಿ - ಪಲಾರಗೋಳಿ, ಮರೋಡಿ ಇದರ ಪ್ರತಿಷ್ಠಾ ಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು....
ಪುತ್ತೂರು

ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯ; ರಾಮಚಂದ್ರ ಭಟ್-ಕಹಳೆ ನ್ಯೂಸ್

ಪುತ್ತೂರು : ರಕ್ತದಾನ ಮಹಾದಾನ ಎಂಬಂತೆ ಯಾವುದೇ ಕಾರಣಕ್ಕು ರಕ್ತದಾನ ಮಾಡುವಾಗ ಹೆದರಬಾರದು. ರಕ್ತವನ್ನು ನೀಡುವಾಗ ಆರೋಗ್ಯದ ಕಡೆ ಗಮನಹರಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದರಲ್ಲಿ ನಿರ್ದಿಷ್ಟವಾಗಿ ನಿಯಮಗಳನ್ನು ಪಾಲಿಸುವುದು ಒಳಿತು. ರೋಟರಿ ಸಂಸ್ಥೆ ಗಳು ಸಹಾಯದ ಅಗತ್ಯ ಇರುವವರಿಗೆ ಈ ರಕ್ತವನ್ನು ನೀಡುತ್ತದೆ ಎಂದು ರೋಟರಿ ಕ್ಲಬ್ ನ ಗವರ್ನರ್ ರೊ| ರಾಮಚಂದ್ರ ಭಟ್ ಹೇಳಿದರು. ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪುತ್ತೂರು ರೋಟರಿ ಕ್ಲಬ್ ಸಂಸ್ಥೆಯ ವತಿಯಿಂದ ಆಯೋಜಿಸಿದ...
ಪುತ್ತೂರು

ಪ್ರತಿಯೊಂದು ಕಾರ್ಯ ಸಾಧನೆಗೂ ಗುರಿ ಎಂಬುದು ಪ್ರಮುಖ ಅಂಶವಾಗಿರುತ್ತದೆ; ಪ್ರೊ| ವಂದನಾ ಶಂಕರ್-ಕಹಳೆ ನ್ಯೂಸ್

ಪುತ್ತೂರು : ಕಠಿಣ ಶ್ರಮದ ಜೊತೆಗೆ ಚುರುಕುತನ, ಬುದ್ಧಿವಂತಿಕೆ ಎಂಬುದು ಯಶಸ್ಸಿನ ಮೆಟ್ಟಿಲುಗಳು. ಅಷ್ಟೇ ಅಲ್ಲದೆ ಎಲ್ಲಾ ವ್ಯಕ್ತಿತ್ವದ ಜನರು ಗೆಲುವು ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಂದು ಕಾರ್ಯ ಸಾಧನೆಗೂ ಗುರಿ ಎಂಬುದು ಪ್ರಮುಖ ಅಂಶವಾಗಿರುತ್ತದೆ. ಜೀವನದಲ್ಲಿ ಪರಿಪೂರ್ಣತೆ ಹೊಂದಲು ಕೇಳುವ ತಾಳ್ಮೆ, ಸಂವಹನ ಕೌಶಲ್ಯ, ಏಕಾಗ್ರತೆ, ಶ್ರಮ, ನಾಯಕತ್ವ ಗುಣ, ಇವೆಲ್ಲವೂ ಇರಬೇಕಾಗುತ್ತದೆ ಎಂದು ಪ್ರೊ| ವಂದನಾ ಶಂಕರ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ...
ಪುತ್ತೂರು

