ಧರ್ಮಸ್ಥಳದ ಧರ್ಮದರ್ಶಿಗಳ ದೂರದರ್ಶಿತ್ವ ಎಸ್ ಕೆ ಡಿ ರ್ ಪಿ ಯಿಂದ ಪುನರ್ ಜೀವ ಪಡೆದ ಸಾವಿರ ಕೆರೆ ಗಳ ಕಾರ್ಯಕ್ರಮ ವಿಶ್ವ ದಲ್ಲಿಯೇ ಶ್ರೇಷ್ಠ ಕೆಲಸ -ಕಹಳೆ ನ್ಯೂಸ್
ಕಾಪು : ಪಡುಬೆಳ್ಳೆ ಪಾಂಬೂರು ಬಳಿಸುಮಾರು 2.90ಎಕ್ರೆ ಪ್ರದೇಶದಲ್ಲಿ ಹರಡಿರುವ ಕುರುಡಾಯಿ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ತಾಲೂಕು, ಕೆರೆ ಅಭಿವೃದ್ದಿ ಸಮಿತಿ ಕುರುಡಾಯಿ ಕೆರೆ ಹಾಗೂ ಬೆಳ್ಳೆಗ್ರಾ.ಪಂ.ನ ಸಹಯೋಗದಲ್ಲಿ ಗ್ರಾಮಾಭಿವೃದ್ಧಿಯೋಜನೆಯ ನಮ್ಮೂರು ನಮ್ಮ ಕೆರೆ ಕಾಠ್ಯಕ್ರಮದಡಿ ಹೂಳೆತ್ತುವ ಮೂಲಕ ಪುನರುತ್ಥಾನಗೊಳಿಸಿದ್ದು, ಕುರುಡಾಯಿ ಕೆರೆ ಪ್ರದೇಶಕ್ಕೆ ಯುನಿಸೆಫ್ ಸಂಸ್ಥೆಯ ಅಧಿಕಾರಿ ನರಸಿಂಹ ರೆಡ್ಡಿ. ಭೇಟಿ ನೀಡಿದರು. ಅವರು ಮಾತನಾಡುತ್ತ ರಾಜ್ಯದಲ್ಲಿ ಈಗಾಗಲೇ 950 ಕ್ಕೂ ಹೆಚ್ಚು...







