Recent Posts

Saturday, April 25, 2026
ಉಡುಪಿಕಾಪುಜಿಲ್ಲೆಸುದ್ದಿ

ಧರ್ಮಸ್ಥಳದ ಧರ್ಮದರ್ಶಿಗಳ ದೂರದರ್ಶಿತ್ವ ಎಸ್ ಕೆ ಡಿ ರ್ ಪಿ ಯಿಂದ ಪುನರ್ ಜೀವ ಪಡೆದ ಸಾವಿರ ಕೆರೆ ಗಳ ಕಾರ್ಯಕ್ರಮ ವಿಶ್ವ ದಲ್ಲಿಯೇ ಶ್ರೇಷ್ಠ ಕೆಲಸ -ಕಹಳೆ ನ್ಯೂಸ್

ಕಾಪು : ಪಡುಬೆಳ್ಳೆ ಪಾಂಬೂರು ಬಳಿಸುಮಾರು 2.90ಎಕ್ರೆ ಪ್ರದೇಶದಲ್ಲಿ ಹರಡಿರುವ ಕುರುಡಾಯಿ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ತಾಲೂಕು, ಕೆರೆ ಅಭಿವೃದ್ದಿ ಸಮಿತಿ ಕುರುಡಾಯಿ ಕೆರೆ ಹಾಗೂ ಬೆಳ್ಳೆಗ್ರಾ.ಪಂ.ನ ಸಹಯೋಗದಲ್ಲಿ ಗ್ರಾಮಾಭಿವೃದ್ಧಿಯೋಜನೆಯ ನಮ್ಮೂರು ನಮ್ಮ ಕೆರೆ ಕಾಠ್ಯಕ್ರಮದಡಿ ಹೂಳೆತ್ತುವ ಮೂಲಕ ಪುನರುತ್ಥಾನಗೊಳಿಸಿದ್ದು, ಕುರುಡಾಯಿ ಕೆರೆ ಪ್ರದೇಶಕ್ಕೆ ಯುನಿಸೆಫ್‌ ಸಂಸ್ಥೆಯ ಅಧಿಕಾರಿ ನರಸಿಂಹ ರೆಡ್ಡಿ. ಭೇಟಿ ನೀಡಿದರು.

ಅವರು ಮಾತನಾಡುತ್ತ ರಾಜ್ಯದಲ್ಲಿ ಈಗಾಗಲೇ 950 ಕ್ಕೂ ಹೆಚ್ಚು ಕೆರೆಗಳಿಗೆ ಪುನರ್ಜೀವ ನೀಡಿರುವುದು ಎಷ್ಟು ಲಕ್ಷ ಎಕರೆ ಕೃಷಿ ಭೂಮಿ ತೋಟಗಳಿಗೆ ಕೋಟ್ಯಂತರ ಜನರ ಕುಡಿಯುವ ನೀರು, ಭೂಮಿಯ ಜಲ ಮಟ್ಟದಲ್ಲಿ ಆದ ಕ್ರಾಂತಿ, ಪಶು ಪಕ್ಷಿ ಪ್ರಾಣಿಗಳಿಗೆ ಆದ ಉಪಕಾರ ಹಸಿರು ಕ್ರಾಂತಿ, ಪೂಜ್ಯರ ಸಂಸ್ಥೆ ಯೊಂದು ಮಾಡಿದ ವಿಶ್ವದ ಮೊದಲ ಶ್ರೇಷ್ಠ ಕಾರ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೆರೆ ಇತಿಹಾಸ, ಊರಿಗೆ ಕುಡಿಯುವ ನೀರಿನ ಬಳಕೆ, ಕೃಷಿಗೆ ನೀರಿನ ಬಳಕೆ, ಅಂತರ್ಜಲ ಮಟ್ಟ ಸುಧಾರಣೆ ಬಗ್ಗೆ ಊರಿನ ರೈತರು ಸುತ್ತಲಿನ ಪರಿಸರದ ಜನರು ಮತ್ತು . ಗ್ರಾಮಸ್ಥರಲ್ಲಿ ಅಭಿಪ್ರಾಯ ಸಂಗ್ರಹಿಸಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕಚೇರಿ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಮಹಾಬಲ ಕುಲಾಲ್, ರಾಜ್ಯ ಜನಜಾಗೃತಿ ವೇದಿಕೆಯನಿಕಟ ಪೂರ್ವ ಅಧ್ಯಕ್ಷ ದೇವದಾಸ್‌ ಹೆಬ್ಬಾ‌ರ್, ಬೆಳ್ಳೆ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಶಶಿಧರ ವಾಗ್ಗೆ ಕುರುಡಾಯಿ ಕೆರೆ, ಸಮಿತಿ ಅಧ್ಯಕ್ಷಹರೀಶ್ ಶೆಟ್ಟಿಸದಸ್ಯರಾದ ಸ್ಯಾಟ್ಸನ್, ಭೋಜ ಕುಲಾಲ್, ಪ್ರೇಮಾ, ಕೇಂದ್ರ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಯೋಜನಾಧಿಕಾರಿ ಮಮತಾ ಶೆಟ್ಟಿ ಕೆರೆಯ ಎಂಜಿನಿಯ‌ರ್ ಪ್ರದೀಪ್, ಸುರೇಶ್ ಡಿ’ಸೋಜಾ, ಮೇಲ್ವಿಚಾರಕರಾದ ಗೀತಾ, ದೇವೇಂದ್ರ ಮತ್ತು ಗ್ರಾಮಸ್ಥರು ಹಾಗೂ ಊರಿನ ರೈತ ಮಹಿಳೆಯರು ಉಪಸ್ಥಿತರಿದ್ದರು.