ದೇಶದಾದ್ಯಂತ ಎನ್.ಸಿ.ಸಿ ಕಡ್ಡಾಯವಾಗಬೇಕು; ಕ್ಯಾ. ರಜನೀಶ್ ಲೈಂಕಜೆ-ಕಹಳೆ ನ್ಯೂಸ್

ಪುತ್ತೂರು : ಭಾರತೀಯ ಸೇನೆಯಲ್ಲಿ ಸಾಕಷ್ಟು ಅವಕಾಶಗಳಿರುತ್ತವೆ. ಸೇನೆಗೆ ಸೇರ ಬಯಸುವವರು ತನ್ನ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಯೋಚಿಸದೆ ದೇಶದ ಬಗ್ಗೆ ಯೋಚಿಸಬೇಕಾಗುತ್ತದೆ. ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ಸಾಧಿಸಲು ಸೇನೆ ಸಹಾಯಕವಾಗುತ್ತದೆ. ಸೈನಿಕ ಎನ್ನುವುದು ಉದ್ಯೋಗ ಎಂಬುದಕ್ಕಿಂತ ಸೇವೆ ಎಂದೇ ಪರಿಗಣಿತವಾಗಿದೆ. ಸೇನೆಗೆ ಸೇರಲು ಅಂಕಗಳು ಮುಖ್ಯವಲ್ಲ, ಮನೋಸ್ಥೈರ್ಯ ಪ್ರಮುಖವಾಗುತ್ತದೆ ಎಂದು ಭಾರತೀಯ ಸೇನೆಯ ಕ್ಯಾ. ರಜನೀಶ್ ಲೈಂಕಜೆ ಅವರು ಹೇಳಿದರು. ವಿವೇಕಾನಂದ ಪದವಿ ಕಾಲೇಜಿನ ಐ.ಕ್ಯೂ.ಎ.ಸಿ. ಘಟಕ,...
ಪುತ್ತೂರು

ಅಂಬಿಕಾ ಪದವಿ ಕಾಲೇಜಿನಲ್ಲಿ ನ್ಯಾ.ಮೂ.ರಾಮ ಜೋಯಿಸ್ ಅವರಿಗೆ ಶ್ರದ್ಧಾಂಜಲಿ ರಾಮ ಜೋಯಿಸ್ ದೇಶ ಕಂಡ ಅತ್ಯುನ್ನತ ವ್ಯಕ್ತಿತ್ವ ; ಸುಬ್ರಹ್ಮಣ್ಯ ನಟ್ಟೋಜ-ಕಹಳೆ ನ್ಯೂಸ್

ಪುತ್ತೂರು : ನ್ಯಾಯಮೂರ್ತಿ ರಾಮ ಜೋಯಿಸ್ ಅವರು ದೇಶ ಕಂಡ ಅತ್ಯುನ್ನತ ವ್ಯಕ್ತಿತ್ವ. ಭಾರತೀಯ ಪರಂಪರೆ, ಸಂಸ್ಕøತಿ, ಆಚಾರ ವಿಚಾರಗಳ ಬಗೆಗೆ ಅವರಿಗೆ ಅಪಾರವಾದ ಗೌರವವಿತ್ತು. ಆ ನೆಲೆಯಿಂದಲೇ ನ್ಯಾಯತೀರ್ಮಾನ ಮಾಡುತ್ತಿದ್ದರು. ಅಂತಹವರು ಅಗಲಿರುವುದು ದೇಶಕ್ಕಾದ ಬಹುದೊಡ್ಡ ನಷ್ಟ ಎಂದು ಪುತ್ತೂರಿನ ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಕಾಲೇಜಿನಲ್ಲಿ ನಿವೃತ್ತ ನ್ಯಾಯಮೂರ್ತಿ ರಾಮ...
ಬಂಟ್ವಾಳ

ಬಂಟ್ವಾಳ: 20ರಂದು ಕನ್ನಡ ಭವನ, ರಂಗ ಮಂದಿರ ಲೋಕಾರ್ಪಣೆ; 21ರಂದು ತಾಲೂಕು ಮಟ್ಟದ 21ನೇ ಕನ್ನಡ ಸಾಹಿತ್ಯ ಸಮ್ಮೇಳನ-ಕಹಳೆ ನ್ಯೂಸ್

