ಉಜಿರೆ ಬಸ್‍ನಲ್ಲಿ ಹೃದಯಾಘಾತ ; ಸಿಬ್ಬಂದಿ ಮತ್ತು ಸಹಪ್ರಯಾಣಿಕರ ನಿರ್ಲಕ್ಷ್ಯಕ್ಕೆ ಬಲಿಯಾಯಿತು ವ್ಯಕ್ತಿಯ ಜೀವ-ಕಹಳೆ ನ್ಯೂಸ್
ಬೆಳ್ತಂಗಡಿ : ಬಸ್ಸಿನಲ್ಲೇ ಹೃದಯಾಘಾತವಾಗಿದ್ದರೂ ಬಸ್ಸಿನಿಂದ ಇಳಿಸಿ ಮುಂದೆ ಸಾಗಿದ ಬಸ್‍ನ ಚಾಲಕ ನಿರ್ವಾಹಕ ಮತ್ತು ಸಹಪ್ರಯಾಣಿಕರ ಅಮಾನವೀಯತೆಗೆ ಒಂದು ಜೀವ ಬಲಿಯಾದ ಘಟನೆ ಉಜಿರೆಯಲ್ಲಿ ನಡೆದಿದೆ. ಉಜಿರೆಯ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಮಗಳನ್ನು ಭೇಟಿಯಾಗಲು ಹರಿಯಾಣದಿಂದ ಉಜಿರೆಗೆ ಆಗಮಿಸಿದ್ದ ವ್ಯಕ್ತಿ ವಾಪಸ್ಸು ತೆರಳಲು ಉಜಿರೆಯಲ್ಲಿ ಬಸ್ಸಿನಲ್ಲಿ ಕೂತ ಸಂದರ್ಭ ಏಕಾಏಕಿ ಕುಸಿದು ಬಿದ್ದಿದ್ದಾರೆ. ಬಸ್ಸಿನಲ್ಲಿದ್ದ ಸಹಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಇವರನ್ನು ಹಾಗೆಯೇ ಬಸ್ಸಿನಿಂದ ಕೆಳಗೆ ಇಳಿಸಿ ಉಜಿರೆಯ ಬಸ್ಟ್ಯಾಂಡಿನಲ್ಲಿ...