ಬಂಟ್ವಾಳ : ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕುಂಜೆಯಲ್ಲಿ ರೂ 1 ಕೋಟಿ ವೆಚ್ಚದಲ್ಲಿ ನಿರ್ಮಾಣಿಸಲಾದ ನೂತನ 'ಕನ್ನಡ ಭವನ' ಮತ್ತು ಸಾರ್ವಜನಿಕ ರಂಗಮಂದಿರ ಇದೇ 21ರಂದು ಲೋಕಾರ್ಪಣೆಗೊಳ್ಳಲಿದ್ದು, 21ರಂದು ತಾಲ್ಲೂಕು ಮಟ್ಟದ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಅವರು ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿರಿಯ ಸಾಹಿತಿ ಡಾ.ಸುರೇಶ ನೆಗಳಗುಳಿ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನ ಯಶಸ್ವಿಗೊಳಿಸಲು...
ಪುತ್ತೂರು

ಜೀವನದಲ್ಲಿ ಧನಾತ್ಮಕ ಯೋಚನೆಗಳಿದ್ದರೆ ಯಶಸ್ಸು ಕಾಣಲು ಸಾಧ್ಯ; ಪ್ರೊ. ಸೀಮಾ ಪ್ರಭು-ಕಹಳೆ ನ್ಯೂಸ್

ಪುತ್ತೂರು : ದೇಶವನ್ನು ಬೆಳೆಸುವ ಕೆಲಸ ರಾಷ್ಟ್ರೀಯ ಸೇವಾ ಯೋಜನೆ ಮಾಡುತ್ತದೆ. ಆದ್ದರಿಂದ ಸಮಾಜ ಸೇವೆ ಮಾಡುವ ಮನೋಭಾವ ಸ್ವಯಂ ಸೇವಕರಲ್ಲಿ ಇರಬೇಕು. ಒಂದು ಕಾರ್ಯಕ್ರಮವನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂದು ಎನ್.ಎಸ್.ಎಸ್. ತಿಳಿಸುತ್ತದೆ, ಜೊತೆಗೆ ನಾನು ನನ್ನದು ಎನ್ನದೆ ಗುಂಪಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುವುದನ್ನು ಕಲಿಸುತ್ತದೆ. ಧನಾತ್ಮಕ ಚಿಂತನೆಗಳೊಂದಿಗೆ ನಿಯಮ ಪಾಲಿಸಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಉತ್ತಮ ಎಂದು ಮಂಗಳೂರು ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ....
ಪುತ್ತೂರು

ವಿದ್ಯಾರ್ಥಿಗಳಿಗೆ ತಂತ್ರಜ್ಞಾನಗಳ ಬಗ್ಗೆ ಅರಿವು ಇರಬೇಕು; ಲಕ್ಷ್ಮೀ ವಿ. ಭಟ್-ಕಹಳೆ ನ್ಯೂಸ್

ಪುತ್ತೂರು : ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳು ಆಗದೆ, ಇತರ ತಂತ್ರಜ್ಞಾನಗಳನ್ನು ಅಧ್ಯಯನ ಮಾಡುತ್ತಿರಬೇಕು. ಇದರಿಂದ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗುತ್ತದೆ. ಅಲ್ಲದೆ ಅದಕ್ಕೆ ಪೂರಕವಾದ ಯೋಜನೆಗಳನ್ನು ತಯಾರಿಸಿ, ಕಾರ್ಯರೂಪಕ್ಕೆ ತರುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ವಿ. ಭಟ್ ಹೇಳಿದರು. ಕಾಲೇಜಿನ ವ್ಯವಹಾರ ಆಡಳಿತ ಇಲಾಖೆ ಮತ್ತು ಐಕ್ಯುಎಸಿ ಘಟಕಗಳ ಆಶ್ರಯದಲ್ಲಿ ಆಯೋಜಿಸಿದ ‘ಬೃಹತ್ ಮುಕ್ತ ಆನ್ಲೈನ್...
1 797 798 799 800 801 873
Page 799 of 873